ತಾಜ್ ಮಹಲ್ ನಿರ್ಮಿಸಿದ್ದು ಷಹಜಹಾನ್ ಅಲ್ಲ: ದೆಹಲಿ ಹೈಕೋರ್ಟ್‌ಗೆ ಪಿಐಎಲ್; ಇತಿಹಾಸ ಪುಸ್ತಕಗಳ ತಿದ್ದುಪಡಿಗೆ ಒತ್ತಾಯ

ತಾಜ್ ಮಹಲ್ ಮೂಲತಃ ರಾಜಾ ಮಾನ್ ಸಿಂಗ್ ಅವರ ಅರಮನೆಯಾಗಿದ್ದು, ಅದನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ನವೀಕರಿಸಿದರು ಎಂದು ಹಿಂದೂ ಸೇನೆಯ ಅಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಅವರು ಅರ್ಜಿಯಲ್ಲಿ ಹೇಳಿದ್ದಾರೆ.
Taj mahal
Taj mahal
Published on

ತಾಜ್ ಮಹಲ್‌ನ ಸರಿಯಾದ ಇತಿಹಾಸ ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ತಾಜ್ ಮಹಲ್ ಮೂಲತಃ ರಾಜಾ ಮಾನ್ ಸಿಂಗ್ ಅವರ ಅರಮನೆಯಾಗಿದ್ದು, ಅದನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ನವೀಕರಿಸಿದರು ಎಂದು ಹಿಂದೂ ಸೇನೆಯ ಅಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ತಾಜ್ ಮಹಲ್ ನಿರ್ಮಾಣಕ್ಕೆ ಸಂಬಂಧಿಸಿದ ಐತಿಹಾಸಿಕ ತಪ್ಪು ಸಂಗತಿಗಳನ್ನು ಇತಿಹಾಸದ ಪುಸ್ತಕಗಳಿಂದ ತೆಗೆದುಹಾಕಬೇಕು ಮತ್ತು ರಾಜ ಮಾನ್ ಸಿಂಗ್ ಅರಮನೆಯ ಅಸ್ತಿತ್ವ ಮತ್ತು ಅದರ ಕಾಲಮಾನ ಕುರಿತು ತನಿಖೆ ನಡೆಸಲು ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ತನಿಖೆ ನಡೆಸಲು ನಿರ್ದೇಶನ ನೀಡಬೇಕು.ಈ ಹಿನ್ನೆಲೆಯಲ್ಲಿ ಎಎಸ್‌ಐ, ಕೇಂದ್ರ ಸರ್ಕಾರ, ಭಾರತದ ರಾಷ್ಟ್ರೀಯ ದಾಖಲೆಗಳು ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದಾರೆ.

ಅರ್ಜಿಯು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿರುವ ಪೀಠದ ಮುಂದೆ ಇಂದು (ಶುಕ್ರವಾರ) ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಅರ್ಜಿಯ ಪ್ರಮುಖ ಅಂಶಗಳು

  • ತಾಜ್ ಮಹಲ್ ಬಗ್ಗೆ ಅರ್ಜಿದಾರ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಿದ್ದು ಇತಿಹಾಸದ ವಾಸ್ತವಾಂಶಗಳನ್ನು ಸರಿಪಡಿಸುವುದು ಮತ್ತು ತಾಜ್ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವುದು ಮುಖ್ಯ.

  • ತಾಜ್ ಮಹಲ್ ಕುರಿತು ಹಲವಾರು ಪುಸ್ತಕಗಳನ್ನು ಅರ್ಜಿದಾರ ಪರಿಶೀಲಿಸಿದ್ದು ಒಂದರಲ್ಲಿ ಷಹಜಹಾನ್‌ ಪತ್ನಿ ಆಲಿಯಾ ಬೇಗಂ ಬಗ್ಗೆ ಹೇಳಲಾಗಿದ್ದು ಮುಮ್ತಾಜ್‌ ಮಹಲ್‌ ಬಗ್ಗೆ ಯಾವುದೇ ಉಲ್ಲೇಖ ಇಲ್ಲ .  

  •  ಝಡ್ಎ ದೇಸಾಯಿಯವರ 'ತಾಜ್ ಮ್ಯೂಸಿಯಂ' ಪುಸ್ತಕದಲ್ಲಿ ರಾಜಾ ಮಾನ್‌ ಸಿಂಗ್‌ ಅವರ ಅರಮನೆಯಾಗಿದ್ದ ಭವ್ಯ ಮತ್ತು ಸುಂದರವಾದ ಮುಮ್ತಾಜ್‌ ಮಹಲನ್ನು ಸಮಾಧಿ ಸ್ಥಳವಾಗಿ ಆಯ್ಕೆ ಮಾಡಲಾಗಿದೆ ಎಂದಿದೆ. ಅಂತ್ಯಕ್ರಿಯೆ ಸಮಯದಲ್ಲಿ ಮಾನ್‌ ಸಿಂಗ್‌  ಮೊಮ್ಮಗ ರಾಜಾ ಜೈ ಸಿಂಗ್‌ ವಶದಲ್ಲಿ ತಾಜ್‌ಮಹಲ್‌ ಇತ್ತು.

