ಲಿಂಗ-ತಟಸ್ಥ ಶೌಚಾಲಯ, ಲಿಂಗ ಸಂವೇದನಾ ಸಮಿತಿಯಲ್ಲಿ ಎಲ್‌ಜಿಬಿಟಿಕ್ಯೂಐಎ+ ವರ್ಗಕ್ಕೆ ಪ್ರಾತಿನಿಧ್ಯ: ಸುಪ್ರೀಂಗೆ ಪತ್ರ

ಬಹಿರಂಗವಾಗಿ ಭಿನ್ನ ಲೈಂಗಿಕ ಮನೋಧರ್ಮದವರು ಹೆಚ್ಚು ಹೆಚ್ಚಾಗಿ ನ್ಯಾಯವಾದಿ ವರ್ಗಕ್ಕೆ ಸೇರುತ್ತಿರುವುದರಿಂದ ಲಿಂಗ ಸಂವೇದನೆಯ ವ್ಯಾಪ್ತಿ ವಿಸ್ತರಿಸುವುದು ಮುಖ್ಯವಾಗಿದೆ ಎಂದು ನ್ಯಾ. ಕೊಹ್ಲಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಲಿಂಗ-ತಟಸ್ಥ ಶೌಚಾಲಯ, ಲಿಂಗ ಸಂವೇದನಾ ಸಮಿತಿಯಲ್ಲಿ ಎಲ್‌ಜಿಬಿಟಿಕ್ಯೂಐಎ+ ವರ್ಗಕ್ಕೆ ಪ್ರಾತಿನಿಧ್ಯ: ಸುಪ್ರೀಂಗೆ ಪತ್ರ
A1

ಸುಪ್ರೀಂ ಕೋರ್ಟ್‌ನಲ್ಲಿ ಎಲ್‌ಜಿಬಿಟಿಕ್ಯೂಐಎ+ ಸಮುದಾಯಕ್ಕೆ ಸೇರಿದವರಿಗೆ ಮೂಲ ಸೌಕರ್ಯ ಒದಗಿಸಬೇಕು ಮತ್ತು ಸರ್ವೋಚ್ಚ ನ್ಯಾಯಾಲಯದ ಲಿಂಗ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿಯಲ್ಲಿ ತೃತೀಯ ಲಿಂಗಿ ವರ್ಗಕ್ಕೆ ಸೇರಿದವರಿಗೂ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಕೋರಿ ಸಮಿತಿಯ ಅಧ್ಯಕ್ಷೆಯಾಗಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿಗೆ ವಕೀಲರೊಬ್ಬರು ಪತ್ರ ಬರೆದಿದ್ದಾರೆ.

ಕ್ವೀರ್‌ ಮತ್ತು ಬೈನರಿಯೇತರ ಲೈಂಗಿಕ ಮನೋಧರ್ಮಕ್ಕೆ ಸೇರಿದ ವಕೀಲರಾದ ರೋಹಿನ್‌ ಭಟ್‌ ಅವರು ಸಮಿತಿಯ ವ್ಯಾಪ್ತಿಯನ್ನು 'ಲಿಂಗ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿ'ಯ ಬದಲು ಲಿಂಗ ಮತ್ತು ಲೈಂಗಿಕ ಸಂವೇದನೆ ಹಾಗೂ ಆಂತರಿಕ ದೂರುಗಳ ಸಮಿತಿ'ಯಾಗಿ ಪರಿವರ್ತಿಸುವಂತೆ ಕೋರಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಶೌಚಾಲಯಗಳು ಇರುವಲ್ಲೆಲ್ಲಾ ಲಿಂಗ ತಟಸ್ಥ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಕೂಡ ಮನವಿ ಮಾಡಿದ್ದಾರೆ.

Also Read
ತೃತೀಯ ಲಿಂಗಿ ಕೈದಿಗಳಿಗೆ ಪ್ರತ್ಯೇಕ ಜೈಲು ಕೋಣೆ: ಕೇಂದ್ರದ ಮಾರ್ಗಸೂಚಿ ತಪ್ಪದೆ ಪಾಲಿಸಲು ಸೂಚಿಸಿದ ಪಾಟ್ನಾ ಹೈಕೋರ್ಟ್

