ಭಾರತೀಯ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷರಾಗಿ ಪ್ರಭಾ ಮೂರ್ತಿ ಆಯ್ಕೆ

64 ಮತಗಳನ್ನು ಪಡೆದಿದ್ದ ಬಿ ಜೆ ಜಿ ಸತ್ಯಶ್ರೀ ಅವರನ್ನು ಹಿಂದಿಕ್ಕಿ ಕ್ರಮವಾಗಿ 68 ಮತ್ತು 65 ಮತಗಳನ್ನು ಪಡೆದ ಕವಿತಾ ಮಹೇಶ್‌ ಮತ್ತು ಸಿ ಬಿ ಪೂರ್ಣಿಮಾ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
Lawyers
Lawyers

ಭಾರತೀಯ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷರಾಗಿ ಪ್ರಭಾ ಮೂರ್ತಿ ಚುನಾಯಿತರಾಗಿದ್ದಾರೆ.

ಕರ್ನಾಟಕ ಹೈಕೋರ್ಟ್ ಆವರಣದಲ್ಲಿರುವ ಬೆಂಗಳೂರು ವಕೀಲರ ಸಂಘದ ಕೊಠಡಿ ಸಂಖ್ಯೆ-1ರಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ 48 ಮತ ಪಡೆದಿದ್ದ ಶ್ವೇತಾ ಅವರನ್ನು ಮಣಿಸಿ, 69 ಮತಗಳನ್ನು ಪಡೆದ ಪ್ರಭಾ ಅಧ್ಯಕ್ಷೆಯಾಗಿ ಆಯ್ಕೆಯಾದರು.

64 ಮತಗಳನ್ನು ಪಡೆದಿದ್ದ ಬಿ ಜೆ ಜಿ ಸತ್ಯಶ್ರೀ ಅವರನ್ನು ಹಿಂದಿಕ್ಕಿ ಕ್ರಮವಾಗಿ 68 ಮತ್ತು 65 ಮತಗಳನ್ನು ಪಡೆದ ಕವಿತಾ ಮಹೇಶ್‌ ಮತ್ತು ಸಿ ಬಿ ಪೂರ್ಣಿಮಾ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

60 ಮತಗಳನ್ನು ಪಡೆದ ಉಷಾ ಸುನಿಲ್‌ ದೇವರು ಅವರು ಸಮೀಪ ಸ್ಪರ್ಧಿ ಜೆ ಎಸ್‌ ನಳಿನಿ (57) ಅವರನ್ನು ಪರಾಭವಗೊಳಿಸಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಜೆ ಹಂಸಾ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಡಿ ಎನ್‌ ಮಮತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ ಸುಧಾ, ಬಿ ಪಿ ರೂಪಾ, ಸಂಧ್ಯಾ ಯು. ಪ್ರಭು, ಇ ಸುಧಾ, ಫಿಲೋಮಿನಾ ರೋಸ್‌, ಕೆ ಪ್ರಪುಲ್ಲಾ, ನಿರ್ಮಲಾ ಪ್ರಶಾಂತ್‌ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಹಿರಿಯ ವಕೀಲ ಎ ಜಿ ಶಿವಣ್ಣ ಅವರು ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com