ಮಹಾರಾಷ್ಟ್ರದಲ್ಲಿ 2017ರ ಮಾನಸಿಕ ಆರೋಗ್ಯ ಕಾಯಿದೆ ಜಾರಿಗೆ ತರುವಂತೆ ಒತ್ತಾಯಿಸಿ ಕಳೆದ ವಾರ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಗಂಭೀರ ಅನಾರೋಗ್ಯ ಇಲ್ಲದಿದ್ದರೂ ಇನ್ನೂ ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿ ಬಿಡುಗಡೆಯಾಗದೇ ಉಳಿದಿರುವ ರೋಗಿಗಳ ದುಃಸ್ಥಿತಿಯನ್ನು ಅರ್ಜಿ ಎತ್ತಿ ತೋರಿಸಿದೆ.
ಕಾಯಿದೆ ಜಾರಿಗೆ ಬಂದರೆ ಮಾನಸಿಕ ಅಸ್ವಸ್ಥ ವ್ಯಕ್ತಿಗಳ ಹಕ್ಕುಗಳ ರಕ್ಷಣೆಯಾಗುತ್ತದೆ. ಜೊತೆಗೆ ತಮ್ಮ ಬಿಡುಗಡೆಗಾಗಿ ಅವರು ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿಗಳನ್ನು ಸಂಪರ್ಕಿಸಲು ಅವಕಾಶ ದೊರೆಯುತ್ತದೆ ಎಂದು ಅದು ಹೇಳಿದೆ. ಮುಂಬೈ ಮೂಲದ ಮನೋವೈದ್ಯರೊಬ್ಬರು ಸಲ್ಲಿಸಿದ ಮನವಿಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಕುಟುಂಬ ಕೈಬಿಟ್ಟ ಬಳಿಕ ಥಾಣೆಯ ಪ್ರಾದೇಶಿಕ ಮಾನಸಿಕ ಆಸ್ಪತ್ರೆಯಲ್ಲಿ ಆಕೆ ತನ್ನ ಜೀವನದ ಅತ್ಯಮೂಲ್ಯ 12 ವರ್ಷಗಳನ್ನು ಬಿಡುಗಡೆಯ ಅವಕಾಶವಿಲ್ಲದೆ ಕಳೆಯಬೇಕಾಯಿತು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.