ಕಾನೂನು ರೂಪಿಸುವ ಮೂಲಕ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಲು ಸಂಸತ್ತಿಗೆ ಅಧಿಕಾರ ಇದೆ: ಸುಪ್ರೀಂ

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರ ಮರುವಿಂಡಣೆ ಅಧಿಸೂಚನೆ ಪ್ರಶ್ನಿಸಿದ್ದ ಅರ್ಜಿಯನ್ನು ಸೋಮವಾರ ವಜಾಗೊಳಿಸಿದ ವೇಳೆ ಪೀಠ ಈ ವಿಚಾರ ತಿಳಿಸಿದೆ.
India and Parliament
India and Parliament
Published on

ಸಂವಿಧಾನದ ಪ್ರಕಾರ, ಕಾನೂನನ್ನು ರೂಪಿಸುವ ಮೂಲಕ ಅಸ್ತಿತ್ವದಲ್ಲಿರುವ ರಾಜ್ಯವನ್ನು ಒಂದು ಅಥವಾ ಹೆಚ್ಚಿನ ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಲು ಸಂಸತ್ತಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಹಾಜಿ ಅಬ್ದುಲ್ ಗನಿ ಖಾನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರ ಮರುವಿಂಡಣೆ ಅಧಿಸೂಚನೆ ಪ್ರಶ್ನಿಸಿದ್ದ ಅರ್ಜಿಯನ್ನು ಸೋಮವಾರ ವಜಾಗೊಳಿಸಿದ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠ  ಈ ವಿಚಾರ ತಿಳಿಸಿದೆ.  

Also Read
ಕಾಶ್ಮೀರದಲ್ಲಿ ಉದ್ದೇಶಿತ ವಿಧಾನಸಭಾ ಕ್ಷೇತ್ರ ಮರುವಿಂಗಡಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

"ಸಂವಿಧಾನದ  3, 4ನೇ ವಿಧಿ ಹಾಗೂ 239ಎ ಸಹವಾಚನದೊಂದಿಗೆ ನಮಗೆ ಈ ವಿಚಾರಗಳು ತಿಳಿದುಬರುತ್ತವೆ: ಕಾನೂನು ರೂಪಿಸುವ ಮೂಲಕ ಸಂಸತ್ತು ಅಸ್ತಿತ್ವದಲ್ಲಿರುವ ರಾಜ್ಯವನ್ನು ಒಂದು ಅಥವಾ ಹೆಚ್ಚಿನ ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಬಹುದು" ಎಂದು ನ್ಯಾಯಾಲಯ ಹೇಳಿದೆ.

ಸಂಸತ್ತು ಕಾನೂನು ರೂಪಿಸುವ ಮೂಲಕ ಹೊಸ ರಾಜ್ಯಗಳನ್ನು ರಚಿಸಬಹುದು ಮತ್ತು ಅಸ್ತಿತ್ವದಲ್ಲಿರುವ ರಾಜ್ಯಗಳ ಪ್ರದೇಶ, ಗಡಿ ಅಥವಾ ಹೆಸರು ಬದಲಾಯಿಸಬಹುದಾಗಿದ್ದು ಈ ಅಧಿಕಾರ ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ಸಂವಿಧಾನದ  3ನೇ ವಿಧಿ ಹೇಳಿರುವುದಾಗಿ ಪೀಠ ವಿವರಿಸಿದೆ.

Kannada Bar & Bench
kannada.barandbench.com