ನಿಷ್ಕ್ರಿಯ ದಯಾಮರಣ: ಜೀವಂತ ಉಯಿಲಿಗೆ ಮ್ಯಾಜಿಸ್ಟ್ರೇಟ್‌ ಅನುಮತಿ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌

ದಯಾಮರಣದ ಇಚ್ಛೆಯ ಜೀವಂತ ಉಯಿಲನ್ನು ನೈಜವೆಂದು ಖಾತರಿಪಡಿಸಲು ಮತ್ತು ಅದನ್ನು ಸ್ವಇಚ್ಛೆಯಿಂದ ಬರೆಯಲಾಗಿದೆ ಎಂಬುದನ್ನು ಸೂಚಿಸಲು ಮ್ಯಾಜಿಸ್ಟ್ರೇಟ್‌ ದೃಢೀಕರಣ ಅಗತ್ಯ ಎಂದು 2018ರ ತೀರ್ಪಿನಲ್ಲಿ ಹೇಳಲಾಗಿತ್ತು.
Justices Hrishikesh Roy, Ajay Rastogi, KM Joseph, Aniruddha Bose, CT Ravikumar
Justices Hrishikesh Roy, Ajay Rastogi, KM Joseph, Aniruddha Bose, CT Ravikumar

ವ್ಯಕ್ತಿಯೊಬ್ಬರು ನೀಡಿದ ದಯಾಮರಣದ ಇಚ್ಛೆಯ ಜೀವಂತ ಉಯಿಲಿಗೆ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಅನುಮತಿಸುವ ಮತ್ತು ಅದನ್ನು ಸಿಂಧುಗೊಳಿಸುವ ಅಗತ್ಯವನ್ನು ಕೈಬಿಡುವ ಮೂಲಕ ನಿಷ್ಕ್ರಿಯ ದಯಾಮರಣ ಮತ್ತು ಜೀವಂತ ಉಯಿಲಿನ ವಿಚಾರದಲ್ಲಿ 2018ರಲ್ಲಿ ನೀಡಿದ್ದ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಮಾರ್ಪಾಡು ಮಾಡಿದೆ [ಕಾಮಸ್‌ ಕಾಸ್‌ ವರ್ಸಸ್‌ ಭಾರತ ಸರ್ಕಾರ].

ನೋಟರಿ ಅಥವಾ ಗೆಜೆಟಟೆಡ್‌ ಅಧಿಕಾರಿಯು ದಯಾಮರಣದ ಇಚ್ಛೆಯ ಜೀವಂತ ಉಯಿಲಿಗೆ ಇಚ್ಛಾಪೂರ್ವಕವಾಗಿ ಸಹಿ ಹಾಕಲಾಗಿದೆ ಎಂಬುದನ್ನು ಖಾತರಿಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌, ಅಜಯ್‌ ರಸ್ತೋಗಿ, ಅನಿರುದ್ಧ ಬೋಸ್‌, ಹೃಷಿಕೇಷ್‌ ರಾಯ್‌ ಮತ್ತು ಸಿ ಟಿ ರವಿಕುಮಾರ್‌ ಅವರ ನೇತೃತ್ವದ ಸಾಂವಿಧಾನಿಕ ಪೀಠವು ತನ್ನ ಜನವರಿ 24ರ ಆದೇಶದಲ್ಲಿ ಉಲ್ಲೇಖಿಸಿದೆ.

ದಯಾಮರಣದ ಇಚ್ಛೆಯ ಜೀವಂತ ಉಯಿಲನ್ನು ನೈಜವೆಂದು ಖಾತರಿಪಡಿಸಲು ಮತ್ತು ಅದನ್ನು ಸ್ವಇಚ್ಛೆಯಿಂದ ಬರೆಯಲಾಗಿದೆ ಎಂಬುದನ್ನು ಸೂಚಿಸಲು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ದೃಢೀಕರಿಸಿ ತಮ್ಮ ಸಂತೃಪ್ತಿಯ ಹೇಳಿಕೆಯನ್ನು ದಾಖಲಿಸುವುದು ಅಗತ್ಯ ಎಂದು 2018ರ ತೀರ್ಪಿನಲ್ಲಿ ಹೇಳಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಜನವರಿ 24ರ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ.

