ಪ್ರಜ್ವಲ್‌ ಲೈಂಗಿಕ ಪ್ರಕರಣ: ಹಿರಿಯ ವಕೀಲರಾದ ಅಶೋಕ್‌ ನಾಯಕ್‌, ಜಯ್ನಾ ಕೊಠಾರಿ ಹೆಚ್ಚುವರಿ ಎಸ್‌ಪಿಪಿಗಳಾಗಿ ನೇಮಕ

ಎಸ್‌ಐಟಿ ದಾಖಲಿಸುವ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಪ್ರಕರಣ ನಡೆಸಲು ಸರ್ಕಾರಿ ಅಭಿಯೋಜಕರ ತಂಡ ಬಲಪಡಿಸುವ ಉದ್ದೇಶದಿಂದ ಇಬ್ಬರು ಹೆಚ್ಚುವರಿ ಎಸ್‌ಪಿಪಿಗಳನ್ನು ನೇಮಿಸಲಾಗಿದೆ.
Senior Counsel Jayna Kothari
Senior Counsel Jayna Kothari
Published on

ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿಶೇಷ ತನಿಖಾ ದಳದ (ಎಸ್‌ಐಟಿ) ಪರವಾಗಿ ವಾದಿಸಲು ಹಿರಿಯ ವಕೀಲರಾದ ಅಶೋಕ್‌ ನಾಯಕ್‌ ಮತ್ತು ಜಯ್ನಾ ಕೊಠಾರಿ ಅವರನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ.

ವಿಶೇಷ ತನಿಖಾ ದಳವು ದಾಖಲಿಸುವ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಪ್ರಕರಣಗಳನ್ನು ನಡೆಸಲು ಸರ್ಕಾರಿ ಅಭಿಯೋಜಕರ ತಂಡವನ್ನು ಬಲಪಡಿಸುವ ಉದ್ದೇಶದಿಂದ ಇಬ್ಬರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಏಪ್ರಿಲ್‌ 28ರಂದು ಬಿ ಕೆ ಸಿಂಗ್‌ ನೇತೃತ್ವದಲ್ಲಿ ತ್ರಿಸದಸ್ಯ ಎಸ್‌ಐಟಿ ರಚಿಸಲಾಗಿದೆ. ಎಸ್‌ಐಟಿ ಪ್ರಕರಣಗಳನ್ನು ನಡೆಸಲು ಮೊದಲಿಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಬಿ ಎನ್‌ ಜಗದೀಶ್‌ ನೇಮಕ ಮಾಡಲಾಗಿತ್ತು. ಈಗ ಮತ್ತಿಬ್ಬರು ಹೆಚ್ಚುವರಿ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗಿದೆ.

Kannada Bar & Bench
kannada.barandbench.com