ವರ್ಚುವಲ್ ವಿಚಾರಣೆಯಲ್ಲಿ ಭಾಗವಹಿಸುವುದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

ಆಗಸ್ಟ್ 24ರಿಂದ ಸಂಪೂರ್ಣವಾಗಿ ಭೌತಿಕ ವಿಚಾರಣೆಗೆ ಮರಳುವ ಉತ್ತರಾಖಂಡ ಹೈಕೋರ್ಟ್ ನಿರ್ಧಾರವನ್ನು ಅರ್ಜಿ ನಿರ್ದಿಷ್ಟವಾಗಿ ಪ್ರಶ್ನಿಸಿದೆ.
Uttarakhand HC and Supreme Court
Uttarakhand HC and Supreme Court

ಆಗಸ್ಟ್ 24 ರಿಂದ ಸಂಪೂರ್ಣ ಭೌತಿಕ ಅಥವಾ ನೇರ ವಿಚಾರಣೆಗೆ ಮರಳುವ ಉತ್ತರಾಖಂಡ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ವಕೀಲರ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಅಂದಿನಿಂದ ಭೌತಿಕ ವಿಧಾನದ ಮೂಲಕ ಕಾರ್ಯನಿರ್ವಹಿಸುವುದಾಗಿ ವರ್ಚುವಲ್‌ ವಿಧಾನದ ಮೂಲಕ ಸಲ್ಲಿಸುವ ಯಾವುದೇ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಆಗಸ್ಟ್‌ 16ರಂದು ಹೈಕೋರ್ಟ್‌ ಹೊರಡಿಸಿದ್ದ ಅಧಿಸೂಚನೆಯನ್ನು ಆಲ್ ಇಂಡಿಯಾ ಜ್ಯೂರಿಸ್ಟ್ಸ್ ಅಸೋಸಿಯೇಶನ್ (ಎಐಜೆಎ) ಪ್ರಶ್ನಿಸಿದೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸುವುದನ್ನು ಸಂವಿಧಾನದ 19 (1) (ಎ) ಮತ್ತು (ಜಿ) ವಿಧಿಯಡಿ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ದೇಶಾದ್ಯಂತ 5,000ಕ್ಕೂ ಹೆಚ್ಚು ವಕೀಲರನ್ನು ಸದಸ್ಯರನ್ನಾಗಿ ಒಳಗೊಂಡಿರುವ ಎಐಜೆಎ ಹಾಗೂ ʼಲೈವ್‌ ಲಾʼ ಜಾಲತಾಣದ ಪತ್ರಕರ್ತ ಸ್ಪರ್ಶ್ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿ, ಕೋರಿತು.

ವಕೀಲರಾದ ಶ್ರೀರಾಮ್ ಪರಕ್ಕಾಟ್ ಅವರು ನ್ಯಾಯವಾದಿಗಳಾದ ಸಿದ್ಧಾರ್ಥ್ ಆರ್ ಗುಪ್ತಾ ಮತ್ತು ಪ್ರೇರಣಾ ರಾಬಿನ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ʼಸುಪ್ರೀಂಕೋರ್ಟ್‌ ಇ- ಸಮಿತಿ ಹೇಳಿರುವ ವರ್ಚುವಲ್‌ ವಿಧಾನದ ಮೂಲಕ ನ್ಯಾಯಾಲಯಗಳು ಕೈಗೆಟಕುತ್ತವೆ ಎಂಬ ಪರಿಕಲ್ಪನೆಗೆ ಹೈಕೋರ್ಟ್‌ ಅಧಿಸೂಚನೆ ಸಾವಿನ ಗಂಟೆಯಾಗಿದೆʼ ಎಂದು ತಿಳಿಸಲಾಗಿದೆ.

Also Read
ವರ್ಚುವಲ್ ಬದಲು ಭೌತಿಕ ವಿಚಾರಣೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ ರಿಜಿಜು

ಅರ್ಜಿಯ ಉಳಿದ ಪ್ರಮುಖಾಂಶಗಳು

  • ಉತ್ತರಾಖಂಡ ಹೊರತಾಗಿ, ಬಾಂಬೆ, ಮಧ್ಯಪ್ರದೇಶ ಮತ್ತು ಕೇರಳ ಹೈಕೋರ್ಟ್‌ಗಳು ವಕೀಲರನ್ನು ಭೌತಿಕವಾಗಿ ನ್ಯಾಯಾಲಯ ಕಲಾಪಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದ ಸಂದರ್ಭಗಳಿವೆ. ವರ್ಚುವಲ್‌ ವಿಧಾನದ ಮೂಲಕ ವಕೀಲರು ವಾದ ಮಂಡಿಸುವುದನ್ನು ದೇಶದ ಯಾವ ಹೈಕೋರ್ಟ್‌ಗಳು ಕೂಡ ನಿರಾಕರಿಸದಂತೆ ನಿರ್ದೇಶನ ನೀಡಬೇಕು.