ಜೀವಂತ ಉಯಿಲು (ಲಿವಿಂಗ್ ವಿಲ್‌) ಎನ್ನುವುದು ಆರೋಗ್ಯ ಹದಗೆಡುತ್ತಿರುವ ಅಥವಾ ಮಾರಣಾಂತಿಕ ಖಾಯಿಲೆಗೀಡಾದ ವ್ಯಕ್ತಿಯೊಬ್ಬರು ತಾವು ಗಂಭೀರ ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ಕೇವಲ ಜೀವರಕ್ಷಕ ವ್ಯವಸ್ಥೆಯ ಮೂಲಕ ಮಾತ್ರವೇ ಪ್ರಜ್ಞಾಶೂನ್ಯರಾಗಿ ನಿಷ್ಕ್ರಿಯರಾಗಿ ಇರಲು ಬಯಸುವುದಿಲ್ಲ, ಅಂತಹ ಸಂದರ್ಭದಲ್ಲಿ ತಮಗೆ ದಯಾಮರಣ ನೀಡುವಂತೆ ಮುಂಚಿತವಾಗಿಯೇ ನಿರ್ದೇಶಿಸಿ ಬರೆಯುವ ಉಯಿಲಾಗಿರುತ್ತದೆ. ನಿಷ್ಕ್ರಿಯ ಸ್ಥಿತಿಯಲ್ಲಿ ವ್ಯಕ್ತಿಯು ತಮ್ಮ ಇಚ್ಛೆಯನ್ನ ವ್ಯಕ್ತಪಡಿಸಲು ಸಾಧ್ಯವಿಲ್ಲದ ಕಾರಣ ಜೀವಂತ ಉಯಿಲನ್ನು ಬರೆಯಲಾಗುತ್ತದೆ.

Also Read
ನಿಷ್ಕ್ರಿಯ ದಯಾಮರಣದ ಕುರಿತು ಕಾನೂನು ರೂಪಿಸದೇ ಕೇಂದ್ರದಿಂದ ಜವಾಬ್ದಾರಿ ಹಸ್ತಾಂತರ: ಸುಪ್ರೀಂ ಕೋರ್ಟ್‌

ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು 2018ರಲ್ಲಿ ನಿಷ್ಕ್ರಿಯಾ ದಯಾಮರಣ ಮತ್ತು ದಯಾಮರಣದ ಇಚ್ಛೆಯ ಜೀವಂತ ಉಯಿಲಿಗೆ ಅನುಮತಿಸಿತ್ತು. ಆ ಕುರಿತಾದ ತೀರ್ಪಿನಲ್ಲಿ ಸಾಂವಿಧಾನಿಕ ಪೀಠವು ಸಂವಿಧಾನದ 21ನೇ ವಿಧಿಯು ಘನತೆಯ ಜೀವಿಸುವ ಹಕ್ಕನ್ನು ಒಳಗೊಂಡಿದೆ. ಇದರಲ್ಲಿಯೇ ಗುಣಮುಖವಾಗದ ಮಾರಣಾಂತಿಕ ಖಾಯಿಲೆಯಿಂದ ಬಳಲುವ ರೋಗಿಗಳು ಅಥವಾ ನಿಷ್ಕ್ರಿಯ ಸ್ಥಿತಿಯಲ್ಲಿ ಜೀವಂತ ಶವವಾಗಿರುವ ವ್ಯಕ್ತಿಗಳ ವಿಷಯದಲ್ಲಿ ಅವರ ಸಾಯುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಅಂಶವೂ ಸೇರಿದೆ ಎಂದಿತ್ತು.

ಒಂದು ವೇಳೆ ದಯಾಮರಣದ ಇಚ್ಛೆಯ ಜೀವಂತ ಉಯಿಲು ಇಲ್ಲದ ಸಂದರ್ಭದಲ್ಲಿ ನಿಷ್ಕ್ರಿಯಾ ದಯಾಮರಣಕ್ಕೆ ಪಾಲಿಸಬೇಕಾದ ಮಾರ್ಗಸೂಚಿಗಳು, ಮುಂಚಿತ ನಿರ್ದೇಶನ ಹಾಗೂ ಅದನ್ನು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಾರ್ಗಸೂಚಿಗಳನ್ನು ರೂಪಿಸಿದೆ. ಈ ಸಂದರ್ಭದಲ್ಲಿ ಅದು ಸಕ್ರಿಯ ದಯಾಮರಣ ಮತ್ತು ನಿಷ್ಕ್ರಿಯ ದಯಾಮರಣಗಳನ್ನು ಪ್ರತ್ಯೇಕಿಸಿತ್ತು.

Related Stories

No stories found.
Kannada Bar & Bench
kannada.barandbench.com