ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಕುರಿತ ತೀರ್ಪಿನ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಕೆ

ಸಿಜೆಐ ಎನ್‌ ವಿ ರಮಣ ಅವರ ಮುಂದೆ ತೀರ್ಪು ಮರುಪರಿಶೀಲನೆ ಮನವಿ ಕುರಿತು ಉಲ್ಲೇಖ. ಪ್ರಕರಣವನ್ನು ಆಲಿಸಲು ಪಟ್ಟಿ ಮಾಡಲು ಸೂಚಿಸಿದ ಪೀಠ.
Supreme Court, PMLA Judgement
Supreme Court, PMLA Judgement

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌ನ ಜುಲೈ 27ರ ತೀರ್ಪನ್ನು ಪರಿಶೀಲಿಸಲು ಕೋರಿ ಅರ್ಜಿಯೊಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದೆ.

ಅರ್ಜಿಯನ್ನು ಆಲಿಸುವಂತೆ ಕೋರಿ ಸಿಜೆಐ ಎನ್‌ ವಿ ರಮಣ ಅವರ ಪೀಠದ ಮುಂದೆ ಸೋಮವಾರ ಉಲ್ಲೇಖಿಸಲಾಯಿತು. "ಇದು ಖಾನ್ವಿಲ್ಕರ್‌ ಅವರು ನೀಡಿದ್ದ ತೀರ್ಪಿನ ವಿಚಾರವೇ?" ಎಂದು ಸಿಜೆಐ ಕೇಳಿದರು.

"ಹೌದು" ಎಂದು ವಕೀಲರು ಉತ್ತರಿಸಿದರು.

"ಆಗಲಿ, ಪಟ್ಟಿ ಮಾಡುತ್ತೇವೆ," ಎಂದು ಸಿಜೆಐ ಹೇಳಿದರು.

ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಕಾಯಿದೆಯ ಸೆಕ್ಷನ್ 3 (ಅಕ್ರಮ ಹಣ ವರ್ಗಾವಣೆ ವ್ಯಾಖ್ಯಾನ), 5 (ಆಸ್ತಿ ಮುಟ್ಟುಗೋಲು), 8(4) [ಮುಟ್ಟುಗೋಲಾದ ಆಸ್ತಿಯ ಸ್ವಾಧೀನ), 17 (ಶೋಧಕಾರ್ಯ ಮತ್ತು ವಶ), 18 (ವ್ಯಕ್ತಿಗಳ ಶೋಧಕಾರ್ಯ), 19 ( ಬಂಧನದ ಅಧಿಕಾರ), 24 (ಸಾಕ್ಷ್ಯಾಧಾರದ ಹಿಮ್ಮುಖ ಹೊರೆ), 44 (ವಿಶೇಷ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುವ ಅಪರಾಧಗಳು), 45 ಅನ್ನು (ಸಂಜ್ಞೇಯವಾಗಿರುವಂತಹ ಅಪರಾಧಗಳು, ಅಸಂಜ್ಞೇಯ ಅಪರಾಧಗಳು ಮತ್ತು ನ್ಯಾಯಾಲಯದಿಂದ ಜಾಮೀನು ಪಡೆಯಲು ವಿಧಿಸುವ ಅವಳಿ ಷರತ್ತುಗಳು) ನ್ಯಾಯಾಲಯ ಎತ್ತಿ ಹಿಡಿದಿತ್ತು.

Related Stories

No stories found.
Kannada Bar & Bench
kannada.barandbench.com