ನಿರ್ಮಾಪಕರ ವಿರುದ್ಧದ ಖಾಸಗಿ ದೂರು: ಸ್ವಯಂ ಹೇಳಿಕೆ ದಾಖಲಿಸಿದ ನಟ ಸುದೀಪ್;‌ ನಾಳೆಗೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ನ್ಯಾಯಾಲಯದ ಈ ಹಿಂದಿನ ನಿರ್ದೇಶನದಂತೆ ವಕೀಲರ ಜೊತೆಗೆ ನ್ಯಾಯಾಲಯಕ್ಕೆ ಹಾಜರಾದ ಸುದೀಪ್‌ ಅವರು ಖಾಸಗಿ ದೂರಿನಲ್ಲಿ ಉಲ್ಲೇಖಿಸಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಸ್ವಯಂ ಹೇಳಿಕೆ ನೀಡಿದರು.
Actor Sudeep
Actor SudeepFacebook

ನಿರ್ಮಾಪಕರಾದ ಎಂ ಎನ್‌ ಕುಮಾರ್‌ ಮತ್ತು ಎಂ ಎನ್‌ ಸುರೇಶ್‌ ಅವರ ವಿರುದ್ಧ ಮಾನಹಾನಿ ದಾವೆ ದಾಖಲಿಸಲು ಕೋರಿರುವ ಚಿತ್ರ ನಟ ಸುದೀಪ್‌ ಅವರು ಗುರುವಾರ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಸ್ವಯಂ ಹೇಳಿಕೆ ದಾಖಲಿಸಿದ್ದಾರೆ.

Also Read
ನಿರ್ಮಾಪಕರ ವಿರುದ್ಧದ ನಟ ಸುದೀಪ್‌ ಖಾಸಗಿ ದೂರು ವಿಚಾರಣೆಗೆ ಪರಿಗಣಿಸಿದ ನ್ಯಾಯಾಲಯ; ಆ.7ಕ್ಕೆ ಸ್ವಯಂ ಹೇಳಿಕೆ ದಾಖಲು

ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ಮತ್ತು ಆರೋಪಗಳನ್ನು ಮಾಡಿರುವ ನಿರ್ಮಾಪಕರಾದ ಎಂ ಎನ್‌ ಕುಮಾರ್‌ ಮತ್ತು ಎಂ ಎನ್‌ ಸುರೇಶ್‌ ಅವರ ವಿರುದ್ಧ ಮಾನಹಾನಿ ದಾವೆ ದಾಖಲಿಸಬೇಕು ಹಾಗೂ 10 ಸಾವಿರ ರೂಪಾಯಿ ದಂಡ ಪಾವತಿಸಲು ಆದೇಶಿಸಬೇಕು ಎಂದು ಸುದೀಪ್‌ ಖಾಸಗಿ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದೀಪ್‌ ಹೇಳಿಕೆಯನ್ನು ದಾಖಲಿಸಿಕೊಂಡ 13ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವೆಂಕಣ್ಣ ಬಸಪ್ಪ ಹೊಸಮನಿ ಅವರು ನಾಳೆಗೆ ಆದೇಶ ಕಾಯ್ದಿರಿಸಿದರು.

ವಕಾಲತ್ತು ಹಾಕಿರುವ ಸಿ ವಿ ನಾಗೇಶ್‌ ಅಸೋಸಿಯೇಟ್ಸ್‌ನ ವಕೀಲರಾದ ಅಜಯ್‌ ಕಡಕೋಳ, ಪ್ರತೀಕ್‌ ಜಿ ಮತ್ತು ಸನತ್‌ ಕುಮಾರ್‌ ಅವರು ಸುದೀಪ್‌ ಅವರ ಜೊತೆ ಇದ್ದರು.

Related Stories

No stories found.
Kannada Bar & Bench
kannada.barandbench.com