ಧೂಮಪಾನ ವಯೋಮಿತಿ 21 ವರ್ಷಕ್ಕೆ ಏರಿಸಿ, ಸಿಗರೇಟುಗಳ ಬಿಡಿ ಮಾರಾಟ ನಿಷೇಧಿಸಿ: ಸುಪ್ರೀಂ ಕೋರ್ಟ್‌ಗೆ ಅರ್ಜಿ

ವಾಣಿಜ್ಯ ಸ್ಥಳಗಳು ಮತ್ತು ವಿಮಾನ ನಿಲ್ದಾಣಗಳಲ್ಲಿನ ಧೂಮಪಾನ ವಲಯ ತೆಗೆದು ಹಾಕಬೇಕು ಮತ್ತು ಶಿಕ್ಷಣ ಸಂಸ್ಥೆ, ಆರೋಗ್ಯ ಸಂಸ್ಥೆ ಹಾಗೂ ಪೂಜಾ ಸ್ಥಳಗಳ ಬಳಿ ಸಿಗರೇಟ್ ಮಾರಾಟ ನಿಷೇಧಿಸುವಂತೆಯೂ ಅರ್ಜಿ ಕೋರಿದೆ.
Supreme Court, Smoking
Supreme Court, Smoking

ಸಿಗರೇಟ್ ಮತ್ತು ಧೂಮಪಾನ ವ್ಯಸನ ನಿಯಂತ್ರಣಕ್ಕಾಗಿ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ [ಶುಭಮ್ ಅವಸ್ಥಿ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].

ವಕೀಲರಾದ ಶುಭಂ ಅವಸ್ಥಿ ಮತ್ತು ಸಪ್ತ ರಿಷಿ ಮಿಶ್ರಾ ಅವರು ಸಲ್ಲಿಸಿದ ಮನವಿಯಲ್ಲಿ ಧೂಮಪಾನ ವಯೋಮಿತಿಯನ್ನು18 ರಿಂದ 21ಕ್ಕೆ ಹೆಚ್ಚಳ ಮಾಡಬೇಕು, ವಾಣಿಜ್ಯ ಸ್ಥಳಗಳು ಮತ್ತು ವಿಮಾನ ನಿಲ್ದಾಣಗಳಿಂದ ಧೂಮಪಾನ ವಲಯಗಳನ್ನು ತೆಗೆದುಹಾಕಬೇಕು, ಬಿಡಿಯಾಗಿ ಸಿಗರೇಟ್‌ಗಳ ಮಾರಾಟ ನಿಷೇಧಿಸಬೇಕು, ಶಿಕ್ಷಣ ಸಂಸ್ಥೆ, ಆರೋಗ್ಯ ಕೇಂದ್ರ ಹಾಗೂ ಪೂಜಾ ಸ್ಥಳಗಳ ಬಳಿ ಸಿಗರೇಟ್‌ ಮಾರಾಟಕ್ಕೆ ನಿಷೇಧ ಹೇರಬೇಕು ಎಂದು ಕೋರಲಾಗಿದೆ.

ಅರ್ಜಿಯ ಇತರೆ ಪ್ರಮುಖಾಂಶಗಳು

  • ಕಳೆದ ಎರಡು ದಶಕಗಳಲ್ಲಿ ಧೂಮಪಾನದ ಪ್ರಮಾಣ ಹೆಚ್ಚಾಗಿದೆ. ಭಾರತ ಈಗ 16ರಿಂದ 64 ವರ್ಷ ವಯಸ್ಸಿನ ಧೂಮಪಾನಿಗಳ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ.

  • ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡದ ಮೊತ್ತ ಹೆಚ್ಚಳ ಮಾಡಬೇಕು.

  • ತಂಬಾಕು ಅದರಲ್ಲಿಯೂ ವಿಶೇಷವಾಗಿ ನಾಗರಿಕ ಆರೋಗ್ಯದ ಹಕ್ಕಿನ ಮೇಲೆ ಪರಿಣಾಮ ಬೀರುವ ಸಿಗರೇಟು ಮಾರಾಟ ಮತ್ತು ವ್ಯಸನ ನಿಯಂತ್ರಿಸಲು ವೈಜ್ಞಾನಿಕ ಅಧ್ಯಯನ ಮಾಡಬೇಕು.

  • ಸೆಕೆಂಡ್‌ಹ್ಯಾಂಡ್‌ ಸ್ಮೋಕ್‌ (ತಂಬಾಕು, ನಿಕೋಟಿನ್‌ ಅನ್ನು ಸುಡುವುದರಿಂದ ಅಥವಾ ಸಿಗರೇಟ್‌ ಉರಿಸುವುದರಿಂದ ಮೂಡುವ ಹೊಗೆ ಹಾಗೂ ಅದನ್ನು ಸೇದಿದವರು ಬಿಡುವ ಹೊಗೆ ಇವೆರಡರ ಮಿಶ್ರಣ) ವಾರ್ಷಿಕವಾಗಿ ಭಾರತದಲ್ಲಿ ಸುಮಾರು ರೂ. 56,700 ಕೋಟಿಯಷ್ಟು ವೈದ್ಯಕೀಯ ವೆಚ್ಚಕ್ಕೆ ಕಾರಣವಾಗುತ್ತದೆ.

Related Stories

No stories found.
Kannada Bar & Bench
kannada.barandbench.com