ಚುನಾವಣಾ ನೀತಿ ಸಂಹಿತೆ ಜಾರಿ ಅವಧಿಯಲ್ಲಿ ದಾಖಲಾದ ದ್ವೇಷ ಭಾಷಣ ಪ್ರಕರಣಗಳೆಷ್ಟು ಎಂಬುದರಿಂದ ಹಿಡಿದು ರಾಷ್ಟ್ರೀಯ ದಾವೆ ನೀತಿಯ ತನಕ ವಿವಿಧ ಪ್ರಶ್ನೆಗಳಿಗೆ ಸಂಸತ್ತಿನಲ್ಲಿ ಶುಕ್ರವಾರ ಉತ್ತರ ಪಡೆಯಲಾಯಿತು. ಅವುಗಳ ಪ್ರಮುಖ ಅಂಶಗಳು ಇಲ್ಲಿವೆ:
ಗ್ರಾಹಕ ನ್ಯಾಯಾಲಯದ ಖಾಲಿ ಹುದ್ದೆಗಳು
ವಿವಿಧ ರಾಜ್ಯ ಗ್ರಾಹಕ ಆಯೋಗಗಳಲ್ಲಿ 6 ಅಧ್ಯಕ್ಷ ಮತ್ತು 44 ಸದಸ್ಯ ಹುದ್ದೆಗಳು ಖಾಲಿ ಇವೆ. ಜಿಲ್ಲಾಮಟ್ಟದ ಆಯೋಗಗಳಲ್ಲಿ 164 ಅಧ್ಯಕ್ಷ ಮತ್ತು 361 ಸದಸ್ಯ ಹುದ್ದೆಗಳು ಭರ್ತಿಯಾಗಬೇಕಿದೆ.
ಮಧ್ಯಸ್ಥಿಕೆ ಮಸೂದೆ
ದೇಶದಲ್ಲಿ ಆನ್‌ಲೈನ್ ವ್ಯಾಜ್ಯ ಪರಿಹಾರದ (ಒಡಿಆರ್) ಪರಿಕಲ್ಪನೆ ಆರಂಭಿಕ ಹಂತದಲ್ಲಿದೆ. ಆನ್‌ಲೈನ್ ವಿವಾದ ಪರಿಹಾರಕ್ಕಾಗಿ (ಒಡಿಆರ್) ಪರಿಣಾಮಕಾರಿ ಅನುಷ್ಠಾನ ರೂಪುರೇಷೆ ಸಿದ್ಧಪಡಿಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರ ನೇತೃತ್ವದಲ್ಲಿ ನೀತಿ ಆಯೋಗ ಜೂನ್ 2020ರಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ. ಸಮಿತಿಯು ಒಡಿಆರ್ ಅನ್ನು ಮುಖ್ಯವಾಹಿನಿಗೆ ತರಲು ಮತ್ತು ಒಡಿಆರ್ ಮೂಲಕ ನ್ಯಾಯ ದೊರಕಿಸಿಕೊಡಲು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾದ ವರದಿ ಹಂತ ಹಂತವಾಗಿ ಒಡಿಆರ್ ಜಾರಿಗೆ ತರಲು ಸಲಹೆ ನೀಡಿದೆ. ಈ ನಿಟ್ಟಿನಲ್ಲಿ, ರಾಜ್ಯಸಭೆಯಲ್ಲಿ ಮಂಡಿಸಲಾದ 202 ರ ಮಧ್ಯಸ್ಥಿಕೆ ಮಸೂದೆಯ ಮೂಲಕ ಸರ್ಕಾರವು ಈಗಾಗಲೇ ಒಡಿಆರ್ ಅನ್ನು ಪ್ರೋತ್ಸಾಹಿಸುತ್ತಿದೆ. ಮಸೂದೆಯು ಪ್ರಸ್ತುತ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಪಟ್ಟ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿ ಇದೆ.
ಉಚಿತ ಕಾನೂನು ಸಹಾಯಕ್ಕಾಗಿ ಆದಾಯ ಮಿತಿ ಹೆಚ್ಚಳವಿಲ್ಲ
ಉಚಿತ ಕಾನೂನು ನೆರವು ಪಡೆಯಲು ಆದಾಯ ಮಿತಿ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ.
ಕಾನೂನು ನೆರವು ವಕೀಲರ ನೇಮಕಾತಿಗೆ ಅನುಭವ ಮತ್ತು ಅರ್ಹತೆಯನ್ನು ನಿಗದಿಪಡಿಸುವ ಬಗ್ಗೆ ಸರ್ಕಾರವು ಪರಿಗಣಿಸುತ್ತಿದೆಯೇ ಎಂಬ ಪ್ರಶ್ನೆಗೆ ಸರ್ಕಾರದ ಪ್ರತಿಕ್ರಿಯೆ ಹೀಗಿದೆ: ವಕೀಲರು ಕಾನೂನು ಸೇವೆಗಳ ಪ್ರಾಧಿಕಾರಗಳ ನಿಯಮಿತ ಪಟ್ಟಿಯಲ್ಲಿಲ್ಲ ಮತ್ತು ಕಾನೂನು ನೆರವು ನೀಡಲು ವಕೀಲರ ನೇಮಕಾತಿಗಾಗಿ ಯಾವುದೇ ನಿರ್ದಿಷ್ಟ ಸಂಖ್ಯೆಯ ಹುದ್ದೆಗಳಿಲ್ಲ.
