ನೀರವ್ ಮೋದಿಯ ಲಂಡನ್ ಆಸ್ತಿ ಮಾರಾಟದಿಂದ ಬರುವ ಆದಾಯವನ್ನು ಭಾರತ ಸರ್ಕಾರಕ್ಕೆ ನೀಡಬೇಕು: ಮುಂಬೈ ನ್ಯಾಯಾಲಯ
ದೇಶದಿಂದ ಪರಾರಿಯಾಗಿ ಲಂಡನ್‌ನಲ್ಲಿರುವ ಉದ್ಯಮಿ ನೀರವ್ ಮೋದಿ ಅವರ ಸ್ಥಿರಾಸ್ತಿ ಹರಾಜಿನಿಂದ ಬಂದ ಹಣವನ್ನು ಭಾರತ ಸರ್ಕಾರಕ್ಕೆ ನೀಡಬೇಕು ಎಂದು ಮುಂಬೈ ನ್ಯಾಯಾಲಯ ಮಾರ್ಚ್ 30ರಂದು ಆದೇಶಿಸಿದೆ.
ಅನೇಕ ಸಾರ್ವಜನಿಕ ಬ್ಯಾಂಕ್‌ಗಳನ್ನು ವಂಚಿಸಿದ್ದ ಮೋದಿ ಮತ್ತು ಅವರ ಕಂಪನಿಗಳ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪಿಎಂಎಲ್ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ.
ನೀರವ್ ಮೋದಿಯನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ (ಎಫ್‌ಇಒ) ಎಂದು ಜೂನ್ 2020 ರಲ್ಲಿ ಘೋಷಿಸಲಾಗಿದ್ದು ಆ ಬಳಿಕ ಮೋದಿಗೆ ಸಂಬಂಧಿಸಿದ,ಮ ಲಂಡನ್‌ನಲ್ಲಿರುವ ಮನೆಯೂ ಸೇರಿದಂತೆ ₹ 329 ಕೋಟಿ ಮೌಲ್ಯದ 68 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ತಾನು ಅರ್ಜಿ ಸಲ್ಲಿಸಿರುವುದಾಗಿ ಇ ಡಿ ತಿಳಿಸಿತ್ತು.
ಲಂಡನ್‌ನಲ್ಲಿ ಇತ್ಯರ್ಥಗೊಳಿಸಲು ಖುದ್ದು ಸ್ವತಃ ಪ್ರಾರ್ಥಿಸಿರುವ ಡಿಪಾಸಿಟ್ ಟ್ರಸ್ಟ್ ಸಂಸ್ಥೆ ಈ ಮನೆಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ ಎಂದು ಇ ಡಿ ಹೇಳಿತ್ತು. ಬ್ರಿಟನ್‌ನ ನ್ಯಾಯಾಲಯವೊಂದು ಟ್ರಸ್ಟ್‌ಗೆ ಮೋದಿ ಮನೆ ಸೇರಿದಂತೆ ಆಸ್ತಿ ಮಾರಾಟ ಮಾಡಲು ಅನುಮತಿ ನೀಡಿತ್ತು. ಇ ಡಿ ಇತ್ಯರ್ಥ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಯತ್ನಿಸಿದಾಗ ಭಾರತದಲ್ಲಿಯೇ ಆದಾಯ ಸ್ವೀಕರಿಸುವ ಕುರಿತು ಸ್ಪಷ್ಟ ಆದೇಶ ಇಲ್ಲದೆ ಆಸ್ತಿ ಮಾರಾಟದ ಆದಾಯವನ್ನು ದೇಶಕ್ಕೆ ತರಲು ಕಷ್ಟವಾಗುತ್ತದೆ ಎಂಬುದು ಅದಕ್ಕೆ ತಿಳಿಯಿತು.,
ಮುಂಬೈ ನ್ಯಾಯಾಲಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮಾತ್ರ ಅನುಮತಿ ನೀಡಿದೆ ವಿನಾ ಲಂಡನ್ ಆಸ್ತಿ ಮಾರಾಟದ ಆದಾಯವನ್ನು ಭಾರತಕ್ಕೆ ತರಬೇಕು ಎಂಬ ಕುರಿತು ಅಲ್ಲ ಎಂದು ಅದಕ್ಕೆ ತಿಳಿದುಬಂತು.
ಹಾಗಾಗಿ ಮಾರ್ಚ್ 30 ರಂದು ವಿಶೇಷ ಎಫ್‌ಇಒ ನ್ಯಾಯಾಧೀಶ ಎಸ್‌ಎಂ ಮೆನ್ಜೋಜ್ ಅವರು ನೀಡಿದ್ದ ನಿರ್ದೇಶನದಲ್ಲಿ ಸ್ಪಷ್ಟತೆ ಕೋರಿ ಅರ್ಜಿ ಸಲ್ಲಿಸಿತ್ತು.
“ನ್ಯಾಯದ ಹಿತಾಸಕ್ತಿಯ ದೃಷ್ಟಿಯಿಂದ ಈ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಅಗತ್ಯ ಸ್ಪಷ್ಟೀಕರಣ ಮತ್ತು ಮಾರ್ಪಾಡು ಅಗತ್ಯವೆಂದು ಕಂಡುಕೊಂಡಿದ್ದೇನೆ. ಇಲ್ಲದಿದ್ದರೆ ಈ ನ್ಯಾಯಾಲಯ ಜಾರಿಗೊಳಿಸಿದ ಮುಟ್ಟುಗೋಲು ಆದೇಶ ಕಾರ್ಯಗತಗೊಳಿಸಲಾಗದ/ಅನುಕೂಲಕರ ರೀತಿಯದ್ದಾಗುತ್ತದೆ. 103, ಮ್ಯಾರಥಾನ್ ಹೌಸ್, 200 ಮೇರಿಲ್ಬೋನ್ ರಸ್ತೆ ಲಂಡನ್ NW15PL UKಯಲ್ಲಿ ನೆಲೆಗೊಂಡಿರುವ ಸ್ಥಿರ ಆಸ್ತಿಯ ಅಂದರೆ ಆಸ್ತಿಯ ಪ್ರಕ್ರಿಯೆ ಮುಕ್ತಾಯ ಸೇರಿದಂತೆ ಮಾರಾಟ, ಹರಾಜು ಅಥವಾ ಯಾವುದೇ ರೂಪದಲ್ಲಿ ಸ್ವೀಕರಿಸಿದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಜಮಾ ಮಾಡತಕ್ಕದ್ದು. ಅದನ್ನು ಸ್ವೀಕರಿಸಲು ಭಾರತದ ಕೇಂದ್ರ ಸರ್ಕಾರ ಅರ್ಹವಾಗಿರುತ್ತದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.