ತಿರುಚಿದ ಛಾಯಾಚಿತ್ರ ಬಳಸಿ ಬ್ಲ್ಯಾಕ್‌ಮೇಲ್‌: ರಾಜಸ್ಥಾನ ನ್ಯಾಯಾಧೀಶೆ ದೂರು

ಛಾಯಾಚಿತ್ರಗಳನ್ನು ಒಳಗೊಂಡ ಪತ್ರದಲ್ಲಿ “ರೂ. 20 ಲಕ್ಷದೊಂದಿಗೆ ಸಿದ್ಧವಾಗಿರಿ ಇಲ್ಲದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹಾಳುಗೆಡವುತ್ತೇವೆ, ಸಮಯ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸುತ್ತೇವೆ” ಎಂದು ಬೆದರಿಸಲಾಗಿತ್ತು.
Gavel
Gavel

ರಾಜಸ್ಥಾನದ ನ್ಯಾಯಾಧೀಶೆಯೊಬ್ಬರಿಗೆ ಬೆದರಿಕೆ ಪತ್ರ ಬರೆದು ರೂ. 20 ಲಕ್ಷ ಹಣ ನೀಡದಿದ್ದರೆ ಅಶ್ಲೀಲ ಚಿತ್ರ ಸೋರಿಕೆ ಮಾಡುವುದಾಗಿ ತಿಳಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಪಡೆಯಲಾಗಿದ್ದು ಅವುಗಳನ್ನು ತಿರುಚಿ ಪತ್ರದೊಂದಿಗೆ ಜೈಪುರದ ನ್ಯಾಯಾಧೀಶರಿಗೆ ತಲುಪಿಸಲಾಗಿದೆ ಎಂದು ವರದಿಯಾಗಿದೆ.

Also Read
[ವರ್ಗಾವಣೆ ಬೆದರಿಕೆ] ಹೈಕೋರ್ಟ್‌ನಿಂದ ನ್ಯಾ. ಸಂದೇಶ್‌ರಿಗೆ ಭದ್ರತೆ, ತನಿಖೆಗೆ ಎಸ್‌ಐಟಿ ರಚನೆ ಕೋರಿದ್ದ ಪಿಐಎಲ್‌ ವಜಾ

ಛಾಯಾಚಿತ್ರಗಳನ್ನು ಒಳಗೊಂಡ ಪತ್ರದಲ್ಲಿ “ರೂ 20 ಲಕ್ಷದೊಂದಿಗೆ ಸಿದ್ಧವಾಗಿರಿ ಇಲ್ಲದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹಾಳುಗೆಡವಲಾಗುವುದು. ಸಮಯ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸುತ್ತೇವೆ” ಎಂದು ಬೆದರಿಸಲಾಗಿತ್ತು.

ಸಿಸಿಟಿವಿ ತುಣುಕಿನ ಮೂಲಕ ಕೃತ್ಯ ಎಸಗಿದವನನ್ನು ಗುರುತಿಸಲಾಗಿದ್ದರೂ, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಫೆಬ್ರವರಿ 7 ರಂದು, ನ್ಯಾಯಾಧೀಶೆಯ ಮಕ್ಕಳು ಓದುತ್ತಿರುವ ಶಾಲೆಯಿಂದ ಬಂದವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ನ್ಯಾಯಾಧೀಶರ ಸ್ಟೆನೋಗ್ರಾಫ್‌ಗೆ ಪತ್ರ ನೀಡಿದ್ದ. ಅದರಲ್ಲಿ ಛಾಯಾಚಿತ್ರಗಳಿದ್ದವು. ಆತನಿಗೆ ಸುಮಾರು 20 ವರ್ಷಗಳಿರಬಹುದು ಎಂದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.   ಫೆಬ್ರವರಿ 27 ರಂದು ಕೂಡ ನ್ಯಾಯಾಧೀಶರು ವಾಸಿಸುವ ಸರ್ಕಾರಿ ವಸತಿಗೃಹಕ್ಕೂ ಇದೇ ಬಗೆಯ ಪತ್ರವನ್ನು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ  ಫೆಬ್ರವರಿ 28 ರಂದು ದೂರು ದಾಖಲಿಸಿರುವ ನ್ಯಾಯಾಧೀಶೆ ತಮ್ಮ ನಿತ್ಯದ ಆಗುಹೋಗುಗಳ ಮೇಲೆ ಯಾರೋ ಕಣ್ಣಿಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com