ಅರ್ನಾಬ್‌ ಗೋಸ್ವಾಮಿ ಕುರಿತು ವರದಿ ಪ್ರಕಟಿಸಿದ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೋಟಿಸ್‌ ನೀಡಿದ ರಿಪಬ್ಲಿಕ್‌ ಟಿವಿ

ತನ್ನ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರಿಗೆ ಕಳಂಕ ಹಚ್ಚಿ, ಹಾನಿ ಉಂಟುಮಾಡುವ ಮೂಲಕ ಘನತೆ ಹಾಳು ಮಾಡುವ ದುರುದ್ದೇಶದ ಭಾಗವಾಗಿ ವರದಿ ಪ್ರಕಟಿಸಲಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಲಾದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
Republic TV, The Indian Express
Republic TV, The Indian Express

ʼರೇಟಿಂಗ್‌ ಫಿಕ್ಸ್‌ ಮಾಡಲು ಅರ್ನಾಬ್‌ ಗೋಸ್ವಾಮಿಯಿಂದ $12,000 ಮತ್ತು ರೂ. 40 ಲಕ್ಷ ಪಾವತಿ: ಪಾರ್ಥೊ ದಾಸ್‌ಗುಪ್ತʼ ಎಂಬ ತಲೆಬರಹದಡಿ ವರದಿ ಪ್ರಕಟಿಸಿದ್ದ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ರಿಪಬ್ಲಿಕ್‌ ಟಿವಿಯು ಕಾನೂನು ನೋಟಿಸ್‌ ಜಾರಿಗೊಳಿಸಿದೆ.

ಕಳಂಕ ಹಚ್ಚಿ, ಹಾನಿ ಉಂಟುಮಾಡುವ ಮೂಲಕ ತನ್ನ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರ ಘನತೆ ಹಾಳು ಮಾಡುವ ದುರುದ್ದೇಶದ ಭಾಗವಾಗಿ ವರದಿ ಪ್ರಕಟಿಸಲಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಲಾದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

“ಶಂಕಿತ ಟಿಆರ್‌ಪಿ ಹಗರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ ಎಂಬುದು ನಿಮಗೆ ಚೆನ್ನಾಗಿ ಗೊತ್ತಿದ್ದರೂ ಮೇಲೆ ಉಲ್ಲೇಖಿಸಲಾದ ತಲೆಬರಹದಡಿ ಪ್ರಕಟಿಸಲಾದ ವರದಿಯಲ್ಲಿ ನಮ್ಮ ಕಕ್ಷಿದಾರರು ಅಪರಾಧಿ ಎಂಬಂತೆ ಬಿಂಬಿಸಲಾಗಿದೆ. ವಾಸ್ತವಿಕ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೇ ಸುದ್ದಿ ಪ್ರಕಟಿಸುವ ಮೂಲಕ ನಮ್ಮ ಕಕ್ಷಿದಾರರ ಮೇಲೆ ಅಪರಾಧ ಹೇರಲು ಪ್ರಯತ್ನಿಸಲಾಗಿದೆ. ವಿಷಯಗಳ ಅಸ್ಪಷ್ಟತೆಯ ಜೊತೆಗೆ ಬಾಂಬೆ ಹೈಕೋರ್ಟ್‌ ನಿರ್ಧಾರಕ್ಕಾಗಿ ನಮ್ಮ ಕಕ್ಷಿದಾರರು ಕಾದು ಕುಳಿತಿದ್ದಾರೆ,” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

Also Read
ಟಿಆರ್‌ಪಿ ತಿರುಚಲು ಬಾರ್ಕ್‌ ಮಾಜಿ ಅಧಿಕಾರಿಗೆ ಅರ್ನಾಬ್‌ರಿಂದ 'ಲಕ್ಷಾಂತರ ಹಣ' ಲಂಚ ಪಾವತಿ: ಮುಂಬೈ ಪೊಲೀಸ್‌

ವರದಿಯ ತಲೆಬರಹವು ಉದ್ದೇಶಪೂರ್ವಕವಾಗಿ ಪ್ರುಜ್ಞಾಪೂರ್ವಕವು, ಕುಚೋದ್ಯದಿಂದ ಕೂಡಿರುವಂಥದ್ದು ಆಗಿದೆ. “ಇಂಡಿಯನ್‌ ಎಕ್ಸ್‌ಪ್ರೆಸ್‌ ಸೃಷ್ಟಿಸಿರುವ ಮತ್ತು ಜಾರಿಗೊಳಿಸುತ್ತಿರುವ ಕೆಟ್ಟ ಅಭಿಯಾನದ ಭಾಗವಾಗಿ ಕೆಡುಕಿನಿಂದ ಕೂಡಿದ, ದ್ವೇಷ, ದುರುದ್ದೇಶಪೂರಿತ ಪ್ರಯತ್ನದ ಭಾಗವಾಗಿ ನಮ್ಮ ಕಕ್ಷಿದಾರರ ವಿರುದ್ಧ ವರದಿ ಪ್ರಕಟಿಸಿಲಾಗಿದೆ. ಈ ಮೂಲಕ ಸರಿಪಡಿಸಲಾಗದ ರೀತಿಯಲ್ಲಿ ಅವರ ಮತ್ತು ರಿಪಬ್ಲಿಕ್‌ ಮೀಡಿಯಾ ನೆಟ್‌ವರ್ಕ್‌ ಘನತೆಯನ್ನು ನಾಶ ಮಾಡುವ ಉದ್ದೇಶ ಹೊಂದಲಾಗಿದೆ” ಎಂದು ವಿವರಿಸಲಾಗಿದೆ.

ಇಂಥ ವರದಿಗಳನ್ನು ಪ್ರಕಟಿಸದೇ ಅಂತರ ಕಾಯ್ದುಕೊಳ್ಳುವಂತೆ ರಿಪಬ್ಲಿಕ್‌ ಟಿವಿ ಸೂಚಿಸಿದ್ದು, ಮೇಲೆ ಪ್ರಕಟಿಸಿದ ವರದಿಗೆ ಬೇಷರತ್‌ ಕ್ಷಮೆ ಮತ್ತು ಪರಿಹಾರ ನೀಡುವಂತೆ ಕೇಳಿದೆ. ನೋಟಿಸ್‌ ಪಡೆದ ಒಂದು ದಿನದೊಳಗೆ ಕ್ರಮಕೈಗೊಳ್ಳದಿದ್ದರೆ ರಿಪಬ್ಲಿಕ್‌ ಟಿವಿಯು ಕ್ರಿಮಿನಲ್‌ ಪ್ರಕರಣ ಸೇರಿದಂತೆ ಕಾನೂನು ಕ್ರಮ ಮುಂದುವರಿಸಲಿದೆ ಎಂದು ಫೀನಿಕ್ಸ್‌ ಲೀಗಲ್‌ ಮೂಲಕ ಜಾರಿಗೊಳಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com