ಪ್ರತಿ ಪಾಸಿಂಗ್‌ ದಿನಗಳಲ್ಲಿ ಎಲ್‌ಜಿಬಿಟಿಕ್ಯೂಐಎ+ (ಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಲಿಂಗಪರಿವರ್ತಿತ, ಅಸಮ, ಅಂತರ್‌ಲಿಂಗಿ, ಅಲೈಂಗಿಕ ಮತ್ತಿತರ ವರ್ಗ) ಸಮುದಾಯಕ್ಕೆ ಸೇರಿದ ಹೆಚ್ಚು ಹೆಚ್ಚು ಮಂದಿ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿದ್ದು ಪ್ರಸ್ತುತ ಸಮಿತಿಯಲ್ಲಿರುವ 11 ಸದಸ್ಯರಲ್ಲಿ ವಕೀಲ ವರ್ಗ ಅಥವಾ ನ್ಯಾಯಮೂರ್ತಿಗಳ ವರ್ಗದಿಂದ ಯಾವುದೇ ತೃತೀಯ ಲಿಂಗಿ ವ್ಯಕ್ತಿಗಳಿಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ವಿವರಿಸಲಾಗಿದೆ.

Also Read
ಸಲಿಂಗ ವಿವಾಹ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಕೇಂದ್ರ ಸರ್ಕಾರ

“ಭಿನ್ನ ಲೈಂಗಿಕ ಮನೋಧರ್ಮದವರು ಹೆಚ್ಚು ಹೆಚ್ಚಾಗಿ ನ್ಯಾಯವಾದಿ ವರ್ಗಕ್ಕೆ ಸೇರುತ್ತಿರುವಾಗ ಸುಪ್ರೀಂ ಕೋರ್ಟ್‌ನಲ್ಲಿ ಅಂತಹವರಿಗೆ ಮೂಲ ಸೌಕರ್ಯ ಒದಗಿಸುವುದು ಮುಖ್ಯವಾಗಿದೆ. ಭವಿಷ್ಯದಲ್ಲಿ ಸರ್ವೋಚ್ಚ ನ್ಯಾಯಾಲಯ ಹೋಮೋಫೋಬಿಯಾ (ಸಲಿಂಗಿಗಳ ಬಗೆಗಿನ ಭೀತಿ) ಇಲ್ಲವೇ ಟ್ರಾನ್ಸ್‌ಫೋಬಿಯಾವನ್ನು (ತೃತೀಯಲಿಂಗಿಗಳ ಬಗೆಗಿನ ಭೀತಿ) ಯಶಸ್ವಿಯಾಗಿ ವಿರೋಧಿಸುವ ಸಾಂಸ್ಥಿಕ ಮತ್ತು ಪಾರಿಸರಿಕ ಅಭಿವೃದ್ಧಿಯ ವಿಧಾನಗಳನ್ನು ಮತ್ತು ಸ್ತ್ರೀದ್ವೇಷ, ಜಾತೀಯತೆ, ವರ್ಣಭೇದ ನೀತಿ, ಸಾಂಸ್ಕೃತಿಕವಾಗಿ ಆಕ್ರಮಣಕಾರಿಯಾದ ದೇಶಭಕ್ತಿ ಹಾಗೂ ಅನ್ಯರ ದ್ವೇಷದೊಂದಿಗಿನ ಅವುಗಳ ಅಂತರ್‌ವಲಯಗಳನ್ನು ಮರುಪರಿಶೀಲಿಸಬೇಕು” ಎಂದು ಅರ್ಜಿಯಲ್ಲಿ ಕೋರಲಾಗಿದೆ. ಬಹಿರಂಗವಾಗಿ ಅಸಮ ಲೈಂಗಿಕ ಮನೋಧರ್ಮದ ವಕೀಲರು ಇರುವುದರಿಂದ ಲಿಂಗ ಸಂವೇದನೆಯ ವ್ಯಾಪ್ತಿ ವಿಸ್ತರಿಸುವುದು ಮುಖ್ಯವಾಗಿದೆ ಎಂದು ಅರ್ಜಿ ತಿಳಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದ ಭಟ್‌, ಹಾಜರಾತಿ ಚೀಟಿಗಳಲ್ಲಿ ವಕೀಲರ ಸರ್ವನಾಮಗಳನ್ನು ಸೇರಿಸಲು ಹೆಚ್ಚುವರಿ ಕಾಲಮ್ ಸೇರಿಸಲು ಅನುವಾಗುವಂತಹ ಮಾರ್ಪಾಡು ಮಾಡುವಂತೆ ಮನವಿ ಮಾಡಿದ್ದರು.  ಪ್ರಸ್ತುತ ಪತ್ರದಲ್ಲಿಯೂ, ಅವರು ಆನ್‌ಲೈನ್‌ ವೇದಿಕೆಗಳಲ್ಲಿ ತಮ್ಮ ಸರ್ವನಾಮಗಳನ್ನು ನಮೂದಿಸುವಂತಹ ಹೊಸ ಕಾಲಂ ಸೇರಿಸುವಂತೆ ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com