ಮಾಜಿ ಡಿಜಿಪಿ ಥಾಮಸ್ ವಿರುದ್ಧದ ಎಫ್ಐಆರ್ ರದ್ದು: ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ [ಚುಟುಕು]

ಮಾಜಿ ಡಿಜಿಪಿ ಥಾಮಸ್ ವಿರುದ್ಧದ ಎಫ್ಐಆರ್ ರದ್ದು:  ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ [ಚುಟುಕು]

Jacob Thomas


Twitter

ಮಾಜಿ ಡಿಜಿಪಿ ಜೇಕಬ್‌ ಥಾಮಸ್‌ ಅವರ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಿ ಕೇರಳ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿರುವ ಅರ್ಜಿದಾರ ಸತ್ಯನ್‌ ನರವೂರ್‌ ಅವರು “ಇದು ಜೇಕಬ್‌ ಅವರ ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣವಲ್ಲ. ವಾಸ್ತವವಾಗಿ ಅವರು ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಇಂತಹ ಪ್ರಕ್ರಿಯೆ ಎದುರಿಸುತ್ತಿದ್ದಾರೆ" ಎಂದಿದ್ದಾರೆ. ದೂರಿನ ಕುರಿತು ಮಾರ್ಚ್‌ 25ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಅಜಯ್‌ ರಾಸ್ತೋಗಿ ಮತ್ತು ಎ ಎಸ್‌ ಓಕಾ ಅವರಿದ್ದ ಪೀಠ ಥಾಮಸ್‌ ಅವರಿಗೆ ನೋಟಿಸ್‌ ನೀಡಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com