ಕೊಲಿಜಿಯಂ ವ್ಯವಸ್ಥೆಯಾಗಬಾರದು ಎಂದು ರಾಜಕೀಯ ವ್ಯವಸ್ಥೆ ಭಾವಿಸುವುದರಿಂದ ಅಲ್ಲಿ ಸಮಸ್ಯೆಗಳು ಉಳಿದಿವೆ: ನ್ಯಾ. ಕೌಲ್

ಅಧಿಕಾರದಲ್ಲಿ ಯಾರೇ ಇರಲಿ ಸರ್ಕಾರ, ರಾಜಕೀಯ ಮಂದಿ ಕೊಲಿಜಿಯಂನಲ್ಲಿ ತಮಗೆ ಅವಕಾಶ ಇರಬೇಕೆಂದು ಬಯಸುತ್ತಾರೆ. ಇದು ಹಗ್ಗಜಗ್ಗಾಟಕ್ಕೆ ಎಡೆ ಮಾಡಿಕೊಡಬಹುದು. ಈ ಬಗ್ಗೆ ಕಾಳಜಿ ವಹಿಸಿದರೆ, ಸಮಸ್ಯೆ ಪರಿಹರಿಸಬಹುದು ಎಂಬುದಾಗಿ ಅವರು ತಿಳಿಸಿದ್ದಾರೆ.
ಕೊಲಿಜಿಯಂ ವ್ಯವಸ್ಥೆಯಾಗಬಾರದು ಎಂದು ರಾಜಕೀಯ ವ್ಯವಸ್ಥೆ ಭಾವಿಸುವುದರಿಂದ ಅಲ್ಲಿ ಸಮಸ್ಯೆಗಳು ಉಳಿದಿವೆ: ನ್ಯಾ. ಕೌಲ್

ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ಒಂದು ವ್ಯವಸ್ಥೆಯಾಗಬಾರದು ಎಂದು ರಾಜಕೀಯ ವ್ಯವಸ್ಥೆ ಭಾವಿಸುವುದರಿಂದ ಕೊಲಿಜಿಯಂನಲ್ಲಿ ಸಮಸ್ಯೆಗಳು ಅಸ್ತಿತ್ವದಲ್ಲಿವೆ ಎಂದು ಈಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವೃತ್ತಿಯ ಬಳಿಕ ಬಾರ್‌ ಅಂಡ್‌ ಬೆಂಚ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ಈಚೆಗೆ ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ಅವರು “ಪ್ರಸ್ತುತ ಕೊಲಿಜಿಯಂ ನೇಮಕಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕಾಗಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನೇಮಕಾತಿ ವ್ಯವಸ್ಥೆಯಲ್ಲಿ ಮುಕ್ತ ಹಾಗೂ ನಿವೃತ್ತ ನ್ಯಾಯಮೂರ್ತಿಗಳು ನೇರವಾಗಿ ಭಾಗಿಯಾಗಬೇಕು ಎಂದು ಪ್ರತಿಕ್ರಿಯಿಸಿದ್ದರು. ಕೊಲಿಜಿಯಂ ವ್ಯವಸ್ಥೆ ತನ್ನದೇ ಆದ ನ್ಯೂನತೆಗಳಿಂದ ಕೂಡಿದೆ ಎಂಬುದನ್ನು ಅವರು ಒಪ್ಪಿದಾರಾದರೂ ಪ್ರಸ್ತುತ ಅದಕ್ಕಿಂತ ಉತ್ತಮ ಪರ್ಯಾಯವಿಲ್ಲ ಎಂದಿದ್ದರು.

