ರಿಚರ್ಡ್‌ ಗೇರ್‌ ಚುಂಬನ ವಿವಾದ: ಅಶ್ಲೀಲ ಪ್ರಕರಣದಿಂದ ಶಿಲ್ಪಾ ಶೆಟ್ಟಿಯನ್ನು ಮುಕ್ತಗೊಳಿಸಿದ ಮುಂಬೈ ನ್ಯಾಯಾಲಯ

ಪ್ರಕರಣಕ್ಕೆ ಕಾರಣವಾದ ದೂರನ್ನು ಗಮನಿಸಿದ ನಂತರ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೇತಕಿ ಚವಾಣ್‌ ಅವರು ಶಿಲ್ಪಾ ಶೆಟ್ಟಿ ಘಟನೆಯಲ್ಲಿ ಸಂತ್ರಸ್ತೆಯಾಗಿದ್ದು ಇದಕ್ಕೆ ಕಾರಣರಾದ ರಿಚರ್ಡ್‌ ಗೇರ್‌ ಮುಖ್ಯ ಆರೋಪಿ ಎಂದು ಅಭಿಪ್ರಾಯಪಟ್ಟರು.
Shilpa Shetty

Shilpa Shetty

Facebook

ಸಾರ್ವಜನಿಕ ಅಸಭ್ಯ ವರ್ತನೆಗಾಗಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ದಾಖಲಾಗಿದ್ದ ಅಶ್ಲೀಲತೆಯ ಪ್ರಕರಣದಿಂದ ಶಿಲ್ಪಾ ಅವರನ್ನು ಮುಂಬೈ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸೋಮವಾರ ಮುಕ್ತಗೊಳಿಸಿದೆ. 2007ರಲ್ಲಿ ರಾಜಸ್ಥಾನದಲ್ಲಿ ನಡೆದ ಸಮಾರಂಭವೊಂದರಲ್ಲಿ ಹಾಲಿವುಡ್‌ ನಟ ರಿಚರ್ಡ್‌ ಗೇರ್‌ ಶೆಟ್ಟಿ ಅವರಿಗೆ ಬಹಿರಂಗವಾಗಿ ಮುತ್ತು ನೀಡಿದ್ದ ಪ್ರಕರಣ ಇದಾಗಿತ್ತು.

ನ್ಯಾಯಾಲಯದ ಮುಂದಿದ್ದ ಪ್ರಕರಣಕ್ಕೆ ಕಾರಣವಾದ ದೂರನ್ನು ಅವಲೋಕಿಸಿದ ನಂತರ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೇತಕಿ ಚವಾಣ್‌ ಅವರು ಘಟನೆಯಲ್ಲಿ ಶಿಲ್ಪಾ ಶೆಟ್ಟಿ ಅವರು ಸಂತ್ರಸ್ತೆಯಾಗಿದ್ದು ಇದಕ್ಕೆ ಕಾರಣರಾದ ರಿಚರ್ಡ್‌ ಗೇರ್‌ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ದೂರಿನಲ್ಲಿ ಆರೋಪಿಸಲಾದ ಯಾವುದೇ ಅಪರಾಧಗಳ ಒಂದು ಅಂಶವೂ ಸಹ ತೃಪ್ತಿಕರವಾಗಿಲ್ಲ. ಅಂತಿಮ ವರದಿಯ ಜೊತೆಗೆ ಸಲ್ಲಿಸಲಾಗಿರುವ ಯಾವುದೇ ದಾಖಲೆಗಳು ಸಹ ಸಮಾನ ಉದ್ದೇಶದ ಸೆಕ್ಷನ್‌ 34ರ ಅಡಿ ಪ್ರಸಕ್ತ ಪ್ರಕರಣದ ಆರೋಪಿಯನ್ನು (ಶಿಲ್ಪಾ ಶೆಟ್ಟಿ) ತರುವುದಿಲ್ಲ ಎಂದು ನ್ಯಾಯಾಲಯ ಹೇಳಿತು.

ಪೊಲೀಸ್‌ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಶಿಲ್ಪಾ ಶೆಟ್ಟಿಯ ವಿರುದ್ಧದ ಆರೋಪಗಳು ಆಧಾರ ರಹಿತ ಎನ್ನುವುದನ್ನು ಮನಗಂಡ ಮ್ಯಾಜಿಸ್ಟ್ರೇಟ್‌ ಅವರು ಶಿಲ್ಪಾ ಅವರನ್ನು ಅಪರಾಧಗಳಿಂದ ವಿಮುಕ್ತಗೊಳಿಸಿದರು.

Kannada Bar & Bench
kannada.barandbench.com