ಕೋವಿಡ್ ರೋಗದ ವೇಳೆ ಮುಂಬೈನಲ್ಲಿ ಹುಟ್ಟಿಕೊಂಡ ಅಕ್ರಮ ಮತ್ತು ಅನಧಿಕೃತ ಮಳಿಗೆಗಳ ಮೂಲಕ ಆಹಾರ ವಿತರಣಾ ಅಪ್ಲಿಕೇಶನ್‌ಗಳಾದ ಸ್ವಿಗ್ಗಿ, ಜೊಮಾಟೊ ಮತ್ತು ಡಂಜೊ ಆಹಾರ ತಲುಪಿಸುತ್ತಿರುವುದನ್ನು ವಿರೋಧಿಸಿ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ ಬಾಂಬೆ ಹೈಕೋರ್ಟ್ ಮೊರೆ ಹೋಗಿದೆ. ಭಾರಿ ಬಂಡವಾಳ ಹೂಡಿ ರೆಸ್ಟೋರೆಂಟ್ ನಡೆಸುತ್ತಿರುವ ತಮಗೆ ಈ ಅನಧಿಕೃತ ಈಟಿಂಗ್ ಹೌಸ್‌ಗಳಿಂದ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ ಅಂತಹ ಈಟಿಂಗ್ ಹೌಸ್‌ಗಳಿಗೆ ಒದಗಿಸುತ್ತಿರುವ ಎಲ್‌ಪಿಜಿ ಸೌಲಭ್ಯವನ್ನು ಕೂಡ ಕಡಿತಗೊಳಿಸಬೇಕು ಎಂದು ಕೂಡ ಮನವಿ ಮಾಡಲಾಗಿದೆ. ನಾಳೆ ಮಾರ್ಚ್ 14ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.