ಅವರ ಈ ಮಾತುಗಳನ್ನು ಬಾರ್‌ ಅಂಡ್‌ ಬೆಂಚ್‌ ಪ್ರಸ್ತಾಪಿಸಿದಾಗ ನ್ಯಾ. ಕೌಲ್‌ “ಕೊಲಿಜಿಯಂ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಿದೆ ಎಂದರು ʼಲೀಸ್ಟ್‌ ಇವಿಲ್ಸ್‌ʼ ಬಗ್ಗೆ ನ್ಯಾ. ರೋಹಿಂಟನ್‌ ಅವರ ಮಾತುಗಳನ್ನು ನೆನೆಯುತ್ತಾ ನ್ಯಾ. ಕೌಲ್‌ ʼಕೊಲಿಜಿಯಂ ಕೆಟ್ಟದಲ್ಲ ಬದಲಿಗೆ ಇದೊಂದು ವ್ಯವಸ್ಥೆ. ಇಲ್ಲಿ ಸಮಸ್ಯೆಗಳು ಅಸ್ತಿತ್ವದಲ್ಲಿವೆ ಏಕೆಂದರೆ ರಾಜಕೀಯ ವ್ಯವಸ್ಥೆಗೆ ಕೊಲಿಜಿಯಂ ವ್ಯವಸ್ಥೆಯಾಗಬಾರದು ಎಂಬ ಭಾವನೆ ಇದೆʼ ಎಂದರು.

“ಇಲ್ಲದಿದ್ದರೆ ಇದಕ್ಕಿಂತ ಬೇರೆ ವ್ಯವಸ್ತೆ ನಮಗೆ ಇದೆಯೇ? ಅದು ನನ್ನ ದೃಷ್ಟಿಯಲ್ಲಿ ಘರ್ಷಣೆ ಹುಟ್ಟುಹಾಕುತ್ತದೆ. ಮತ್ತೊಂದು ಕಾನೂನು ತರಲು ಸರ್ಕಾರದಲ್ಲಿ ಒಮ್ಮತವೇರ್ಪಟ್ಟಾಗ ಮಾತ್ರ ಅದು ಬದಲಾಗಬಹುದು, ಸಹಜವಾಗಿ ಅದನ್ನು ಪರೀಕ್ಷಿಸಬಹುದು ಮತ್ತು ಪರೀಕ್ಷಿಸಲಾಗುತ್ತದೆ, ಅದಕ್ಕೆ ಸಂಬಂಧಿಸಿದಂತೆ ಎರಡು ಅಭಿಪ್ರಾಯಗಳಿವೆ. ನ್ಯಾಯಾಂಗ ನೇಮಕಾತಿ ಆಯೋಗ ಕಾಯಿದೆಯನ್ನು (ಎನ್‌ಜೆಎಸಿ) ರದ್ದುಗೊಳಿಸಿದಾಗ ಕಾಳಜಿ ವ್ಯಕ್ತಪಡಿಸಲಾಗಿದ್ದು ಹೊಸ ವ್ಯವಸ್ಥೆಯ ಸಾಧ್ಯತೆಗಳಿವೆ ಎಂದಿದ್ದಾರೆ.

ಭಾರತೀಯ ಸನ್ನಿವೇಶದಲ್ಲಿ ನ್ಯಾಯಾಧೀಶರ ನೇಮಕಾತಿಯಲ್ಲಿ ನ್ಯಾಯಾಂಗ ಬಹಳ ಮುಖ್ಯ ಪಾತ್ರ ವಹಿಸುತ್ತದೆ, ಆದರೆ ಅದೊಂದೇ ಏಕೈಕ ಪಾತ್ರ ವಹಿಸುವುದಿಲ್ಲ. ಅಧಿಕಾರದಲ್ಲಿ ಯಾರೇ ಇರಲಿ ಸರ್ಕಾರ, ರಾಜಕೀಯ ಮಂದಿ ಕೊಲಿಜಿಯಂನಲ್ಲಿ ತಮಗೆ ಅವಕಾಶ ಇರಬೇಕೆಂದು ಬಯಸುತ್ತಾರೆ. ಇದು ಹಗ್ಗಜಗ್ಗಾಟಕ್ಕೆ ಎಡೆ ಮಾಡಿಕೊಡಬಹುದು. ಈ ಬಗ್ಗೆ ಕಾಳಜಿ ವಹಿಸಿದರೆ, ಸಮಸ್ಯೆ ಪರಿಹರಿಸಬಹುದು ಎಂಬುದಾಗಿ ಅವರು ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com