ಹತ್ತು ವರ್ಷ ಜೈಲಿನಲ್ಲಿದ್ದು, ದೀರ್ಘಕಾಲ ಮೇಲ್ಮನವಿ ಬಾಕಿ ಇರುವವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ: ಸುಪ್ರೀಂ ಸೂಚನೆ

ದೀರ್ಘಕಾಲ ಬಾಕಿ ಉಳಿದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ನೀಡಲು ಕಾರ್ಯತಂತ್ರ ಆರಂಭಿಸಿರುವುದಾಗಿ ತಿಳಿಸಿದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
Justices Sanjay Kishan Kaul and MM Sundresh
Justices Sanjay Kishan Kaul and MM Sundresh

ಶೀಘ್ರವೇ ಮೇಲ್ಮನವಿ ವಿಚಾರಣೆಗೆ ಬಾರದಿರುವ, ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ಪೂರ್ಣಗೊಳಿಸಿರುವಂತಹ ಬಂಧಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ (ಪಾಲಿಸಿ ಸ್ಟ್ರಾಟಜಿ ಫಾರ್‌ ಗ್ರಾಂಟ್‌ ಆಫ್‌ ಬೇಲ್‌ ಕುರಿತಾದ ಸ್ವಯಂ ಪ್ರೇರಿತ ಪಿಐಎಲ್‌).

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದ್ರೇಶ್ ಅವರಿರುವ ಪೀಠ ಮೂರು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಅವುಗಳಲ್ಲಿ ಎರಡು ವೈಯಕ್ತಿಕ ಅರ್ಜಿದಾರರ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದ ಮನವಿಗಳು (ಅಲಾಹಾಬಾದ್ ಹೈಕೋರ್ಟ್‌ನಿಂದ); ಇನ್ನೊಂದು, ವಿಚಾರಣಾ ನ್ಯಾಯಾಲಯದ ಅಪರಾಧಗಳ ಮೇಲ್ಮನವಿಗಳು ದೀರ್ಘಕಾಲ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಜಾಮೀನು ನೀಡಲು ನೀತಿ ತಂತ್ರ ರೂಪಿಸಲು ಉನ್ನತ ನ್ಯಾಯಾಲಯ ಹೂಡಿದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್).

Also Read
ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಕರಣ: ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

ಇಂದು ಹೊರಡಿಸಲಾದ ನಿರ್ದೇಶನಗಳು ಎಲ್ಲಾ ಹೈಕೋರ್ಟ್‌ಗಳಿಗೆ ಅನ್ವಯಿಸಲಿದ್ದು ಅವು ಒಂದೇ ರೀತಿಯ ಪ್ರಕ್ರಿಯೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ದೀರ್ಘ ಕಾಲದಿಂದ ಜೈಲಿನಲ್ಲಿರುವವರಿಗೆ ಜಾಮೀನು ನೀಡಲು ಅಥವಾ ವಿನಾಯತಿ ನೀಡಲು ಸೂಕ್ತವಾದ ಪ್ರಕರಣಗಳನ್ನು ಗುರುತಿಸುವುದು ಪ್ರಕ್ರಿಯೆಯ ಗುರಿಯಾಗಬೇಕು ಎಂದು ಪೀಠ ಒತ್ತಿಹೇಳಿತು.

Related Stories

No stories found.
Kannada Bar & Bench
kannada.barandbench.com