ತ್ರಿಪುರದಲ್ಲಿ ಅಕ್ಟೋಬರ್‌ನಲ್ಲಿ ನಡೆದಿದೆ ಎನ್ನಲಾದ ದ್ವೇಷದ ಅಪರಾಧಗಳಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿ ಆಯ್ಕೆಯ ಸ್ವರೂಪದ್ದಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ತ್ರಿಪುರ ಸರ್ಕಾರ ತಿಳಿಸಿದೆ. ಬಂಗಾಳ ವಿಧಾನಸಭೆ ಚುನಾವಣೋತ್ತರ ಹಿಂಸಾಚಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೋಮು ಹಿಂಸಾಚಾರ ನಡೆದಿದ್ದರೂ ಅರ್ಜಿದಾರರು ಮೌನವಾಗಿದ್ದಾರೆ ಎಂದು ಅದು ಆಕ್ಷೇಪಿಸಿದೆ. ತ್ರಿಪುರ ಹಿಂಸೆ ವೇಳೆ ಜಾಗೃತವಾಗಿದ್ದ ಅರ್ಜಿದಾರರ ಸಾರ್ವಜನಿಕ ಮನೋಭಾವ ಬಂಗಾಳ ಹಿಂಸೆ ವೇಳೆ ಮೌನವಾಗಿತ್ತು ಎಂದು ಅದು ಆಕ್ಷೇಪಿಸಿದೆ. ಕಳೆದ ಅಕ್ಟೋಬರ್‌ನಲ್ಲಿ ತ್ರಿಪುರದಲ್ಲಿ ನಡೆದಿದೆ ಎನ್ನಲಾದ ದ್ವೇಷಾಪರಾಧ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಕೋರಿ ವಕೀಲ ಎಹ್ತೇಷಾಮ್ ಹಶ್ಮಿ ಅವರು ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರ ಈ ಅಫಿಡವಿಟ್ ಸಲ್ಲಿಸಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.