ರಾಜ್ಯದಲ್ಲಿ 18 ಲಕ್ಷ ಪ್ರಕರಣಗಳು ವಿಲೇವಾರಿಗೆ ಬಾಕಿ; ಕ್ರಿಮಿನಲ್‌ ದಾವೆಗಳದ್ದೇ ಮೇಲುಗೈ

ದೇಶಾದ್ಯಂತ 4,05,11,118 ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ. ಇವುಗಳಲ್ಲಿ 2,97,98,542 ಕ್ರಿಮಿನಲ್‌ ಮತ್ತು 1,07,12,576 ಸಿವಿಲ್‌ ದಾವೆಗಳು ಸೇರಿವೆ.
Pending cases

Pending cases

Published on

ರಾಜ್ಯದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ 18,20,968 ಪ್ರಕರಣಗಳು ವರ್ಷಾಂತ್ಯಕ್ಕೆ ವಿಲೇವಾರಿಗೆ ಬಾಕಿ ಉಳಿದಿವೆ. ಇದರಲ್ಲಿ 9,54,076 ಕ್ರಿಮಿನಲ್‌ ಮತ್ತು 8,66,892 ಸಿವಿಲ್‌ ದಾವೆಗಳು ಸೇರಿವೆ ಎಂಬುದು ರಾಷ್ಟ್ರೀಯ ನ್ಯಾಯಿಕ ದತ್ತಾಂಶ ಗ್ರಿಡ್‌ನಿಂದ (ಎನ್‌ಜೆಡಿಜಿ) ತಿಳಿದು ಬಂದಿದೆ.

ಕಳೆದ ತಿಂಗಳು 46,225 ಕ್ರಿಮಿನಲ್‌ ಹಾಗೂ 22,166 ಸಿವಿಲ್‌ ಸೇರಿದಂತೆ 68,391 ಮೊಕದ್ದಮೆಗಳು ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಂಡಿವೆ.

ಒಟ್ಟು ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿ 1,86,927 ಸಿವಿಲ್‌ ಮತ್ತು 44,510 ಕ್ರಿಮಿನಲ್‌ ದಾವೆಗಳು ಸೇರಿದಂತೆ 2,31,437 ಪ್ರಕರಣಗಳನ್ನು ಹಿರಿಯ ನಾಗರಿಕರು ದಾಖಲಿಸಿದ್ದಾರೆ. ಮಹಿಳೆಯರು 2,16,238 ಮೊಕದ್ದಮೆ ದಾಖಲಿಸಿದ್ದು, ಇವುಗಳಲ್ಲಿ 1,55,816 ಸಿವಿಲ್‌ ಮತ್ತು 60,422 ಕ್ರಿಮಿನಲ್‌ ಪ್ರಕರಣ ಸೇರಿವೆ.

ಕಳೆದ ಒಂದು ವರ್ಷದಲ್ಲಿ 4,35,196 ಕ್ರಿಮಿನಲ್‌ ಮತ್ತು 3,59,981 ಸಿವಿಲ್‌ ದಾವೆಗಳು ಸೇರಿದಂತೆ ಒಟ್ಟು 7,95,177 ಪ್ರಕರಣದ ದಾಖಲಾಗಿವೆ. ಒಂದರಿಂದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 5,39,300 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 2,84,552 ಕ್ರಿಮಿನಲ್‌ ಮತ್ತು 2,54,748 ಸಿವಿಲ್‌ ಪ್ರಕರಣಗಳು ಸೇರಿವೆ.

ಮೂರರಿಂದ ಐದು ವರ್ಷಗಳ ಹಿಂದೆ ದಾಖಲಾದ 2,53,738 ದಾವೆ ಹಾಗೂ ಐದರಿಂದ ಹತ್ತು ವರ್ಷಗಳ ಹಿಂದೆ ದಾಖಲಾಗಿರುವ 1,98,358 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ.

Also Read
ಕರ್ನಾಟಕ ಹೈಕೋರ್ಟ್‌ನಲ್ಲಿ ವರ್ಷಾಂತ್ಯಕ್ಕೆ 2.66 ಲಕ್ಷ ಪ್ರಕರಣ ವಿಲೇವಾರಿಗೆ ಬಾಕಿ, ಮಹಿಳೆಯರಿಂದ 1,389 ದಾವೆ ದಾಖಲು

ಕರ್ನಾಟಕ ಹೈಕೋರ್ಟ್‌ನಲ್ಲಿ ವರ್ಷಾಂತ್ಯಕ್ಕೆ ಒಟ್ಟು 2,66,895 ಪ್ರಕರಣಗಳು ಬಾಕಿ ಉಳಿದಿವೆ. ಇದರಲ್ಲಿ 2,26,735 ಸಿವಿಲ್‌ ಮತ್ತು 40,160 ಕ್ರಿಮಿನಲ್‌ ಪ್ರಕರಣಗಳು ಸೇರಿವೆ. ವಿವಿಧ ಜಿಲ್ಲೆಗಳ ಬಾಕಿ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನವಿದ್ದು, ಬೆಳಗಾವಿ ಜಿಲ್ಲೆ ನಂತರದ ಸ್ಥಾನದಲ್ಲಿದೆ.

ದೇಶಾದ್ಯಂತ 4,05,11,118 ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ. ಇವುಗಳಲ್ಲಿ 2,97,98,542 ಕ್ರಿಮಿನಲ್‌ ಮತ್ತು 1,07,12,576 ಸಿವಿಲ್‌ ದಾವೆಗಳು ಸೇರಿವೆ. ಕಳೆದ ಒಂದು ವರ್ಷದಲ್ಲಿ ರಾಷ್ಟ್ರಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ 3,12,97,297 ಪ್ರಕರಣ ದಾಖಲಾಗಿದ್ದು, ಇವುಗಳಲ್ಲಿ 2,30,36,695 ಕ್ರಿಮಿನಲ್‌ ಮತ್ತು 82,60,602 ಸಿವಿಲ್‌ ಪ್ರಕರಣ ಸೇರಿವೆ.

Kannada Bar & Bench
kannada.barandbench.com