  • ದೇಶದ ವಿವಿಧೆಡೆ ಇರುವ ವಕೀಲರು ಮತ್ತು ಸಂಘದ ಸದಸ್ಯರನ್ನು ಭೌತಿಕವಾಗಿ ನ್ಯಾಯಾಲಯ ಕಲಾಪಗಳಿಗೆ ಹಾಜರಾಗುವಂತೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಪರಿಹಾರ ಕೋರುವ ಸಂದರ್ಭ ಎದುರಾಗಿದೆ.

  • ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನದ ಬಳಕೆಯಿಂದ ವರ್ಚುವಲ್‌ ನ್ಯಾಯಾಲಯಗಳು ಮತ್ತು ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣಗಳನ್ನು ನಡೆಸುವುದು ಸಂವಿಧಾನದ 19 (1) (ಎ) ಮತ್ತು (ಜಿ) ವಿಧಿಯಡಿ ಪ್ರತಿ ವಕೀಲರಿಗೂ ಲಭ್ಯವಿರುವ ಮೂಲಭೂತ ಹಕ್ಕು.

  • ತಂತ್ರಜ್ಞಾನ ಅಥವಾ ಮೂಲಸೌಕರ್ಯದ ಕೊರತೆಯ ಅಥವಾ ಅವುಗಳನ್ನು ನಿರ್ವಹಿಸುವಲ್ಲಿ ನ್ಯಾಯಾಲಯಗಳ ಅನಾನುಕೂಲತೆಯ ಕಾರಣಕ್ಕೆ ವರ್ಚುವಲ್‌ ವಿಚಾರಣೆಯನ್ನು ನಿರಾಕರಿಸುವಂತಿಲ್ಲ.

  • ʼವೇಗವಾಗಿಬದಲಾಗುತ್ತಿರುವಜಾಗತೀಕರಣಗೊಂಡಲೋಕದಲ್ಲಿ, ಭಾರತೀಯನ್ಯಾಯಾಂಗ ಮಾಹಿತಿ, ಸಂವಹನಮತ್ತುತಂತ್ರಜ್ಞಾನವನ್ನು (ಐಸಿಟಿ) ಅತ್ಯಂತಸೂಕ್ತರೀತಿಯಲ್ಲಿಬಳಸುವುದುಕಡ್ಡಾಯವಾಗಿದೆʼ ಎಂದು ಸ್ವಪ್ನಿಲ್‌ ತ್ರಿಪಾಠಿ ಮತ್ತು ಸುಪ್ರೀಂಕೋರ್ಟ್‌ ನಡುವಣ ಪ್ರಕರಣದಲ್ಲಿ ಹೇಳಲಾಗಿದೆ.

  • ಭೌತಿಕ ವಿಚಾರಣೆ ಬದಲಿಗೆ ವರ್ಚುವಲ್‌ ವಿಧಾನ ಆಯ್ದುಕೊಂಡಿದ್ದಾರೆ ಎನ್ನುವ ಕಾರಣಕ್ಕೆ ದೇಶದ ಯಾವುದೇ ಹೈಕೋರ್ಟ್‌ಗಳು ವಕೀಲರಿಗೆ ನ್ಯಾಯಾಂಗ ಪ್ರಕ್ರಿಯೆಯ ಯಾವುದೇ ಅಂಶಗಳನ್ನು ನಿರಾಕರಿಸಬಾರದು.

ಕೋವಿಡ್‌ ಕಾರಣಕ್ಕೆ ದೇಶದ ವಿವಿಧ ಹೈಕೋರ್ಟ್‌ಗಳು ಭೌತಿಕ ಅಥವಾ ನೇರ ವಿಚಾರಣೆ ಬದಲಿಗೆ ವರ್ಚುವಲ್‌ ವಿಧಾನವನ್ನು ಆಯ್ದುಕೊಂಡಿದ್ದವು. ಕೋವಿಡ್‌ ಎರಡನೇ ಅಲೆ ಇಳಿದ ಬಳಿಕ ಮರಳಿ ನೇರ ಕಲಾಪ ಆರಂಭಿಸುವ ಪ್ರಸ್ತಾವನೆ ಹಲವು ನ್ಯಾಯಾಲಯಗಳ ಮುಂದೆ ಇದೆ.

Related Stories

No stories found.
Kannada Bar & Bench
kannada.barandbench.com