ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯ ಕಾಯಿದೆ ಬದಲಿಸುವ ಮೂರು ಮಸೂದೆಗಳಿಗೆ ಸಂಸತ್ ಅಂಗೀಕಾರ

ಈ ಮೂರು ಮಸೂದೆಗಳನ್ನು ಮೊದಲು ಆಗಸ್ಟ್ 11ರಂದು ಲೋಕಸಭೆಯಲ್ಲಿ ಮಂಡಿಸಿ ಡಿಸೆಂಬರ್ 20ರಂದು ಅಂಗೀಕರಿಸಲಾಗಿತ್ತು. ರಾಜ್ಯಸಭೆ ಗುರುವಾರ ಇದನ್ನು ಅಂಗೀಕರಿಸಿತು.
ಕ್ರಿಮಿನಲ್ ಕಾನೂನುಗಳು
ಕ್ರಿಮಿನಲ್ ಕಾನೂನುಗಳು

ಮೂರು ಕ್ರಿಮಿನಲ್ ಕಾನೂನು ತಿದ್ದುಪಡಿ ಮಸೂದೆಗಳನ್ನು ಲೋಕಸಭೆ ಅಂಗೀಕರಿಸಿದ ಒಂದು ದಿನದ ನಂತರ ಅಂದರೆ ಗುರುವಾರ ರಾಜ್ಯಸಭೆ ಅಂಗೀಕರಿಸಿತು. ಇದರೊಂದಿಗೆ ಮೂರು ಮಸೂದೆಗಳಿಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಂತಾಗಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸಲು ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ತರಲಾಗುತ್ತಿದೆ.

ಬ್ರಿಜ್ ಲಾಲ್ ಅವರ ನೇತೃತ್ವದ ಸಂಸದೀಯ ಸಮಿತಿಗೆ ಉಲ್ಲೇಖಿಸುವ ಮೊದಲು ಈ ಮೂರು ಮಸೂದೆಗಳನ್ನು ಆಗಸ್ಟ್ 11ರಂದು ಲೋಕಸಭೆಯಲ್ಲಿ ಭಾರತೀಯ ನ್ಯಾಯ (ಎರಡನೇ) ಸಂಹಿತಾಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ(ಎರಡನೇ) ಮಸೂದೆ ಎಂಬ ಹೆಸರಿನಲ್ಲಿ ಮಂಡಿಸಲಾಯಿತು. ಸಮಿತಿ ನವೆಂಬರ್ 10ರಂದು ವರದಿ ಸಲ್ಲಿಸಿತು.

ಡಿಸೆಂಬರ್ 11ರಂದು, ಸಮಿತಿಯ ಸಲಹೆಗಳ ಪ್ರಕಾರ ತಿದ್ದುಪಡಿ ತರುವ ಬದಲು, ಮಸೂದೆಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.

ಮರುದಿನ, ಡಿಸೆಂಬರ್ 12ರಂದು, ಗೃಹ ಸಚಿವ ಅಮಿತ್ ಶಾ ಅವರು ಮಸೂದೆಗಳ ಹೊಸ ಆವೃತ್ತಿಯನ್ನು ಮತ್ತೆ ಮಂಡಿಸಿದರು. ಪ್ರತ್ಯೇಕ ತಿದ್ದುಪಡಿಗಳನ್ನು ಅಂಗೀಕರಿಸುವುದನ್ನು ತಡೆಯುವುದಕ್ಕಾಗಿ ಅವುಗಳನ್ನು ಹಿಂಪಡೆದು ಮತ್ತೆ ಮಂಡಿಸಲಾಯಿತು ಎಂದು ಅವರು ತಿಳಿಸಿದರು.

ವಿಶೇಷವೆಂದರೆ, ನಿರ್ಲಕ್ಷ್ಯದಿಂದ ರೋಗಿ ಮೃತಪಟ್ಟರೆ ವೈದ್ಯಕೀಯ ವೃತ್ತಿಪರರ ಹೊಣೆ ಕಡಿಮೆ ಮಾಡುವಂತಹ ತಿದ್ದುಪಡಿಯನ್ನು ಬುಧವಾರ ಮಂಡಿಸಲಾಗಿತ್ತು. ಭಾರತೀಯ ವೈದ್ಯಕೀಯ ಸಂಘದ ಕೋರಿಕೆಯ ಮೇರೆಗೆ ಹೀಗೆ ಮಾಡಲಾಗಿದೆ ಎಂದು ಗೃಹ ಸಚಿವರು ಬಹಿರಂಗಪಡಿಸಿದ್ದರು.

ನಿರ್ಲಕ್ಷ್ಯದಿಂದಾಗಿ ಸಾವು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಭಾರತೀಯ ನ್ಯಾಯ (ಎರಡನೇ) ಸಂಹಿತೆಯ ಸೆಕ್ಷನ್ 106 ಅಂತಹ ಶಿಕ್ಷೆಯ ಪ್ರಮಾಣವನ್ನು ಐದು ವರ್ಷಗಳ ಬದಲು ಎರಡು ವರ್ಷಗಳಿಗೆ ಇಳಿಸಿದೆ.

ಸೆಕ್ಷನ್ 106 ಭಾರತೀಯ ನ್ಯಾಯ (ಎರಡನೇ) ಸಂಹಿತೆ
ಸೆಕ್ಷನ್ 106 ಭಾರತೀಯ ನ್ಯಾಯ (ಎರಡನೇ) ಸಂಹಿತೆ

[ಲೋಕಸಭೆ ಅಂಗೀಕರಿಸಿದ ಮಸೂದೆಗಳ ಪ್ರತಿ ಇಲ್ಲಿ ಲಭ್ಯ]

Attachment
PDF
THE BHARATIYA NYAYA (SECOND) SANHITA, 2023.pdf
Preview
Attachment
PDF
THE BHARATIYA NAGARIK SURAKSHA (SECOND) SANHITA, 2023.pdf
Preview
Attachment
PDF
THE BHARATIYA SAKSHYA (SECOND) BILL, 2023.pdf
Preview

Related Stories

No stories found.
Kannada Bar & Bench
kannada.barandbench.com