ನ್ಯಾಯಾಲಯಗಳ ಡಿಜಿಟಲೀಕರಣ ಕುರಿತು ನ. 4ರಂದು ಉಪನ್ಯಾಸ ನೀಡಲಿದ್ದಾರೆ ನಿವೃತ್ತ ನ್ಯಾಯಮೂರ್ತಿ ಎಸ್ ಮುರಳೀಧರ್

ವಿನಾಯಕ ಮಿಷನ್ಸ್ ಕಾನೂನು ಶಾಲೆಯ (ವಿಎಂಎಲ್ಎಸ್) ಸೆಂಟರ್ ಫಾರ್ ಜಸ್ಟಿಸ್ ಥ್ರೂ ಟೆಕ್ನಾಲಜಿ ಚೆನ್ನೈನ ಗಿಂಡಿಯಲ್ಲಿರುವ ಹ್ಯಾಬ್ಲಿಸ್ ಹೋಟೆಲ್ನಲ್ಲಿ ನವೆಂಬರ್ 4 ರಂದು ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.
1st CJT Lecture
1st CJT Lecture

ವಿನಾಯಕ ಮಿಷನ್ಸ್‌ ಕಾನೂನು ಶಾಲೆಯ (ವಿಎಂಎಲ್‌ಎಸ್) ಸೆಂಟರ್ ಫಾರ್ ಜಸ್ಟಿಸ್ ಥ್ರೂ ಟೆಕ್ನಾಲಜಿ (ಸಿಜೆಟಿ) ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯವಾದಿ ಡಾ. ಎಸ್‌ ಮುರಳೀಧರ್‌ ಅವರು “ನ್ಯಾಯಾಲಯಗಳ ಡಿಜಿಟಲೀಕರಣ - ಪೀಠದ ಅನುಭವಗಳು”ಎಂಬ ವಿಷಯವಾಗಿ ಮಾತನಾಡಲಿದ್ದಾರೆ.

ಕಾರ್ಯಕ್ರಮ 2023 ರ ನವೆಂಬರ್ 4ರ (ಶನಿವಾರ) ಬೆಳಿಗ್ಗೆ 11ಕ್ಕೆ ಚೆನ್ನೈನ ಗಿಂಡಿಯಲ್ಲಿರುವ ಹ್ಯಾಬ್ಲಿಸ್ ಹೋಟೆಲ್‌ನಲ್ಲಿ ಆರಂಭವಾಗಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ cjt@vmls.edu.in ಸಂಪರ್ಕಿಸಬಹುದಾಗಿದೆ.

ಕಾರ್ಯಕ್ರಮ ಆಯೋಜಿಸಿರುವ ಸಿಜೆಟಿ ಕಾನೂನು ಮತ್ತು ತಂತ್ರಜ್ಞಾನದ ಕ್ರಿಯಾತ್ಮಕ ಎಳೆಗಳನ್ನು ಶೋಧಿಸಲು ಸ್ಥಾಪಿತವಾಗಿದ್ದು ನವೀನ ತಂತ್ರಜ್ಞಾನದ ಬಳಕೆ ಮೂಲಕ ಕಾನೂನು ಕೈಗೆಟಕುವಂತೆ ಮಾಡುವುದು, ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸುವ ಬದ್ಧತೆ ಹೊಂದಿದೆ.

ವಿದ್ಯಾರ್ಥಿಗಳು, ಕಾನೂನು ವೃತ್ತಿಪರರು  ಹಾಗೂ ತಂತ್ರಜ್ಞಾನಾಸಕ್ತರು ಅನ್ವೇಷಣೆ, ಆವಿಷ್ಕಾರ ಮತ್ತು ಕಾನೂನು ಅಭ್ಯಾಸಗಳ ವಿಕಾಸಕ್ಕೆ ಕೊಡುಗೆ ನೀಡುವ ಸಹಕಾರಿ ಕೇಂದ್ರವಾಗಿ ಸಿಜೆಟಿ ಕಾರ್ಯ ನಿರ್ವಹಿಸುತ್ತಿದೆ.

ಸಿಜೆಟಿಯನ್ನು ವಿನಾಯಕ ಮಿಷನ್‌ ಕಾನೂನು ಶಾಲೆ ಸ್ಥಾಪಿಸಿದ್ದು , ಇದು ವಿನಾಯಕ ಮಿಷನ್‌ನ (ವಿಶ್ವವಿದ್ಯಾಲಯವೆಂದು ಪರಿಗಣಿತ) ಸಂಶೋಧನಾ ಪ್ರತಿಷ್ಠಾನದ ಒಂದು ಘಟಕವಾಗಿದೆ. ಮಹಾಬಲಿಪುರಂನಲ್ಲಿರುವ ವಿಎಂಎಲ್‌ಎಸ್‌ನ ಪ್ರಧಾನ ಕ್ಯಾಂಪಸ್‌ನಲ್ಲಿ ಸಿಜೆಟಿ ತಲೆ ಎತ್ತಿದೆ.

ಸಾಂಸ್ಥಿಕ ಮಾರ್ಗದರ್ಶನ ಒಪ್ಪಂದದಡಿ ವಿಎಂಎಲ್‌ಎಸ್‌ಗೆ ಒಪಿ ಜಿಂದಾಲ್‌ ಗ್ಲೋಬಲ್ಯೂನಿವರ್ಸಿಟಿ ಮತ್ತು ಜಿಂದಾಲ್‌ ಗ್ಲೋಬಲ್‌ ಕಾನೂನು ಶಾಲೆ ಮಾರ್ಗದರ್ಶನ ಮಾಡುತ್ತಿವೆ.

Kannada Bar & Bench
kannada.barandbench.com