ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳಲ್ಲಿ ವಿವಿಧ ವಿಭಾಗಗಳಡಿ ಬಾಕಿ ಇರುವ ಪ್ರಕರಣಗಳೆಷ್ಟು? ಇಲ್ಲಿದೆ ಮಾಹಿತಿ

ಉತ್ತರ ಪ್ರದೇಶದ ಸಂಸದ ಅಶೋಕ್ ಕುಮಾರ್ ರಾವತ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಈ ಮಾಹಿತಿ ನೀಡಿದರು.
Kiren Rijiju
Kiren Rijiju
Published on

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ (ಎನ್‌ಜೆಡಿಜಿ) ಪ್ರಕಾರ ಡಿಸೆಂಬರ್ 13, 2022ರವರೆಗೆ ಸಂವಿಧಾನ ಪೀಠದ  498 ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಅಂತೆಯೇ ಡಿಸೆಂಬರ್ 14, 2022ರ ಹೊತ್ತಿಗೆ, 959 ಚುನಾವಣಾ ಅರ್ಜಿಗಳು, 16,42,371 ರಿಟ್ ಅರ್ಜಿಗಳು, 10,063 ಪಿಐಎಲ್‌ಗಳು ಮತ್ತು 28,469 ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ವಿವಿಧ ವಿಭಾಗಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಂಸದ ಅಶೋಕ್ ಕುಮಾರ್ ರಾವತ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಈ ಮಾಹಿತಿ ನೀಡಿದ್ದಾರೆ.

4,331 ವಿಶೇಷ ಅನುಮತಿ ಅರ್ಜಿಗಳು (ಎಸ್‌ಎಲ್‌ಪಿ), 2,870 ಸಾರ್ವಜನಿಕ ಹಿತಾಸಕ್ತಿ ದಾವೆಗಳು (ಪಿಐಎಲ್)   2,209 ರಿಟ್ ಅರ್ಜಿಗಳು ಹಾಗೂ  1,295 ನ್ಯಾಯಾಂಗ ನಿಂದನೆ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ವಿವಿಧ ವರ್ಗಗಳಲ್ಲಿನ ಪ್ರಕರಣಗಳ ವಿವರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

Cases pending in Supreme Court across various categories
Cases pending in Supreme Court across various categoriesLok Sabha Questions

2019 ರಿಂದ ಸುಪ್ರೀಂ ಕೋರ್ಟ್ 84,981 ಎಸ್‌ಎಲ್‌ಪಿಗಳು, 3,098 ಪಿಐಎಲ್‌ಗಳು ಹಾಗೂ 5,240 ರಿಟ್ ಅರ್ಜಿಗಳನ್ನು  ವಿಲೇವಾರಿ ಮಾಡಿದೆ. ವಿವಿಧ ವರ್ಗಗಳಲ್ಲಿನ ಪ್ರಕರಣಗಳ ವಿವರ ಇಂತಿದೆ:

Cases disposed of by SC across various categories since 2019
Cases disposed of by SC across various categories since 2019 Lok Sabha questions

ಡಿಸೆಂಬರ್ 14, 2022ರ ಹೊತ್ತಿಗೆ, 959 ಚುನಾವಣಾ ಅರ್ಜಿಗಳು, 16,42,371 ರಿಟ್ ಅರ್ಜಿಗಳು, 10,063 ಪಿಐಎಲ್‌ಗಳು ಮತ್ತು 28,469 ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿದೆ.

2019ರಿಂದ, ಹೈಕೋರ್ಟ್‌ಗಳಲ್ಲಿ 2,517 ಕಾರ್ಮಿಕ ಅರ್ಜಿಗಳು, 9,451 ಚುನಾವಣಾ ಅರ್ಜಿಗಳು, 1,11,92,733 ರಿಟ್ ಅರ್ಜಿಗಳು, 45,349  ಪಿಐಎಲ್‌ಗಳು ಹಾಗೂ 10,489 ನ್ಯಾಯಾಂಗ ನಿಂದನೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.

Kannada Bar & Bench
kannada.barandbench.com