ರಾಷ್ಟ್ರೀಯ ದಾವೆ ನೀತಿ
ಹೆಚ್ಚುತ್ತಿರುವ ವ್ಯಾಜ್ಯ ಸಮಸ್ಯೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಕಾನೂನು ಸಚಿವಾಲಯ "ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ದಾವೆಗಳನ್ನು ತಡೆಗಟ್ಟಲು, ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಮಾರ್ಗಸೂಚಿಗಳನ್ನು ರೂಪಿಸುವ ಉದ್ದೇಶದಿಂದ ರಾಷ್ಟ್ರೀಯ ದಾವೆ ನೀತಿಯನ್ನು ತರಲು ಈಗಾಗಲೇ ಪ್ರಸ್ತಾಪಿಸಲಾಗಿದೆ" ಎಂದು ತಿಳಿಸಿತು.
ರೈಲ್ವೆ ಮತ್ತು ಕಂದಾಯದಂತಹ ಸಚಿವಾಲಯ ಮತ್ತು ಇಲಾಖೆಗಳು ಭಾರೀ ಸಂಖ್ಯೆಯ ವ್ಯಾಜ್ಯಗಳಲ್ಲಿ ಭಾಗಿಯಾಗಿವೆ. ಇವುಗಳ ನ್ಯಾಯಾಲಯ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ವಿವಿಧ ವೇದಿಕೆಗಳು ಅಥವಾ ರಿಟ್ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಮೇಲ್ಮನವಿಗಳನ್ನು ನಿರ್ದಿಷ್ಟ ಮಿತಿಗಳಿಗಿಂತ ಕಡಿಮೆ ತೆರಿಗೆ ಪರಿಣಾಮದೊಂದಿಗೆ ಹಿಂಪಡೆಯಬಹುದು/ಹಿಂಪಡೆಯಲು ನಿರ್ಧರಿಸಬಹುದು ಎಂದು ಕ್ಷೇತ್ರ ಅಧಿಕಾರಿಗಳಿಗೆ ನಿರ್ದೇಶಿಸುವ ಸುತ್ತೋಲೆಗಳನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೊರಡಿಸಿದೆ. ಪ್ರಕರಣದಲ್ಲಿ ತೆರಿಗೆ ಪರಿಣಾಮವು ನಿಗದಿತ ವಿತ್ತೀಯ ಮಿತಿಗಳನ್ನು ಮೀರಿದೆ ಎಂಬ ಕಾರಣಕ್ಕಾಗಿ ಮೇಲ್ಮನವಿ ಸಲ್ಲಿಸಬಾರದು ಎಂದು ಕ್ಷೇತ್ರ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂಬುದಾಗಿ ಸಚಿವಾಲಯ ಉತ್ತರಿಸಿದೆ.
ಮೇಲ್ಮನವಿಗಳ ಎರಡು ಹಂತಗಳನ್ನು ಮೀರಿ ಹೋಗದಂತೆ, ಒಂದೇ ರೀತಿಯ ವಿಷಯಗಳ ಕುರಿತು ಸುಪ್ರೀಂ ಕೋರ್ಟ್ ನಿರ್ಧರಿಸಿದ ಪ್ರಕರಣಗಳಲ್ಲಿ ಸಲ್ಲಿಸಲಾದ ಮೇಲ್ಮನವಿ ಹಿಂಪಡೆಯಲು ಶಿಫಾರಸು ಮಾಡಲಾಗಿದೆ. ಸಂಪೂರ್ಣ ಅಕ್ರಮ ಒಳಗೊಂಡಿರುವ ಪ್ರಕರಣಗಳ ಹೊರತಾಗಿ ಈ ಶಿಫಾರಸು ಅನ್ವಯವಾಗಲಿದೆ.
ಮೇಲ್ಮನವಿ ಸಲ್ಲಿಸಲು ಇದ್ದ ಆದಾಯ ಮಿತಿಯನ್ನು ಸಿಬಿಡಿಟಿ ಮತ್ತು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಹೆಚ್ಚಿಸಿದ್ದು ಅದರ ವಿವರ ಕೆಳಗಿನಂತಿದೆ:
ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಮತ್ತು ಸುಂಕ, ಅಬಕಾರಿ ಹಾಗೂ ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ (CESTAT) ಸಲ್ಲಿಸಲಾದ ಮೇಲ್ಮನವಿಗಳನ್ನು ಹಿಂತೆಗೆದುಕೊಳ್ಳುವ ಕುರಿತಾದ ಸ್ಥಿತಿಗತಿ ವಿವರ ಇಲ್ಲಿದೆ:
ಇಸಿಐನಲ್ಲಿ ದಾಖಲಾದ ದ್ವೇಷ ಭಾಷಣ ಪ್ರಕರಣಗಳು
ಚುನಾವಣೆ ವೇಳೆ ದ್ವೇಷ ಭಾಷಣ ಮತ್ತು ಕೇಂಬ್ರಿಜ್ ಅನಾಲಿಟಿಕಾ ಮತ್ತಿತರ ಕಡೆಗಳಲ್ಲಿ ಮಾಹಿತಿ ಸೋರಿಕೆ ಕುರಿತು ಸಮಾಜವಾದಿ ಪಕ್ಷ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸರ್ಕಾರ ಮಾಹಿತಿ ಸೋರಿಕೆ ಕುರಿತು ಭಾರತ ಚುನಾವಣಾ ಆಯೋಗ ಯಾವುದೇ ತನಿಖೆ ನಡೆಸಿಲ್ಲ ಎಂದು ಪ್ರತಿಕ್ರಿಯಿಸಿದೆ. ದಾಖಲಾದ ದ್ವೇಷ ಭಾಷಣದ ದೂರುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಮಾಹಿತಿಯನ್ನು ಅದು ಹಂಚಿಕೊಂಡಿದೆ: