ರಾಮ ಮಂದಿರ ಉದ್ಘಾಟನೆ ದಿನ ನ್ಯಾಯವಾದಿಗಳು ಹಾಜರಾಗದಿದ್ದರೆ ಪ್ರತಿಕೂಲ ಆದೇಶ ಹೊರಡಿಸದಂತೆ ನವದೆಹಲಿ ವಕೀಲರ ಸಂಘ ಮನವಿ

ಪಟಿಯಾಲ ಹೌಸ್ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪತ್ರ ಬರೆದಿರುವ ಸಂಘ, ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ದಿನ ವಿನಾಯಿತಿ ನೀಡುವಂತೆ ಕೋರಿದೆ.
ಪಟಿಯಾಲ ಹೌಸ್ ಕೋರ್ಟ್
ಪಟಿಯಾಲ ಹೌಸ್ ಕೋರ್ಟ್

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನವಾದ ಜನವರಿ 22ರಂದು ವಕೀಲರು ಮತ್ತು ಕಕ್ಷಿದಾರರು ಹಾಜರಾಗದಿದ್ದರೆ ಯಾವುದೇ ಪ್ರತಿಕೂಲ ಆದೇಶ ಹೊರಡಿಸದಂತೆ ನವದೆಹಲಿ ವಕೀಲರ ಸಂಘ ಸೋಮವಾರ ನ್ಯಾಯಾಂಗ ಅಧಿಕಾರಿಗಳಿಗೆ ಮನವಿ ಮಾಡಿದೆ.

ಪಟಿಯಾಲ ಹೌಸ್ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಸಂಘದ ಗೌರವ ಕಾರ್ಯದರ್ಶಿ ಒ ಎನ್‌ ಶರ್ಮಾ ಅವರು "ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನ ಪ್ರಾಣ ಪ್ರತಿಷ್ಠಾನೆ ನಡೆಯುತ್ತಿದ್ದು, ವಕೀಲರು 2024ರ ಜನವರಿ 22ರಂದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದಿರಬಹುದು ಎಂದು ನಾವು ಗೌರವಪೂರ್ವಕವಾಗಿ ತಿಳಿಸಲು ಬಯಸುತ್ತೇವೆ. ಆದ್ದರಿಂದ, ವಕೀಲರು ಅಥವಾ ಕಕ್ಷಿದಾರರು ಹಾಜರಾಗದಿದ್ದರೆ 2024ರ ಜನವರಿ 22ರಂದು ಯಾವುದೇ ಪ್ರತಿಕೂಲ ಆದೇಶ ಹೊರಡಿಸದಂತೆ ಎಲ್ಲಾ ನ್ಯಾಯಾಂಗ ಅಧಿಕಾರಿಗಳನ್ನುಕೋರಲಾಗುತ್ತಿದೆ" ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪ್ರತಿಷ್ಠಾಪನಾ ದಿನದಂದು 8,000ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

[ಪತ್ರದ ವಿವರಗಳಿಗಾಗಿ ಕೆಳಗೆ ಕ್ಲಿಕ್ಕಿಸಿ]

Attachment
PDF
New Delhi Bar Association.pdf
Preview

Related Stories

No stories found.
Kannada Bar & Bench
kannada.barandbench.com