ಡಿಸೆಂಬರ್ 2020-ಜೂನ್ 2021ರಲ್ಲಿ ನಡೆದಿದ್ದ ಯುಜಿಸಿ- ಎನ್‌ಇಟಿ ಪರೀಕ್ಷೆಯ ಉರ್ದು ವಿಷಯದ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಮುದ್ರಿಸಿರಲಿಲ್ಲ. ಹೀಗಾಗಿ ಫಲಿತಾಂಶ ಪರಿಷ್ಕರಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಉರ್ದು ಪ್ರಶ್ನೆಪತ್ರಿಕೆಯ ಬಹು ಆಯ್ಕೆ ಮಾದರಿಯ ಪ್ರಶ್ನೋತ್ತರವೊಂದರಲ್ಲಿ ದೋಷವಿತ್ತು ಎಂದು ಮೊಹಮ್ಮದ್ ಅಖ್ಲಾಕ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಆಯ್ಕೆ 1ನ್ನು ಉತ್ತರ ಎಂದು ಬರೆದವರಿಗೆಲ್ಲರಿಗೂ ಅಂಕ ನೀಡಲು ನಿರ್ಧರಿಸಲಾಗಿದ್ದು ಪರಿಷ್ಕೃತ ಫಲಿತಾಂಶ ನೀಡಲಾಗುವುದು ಎಂದು ಎನ್‌ಟಿಎ ನ್ಯಾಯಾಲಯಕ್ಕೆ ವಿವರಿಸಿದೆ. ಹೀಗಾಗಿ ಪರಿಷ್ಕೃತ ಫಲಿತಾಂಶ ಘೋಷಿಸುವಂತೆ ಮತ್ತು ಅರ್ಜಿದಾರ ಪರೀಕ್ಷೆಯಲ್ಲಿ ಅರ್ಹತೆ ಪಡೆದರೆ ಅವರಿಗೆ ಹೊಸದಾಗಿ ಎನ್‌ಇಟಿ ಪ್ರಮಾಣಪತ್ರ ನೀಡುವಂತೆ ನ್ಯಾ. ಸಂಜೀವ್ ನರುಲಾ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತು.
ಹೆಚ್ಚಿನ ಮಾಹಿತಿಗಾಗಿ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ಜಾಲತಾಣದ ಲಿಂಕ್ ಗಮನಿಸಿ.