ಪರಮ್ ಬೀರ್ ಸಿಂಗ್ ಎಲ್ಲಿದ್ದೀರಿ? ಉತ್ತರಿಸುವವರೆಗೂ ಪ್ರಕರಣದ ವಿಚಾರಣೆ ಮಾಡುವುದಿಲ್ಲ: ಸುಪ್ರೀಂಕೋರ್ಟ್

ನ್ಯಾಯಾಲಯಕ್ಕೆ ಮನವಿಯನ್ನು ವಕೀಲರ ಮೂಲಕ ಸಲ್ಲಿಸಲಾಗುತ್ತಿದೆಯೇ ವಿನಾ ಅವರೆಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದರೇಶ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
Param Bir Singh, Supreme Court
Param Bir Singh, Supreme Court
Published on

ತಲೆ ಮರೆಸಿಕೊಂಡಿರುವ ಕಾರಣಕ್ಕೆ 'ಘೋಷಿತ ಅಪರಾಧಿ' ಎಂದು ಪರಿಗಣಿಸಲ್ಪಟ್ಟಿರುವ ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್‌ಬೀರ್‌ ಸಿಂಗ್ ಅವರು ತನ್ನ ಇರುವಿಕೆಯನ್ನು ತಿಳಿಸುವವರೆಗೂ ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವ ತನಿಖೆ ಪ್ರಶ್ನಿಸಿರುವ ಅವರ ಅರ್ಜಿಯ ವಿಚಾರಣೆಯನ್ನು ನಡೆಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ನ್ಯಾಯಾಲಯಕ್ಕೆ ಮನವಿಯನ್ನು ವಕೀಲರ ಮೂಲಕ ಸಲ್ಲಿಸಲಾಗುತ್ತಿದೆಯೇ ವಿನಾ ಅವರೆಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಹೀಗಾಗಿ ಅರ್ಜಿ ಆಲಿಸುವುದಿಲ್ಲ ಮತ್ತು ಯಾವುದೇ ರಕ್ಷಣೆ ನೀಡುವುದಿಲ್ಲ ಎಂದು ಸಿಂಗ್‌ ಪರ ಹಾಜರಿದ್ದ ವಕೀಲರಿಗೆ ಪೀಠ ಸ್ಪಷ್ಟಪಡಿಸಿತು. ಬಳಿಕ ಸೋಮವಾರಕ್ಕೆ ಪ್ರಕರಣ ಮುಂದೂಡಿತು.

Also Read
ಕೋಲಾಹಲಕ್ಕೆ ಕಾರಣವಾದ‌ ಪರಮ್ ಬೀರ್ ಸಿಂಗ್ ಪತ್ರ: ಅಧಿಕೃತತೆ ಪ್ರಶ್ನಿಸಿದ ಮುಖ್ಯಮಂತ್ರಿ ಉದ್ಧವ್‌ ಕಚೇರಿ

ಮಹಾರಾಷ್ಟ್ರ ಸರ್ಕಾರ ತನ್ನ ವಿರುದ್ಧ ಆರಂಭಿಸಿರುವ ಎರಡು ಪ್ರಕರಣಗಳ ತನಿಖೆ ಪ್ರಶ್ನಿಸಿ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್‌ ತೀರ್ಪಿನ ವಿರುದ್ಧದ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಸಿಂಗ್ ಕಳೆದ ಹಲವು ವಾರಗಳಿಂದ ತಲೆಮರೆಸಿಕೊಂಡಿದ್ದು, ಬುಧವಾರ ಮುಂಬೈ ನ್ಯಾಯಾಲಯವು ಅಧಿಕಾರಿಯನ್ನು 'ಘೋಷಿತ ಅಪರಾಧಿ' ಎಂದು ಪರಿಗಣಿಸಲು ಪೊಲೀಸರಿಗೆ ಅನುಮತಿಸಿತ್ತು.

Kannada Bar & Bench
kannada.barandbench.com