  • ಈ ಮಹಲನ್ನು ಎಂದಿಗೂ ಕೆಡವಿರಲಿಲ್ಲ.

  • ತಾಜ್ ಮಹಲ್‌ನ ಪ್ರಸ್ತುತ ರಚನೆಯು ಈಗಾಗಲೇ ಅಸ್ತಿತ್ವದಲ್ಲಿದ್ದ ರಾಜ ಮಾನ್ ಸಿಂಗ್ ಅವರ ಮಹಲಿನ ನವೀಕೃತ ಸ್ವರೂಪವಾಗಿದೆ.  

  • ಅಲ್ಲದೆ, ಮುಮ್ತಾಜ್ ಮಹಲ್‌ನ ಮೃತ ದೇಹವನ್ನು ರಾಜಾ ಜೈ ಸಿಂಗ್ ಅವರ ಜಮೀನಿನ ಆವರಣದಲ್ಲಿ ತಾತ್ಕಾಲಿಕ ಗುಮ್ಮಟದಡಿ ಹೂಳಲಾಗಿದೆ ಎಂದು ತಾಜ್ ಮ್ಯೂಸಿಯಂ ಪುಸ್ತಕ ಉಲ್ಲೇಖಿಸುತ್ತದೆ. ತಾಜ್ ಮಹಲ್ ನಿರ್ಮಿಸಲು ರಾಜಾ ಮಾನ್ ಸಿಂಗ್ ಅವರ ಮಹಲು ಕೆಡವಲಾಯಿತು ಎಂದು ಹೇಳುವ ಯಾವುದೇ ದಾಖಲೆಗಳಿಲ್ಲ ಎಂದು ಉಲ್ಲೇಖಿಸುವುದು ಸೂಕ್ತವಾಗಿದೆ,  

  • ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಾಜ್ ಮಹಲ್ ಕುರಿತು ಸಂಘರ್ಷ ಮತ್ತು ವ್ಯತಿರಿಕ್ತ ಮಾಹಿತಿ ನೀಡಿದೆ.

  • 1631 ರಲ್ಲಿ ಮುಮ್ತಾಜ್ ಮಹಲ್ ಸಾವನ್ನಪ್ಪಿದ ಆರು ತಿಂಗಳ ನಂತರ, ಆಕೆಯ ದೇಹವನ್ನು ತಾಜ್ ಮಹಲ್‌ನ ಮುಖ್ಯ ಸಮಾಧಿಯಲ್ಲಿ ಹೂಳಲು ಆಗ್ರಾಕ್ಕೆ ವರ್ಗಾಯಿಸಲಾಯಿತು ಎಂದು ಎಎಸ್ಐ ಉಲ್ಲೇಖಿಸಿದೆ. ಆದರೆ 1648ರಲ್ಲಿ ಸ್ಮಾರಕಗಳ ಸಂಕೀರ್ಣವನ್ನು ಪೂರ್ಣಗೊಳಿಸಲು 17 ವರ್ಷ ತೆಗೆದುಕೊಂಡಿತು ಎಂದು ASI ಹೇಳಿದ ತಾಜ್ ಮಹಲ್‌ಗೆ ಸಂಬಂಧಿಸಿದ ಅದೇ ಜಾಲತಾಣದಲ್ಲಿ ಒದಗಿಸಲಾದ ಮಾಹಿತಿಗೆ ಇದು ವ್ಯತಿರಿಕ್ತವಾಗಿದೆ.

  • ಮುಮ್ತಾಜ್‌ ಮಹಲ್‌ ಮೃತ ದೇಹವನ್ನು ಆಕೆಯ 1931ರಲ್ಲಿ ಆಕೆಯ ಮರಣದ ಆರು ತಿಂಗಳ ನಂತರ ತಾಜ್‌ಮಹಲ್‌ನ ಮುಖ್ಯ ಗುಮ್ಮಟದ ಕೆಳಗೆ ಹೂಳಲಾಗಿದೆ ಎನ್ನುವುದಾದರೆ ತಾಜ್‌ಮಹಲ್‌ 1648ರಲ್ಲಿ ಪೂರ್ಣಗೊಂಡಿತ್ತು ಎನ್ನುವ ಅಂಶಕ್ಕೆ ವ್ಯತಿರಿಕ್ತವಾದಂತಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com