ಅಕ್ಬರ್‌ ವರ್ಸಸ್‌ ಪ್ರಿಯಾ ರಮಣಿ ಪ್ರಕರಣವು ನನ್ನ ವೃತ್ತಿ ಬದುಕಿನ ಬಹುಮುಖ್ಯ ಪ್ರಕರಣ ಎಂದ ಹಿರಿಯ ವಕೀಲೆ ರೆಬೆಕಾ ಜಾನ್

“ಅಧಿಕಾರಸ್ಥರ ವಿರುದ್ಧದ ಹೋರಾಟದಲ್ಲಿ ನಿಮ್ಮ ಹಾದಿಯಲ್ಲಿ ಸತ್ಯ ಬಿಟ್ಟು ಬೇರೇನು ಇಲ್ಲದಿರುವಾಗ ಪಯಣವು ವೈಯಕ್ತಿಕವಾಗಿ ಮತ್ತಷ್ಟು ಹತ್ತಿರವಾಗುತ್ತದೆ” ಎಂದು ಜಾನ್‌ ಹೇಳಿದ್ದಾರೆ.
Priya Ramani (L), Senior Advocate Rebecca John (R)
Priya Ramani (L), Senior Advocate Rebecca John (R)

ಹಿರಿಯ ಪತ್ರಕರ್ತ ಹಾಗೂ ಮಾಜಿ ಕೇಂದ್ರ ಸಚಿವ ಎಂ ಜೆ ಅಕ್ಬರ್‌ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಲೈಂಗಿಕ ಕಿರುಕುಳ ಆರೋಪ ಮಾಡಿದ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಅಕ್ಬರ್‌ ಹೂಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಿಭಾಯಿಸುವುದು ಸಾಹಯಮಯ ಹೋರಾಟವಾಗಿತ್ತು ಎಂದು ಬುಧವಾರ ರಮಣಿ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದ ಹಿರಿಯ ವಕೀಲೆ ರೆಬೆಕಾ ಜಾನ್‌ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ಪ್ರತಿಕ್ರಿಯಿಸಿದರು.

“ಸದರಿ ಪ್ರಕರಣ ನಡೆಸುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು. ನೀವು ಹೇಳಬೇಕಾಗಿರುವುದನ್ನು ಸಮರ್ಥವಾಗಿ ಮಂಡಿಸುವುದು ಎಷ್ಟು ಕಷ್ಟ ಎಂಬುದನ್ನು ನೀವು ನ್ಯಾಯಾಲಯದ ಕೊಠಡಿಯಲ್ಲಿ ನೋಡಿದ್ದೀರಿ. ಇದು ಅತ್ಯಂತ ಕ್ಲಿಷ್ಟಕರವಾದ ವಿಚಾರಣೆ” ಎಂದು ಜಾನ್‌ ತೀರ್ಪು ಪ್ರಕಟವಾದ ಬಳಿಕ ಪ್ರತಿಕ್ರಿಯಿಸಿದರು.

“ಬೇರೆಯ ಹಲವು ಪ್ರತಿವಾದಿ ಮನವಿಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಸವಾಲಿನದ್ದಾಗಿತ್ತು. ಏಕೆಂದರೆ ಈ ತರಹದ ಪ್ರಕರಣಗಳನ್ನು ನಡೆಸಲು ಸಾಮಾನ್ಯವಾಗಿ ಯಾರೂ ಇಚ್ಛಿಸುವುದಿಲ್ಲ. ಅಧಿಕಾರಸ್ಥರ ವಿರುದ್ಧದ ಹೋರಾಟದಲ್ಲಿ ನಿಮ್ಮ ಹಾದಿಯಲ್ಲಿ ಸತ್ಯ ಬಿಟ್ಟು ಬೇರೇನು ಇಲ್ಲದಿರುವಾಗ ಪಯಣವು ವೈಯಕ್ತಿಕವಾಗಿ ನಿಮಗೆ ಮತ್ತಷ್ಟು ಹತ್ತಿರವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಹುಶಃ ಇದು ನನ್ನ ವೃತ್ತಿ ಬದುಕಿನ ಅತ್ಯಂತ ಮಹತ್ವದ ಪ್ರಕರಣವಾಗಿದೆ” ಎಂದಿದ್ದಾರೆ.

"ಸಂತ್ರಸ್ತೆಯಾದ ನಾನು ಆರೋಪಿ ಎನ್ನುವ ದೂಷಣೆ ಹೊತ್ತು ನ್ಯಾಯಾಲಯದ ಮುಂದೆ ನಿಲ್ಲಬೇಕಾಯಿತು..." ಎಂದು ಕೇಂದ್ರದ ಮಾಜಿ ಸಚಿವ ಎಂ ಜೆ ಅಕ್ಬರ್ ಹೂಡಿದ್ದ ಮಾನಹಾನಿ ಮೊಕದ್ದಮೆಯಲ್ಲಿ ದೋಷಮುಕ್ತರಾದ ಪತ್ರಕರ್ತೆ ಪ್ರಿಯಾ ರಮಣಿ ಹೇಳಿದ್ದು, ತಮ್ಮ ವಕೀಲರು ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

Related Stories

No stories found.
Kannada Bar & Bench
kannada.barandbench.com