ಕುತುಬ್‌ ಸಂಕೀರ್ಣದಲ್ಲಿನ ದೇವಸ್ಥಾನ ವಿಚಾರ: ಸಿವಿಲ್‌ ಆದೇಶದ ವಿರುದ್ಧದ ಮನವಿ ಆಲಿಸಲಿರುವ ದೆಹಲಿ ನ್ಯಾಯಾಲಯ [ಚುಟುಕು]

Qutub Minar complex

Qutub Minar complex

ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿರುವ ಹಿಂದೂ ಮತ್ತು ಜೈನ ದೇವಸ್ಥಾನಗಳ ಪುನರುಜ್ಜೀವನಕ್ಕೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಸಿವಿಲ್‌ ನ್ಯಾಯಾಲಯವೊಂದರ ಆದೇಶದ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಲು ದೆಹಲಿ ಜಿಲ್ಲಾ ನ್ಯಾಯಾಲಯ ಮುಂದಾಗಿದೆ [ಜಿತೇಂದರ್‌ ಸಿಂಗ್‌ ವರ್ಸಸ್‌ ಭಾರತ ಸರ್ಕಾರ ಮತ್ತಿತರರು].

ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಸಾಕೇತ್‌ ನ್ಯಾಯಾಲಯದ ಸಿವಿಲ್‌ ನ್ಯಾಯಾಧೀಶರಾದ ನೇಹಾ ಶರ್ಮಾ ಅವರು ಹಿಂದೆ ಮಾಡಿರುವ ತಪ್ಪುಗಳು ವರ್ತಮಾನದ ಶಾಂತಿ ಕದಡಲು ಆಧಾರವಾಗಲಾರದು ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿದ್ದರು.

ಹೆಚ್ಚಿನ ಮಾಹಿತಿಗೆ 'ಬಾರ್‌ ಅಂಡ್ ಬೆಂಚ್' ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com