ಅರೆಬೆತ್ತಲೆ ರೂಪದರ್ಶಿಗಳಿರುವ ಸಬ್ಯಸಾಚಿ ಮಂಗಳಸೂತ್ರ ಜಾಹೀರಾತು ಹಿಂದೂಗಳ ಪಾಲಿಗೆ ಅಪಮಾನಕರ: ನೋಟಿಸ್ ನೀಡಿದ ವಕೀಲ

ಮಂಗಳಸೂತ್ರದ ಜಾಹೀರಾತಿಗೆ ಅರೆಬೆತ್ತಲೆ ರೂಪದರ್ಶಿಗಳನ್ನು ಬಳಸುವುದು ಆಧಾರರಹಿತವಾದುದು ಮತ್ತು ಹಿಂದೂ ಸಮುದಾಯ ಮತ್ತು ಹಿಂದೂ ವಿವಾಹ ಪದ್ದತಿಗೆ ಸಂಪೂರ್ಣ ವಿರುದ್ಧವಾದುದು ಎಂದು ಲೀಗಲ್ ನೋಟಿಸ್ ಹೇಳಿದೆ.
Ad campaign for mangalsutra (L), Sabyasachi Mukherjee (R)
Ad campaign for mangalsutra (L), Sabyasachi Mukherjee (R)

ಅರೆಬೆತ್ತಲೆ ರೂಪದರ್ಶಿಗಳನ್ನು ಬಳಸಿ ಸಬ್ಯಸಾಚಿ ಮಂಗಳಸೂತ್ರದ ಜಾಹೀರಾತು ರೂಪಿಸಿರುವ ಸಂಬಂಧ ಫ್ಯಾಷನ್‌ ಡಿಸೈನರ್‌ ಸಬ್ಯಸಾಚಿ ಮುಖರ್ಜಿ ಅವರಿಗೆ ಲೀಗಲ್‌ ನೋಟಿಸ್‌ ನೀಡಿರುವ ಮುಂಬೈ ಮೂಲದ ವಕೀಲರಾದ ಅಶುತೋಷ್ ಜೆ ದುಬೆ ಅವರು ಇದು ಹಿಂದೂ ಸಮುದಾಯ ಮತ್ತು ಹಿಂದೂ ವಿವಾಹ ಪದ್ದತಿ ಪಾಲಿಗೆ ಅಶ್ಲೀಲವಾದುದು ಮತ್ತು ಅತಿರೇಕದಿಂದ ಕೂಡಿರುವಂತಹುದು ಎಂದಿದ್ದಾರೆ.

ಮಂಗಳಸೂತ್ರ ಧರಿಸಿರುವ ಮಹಿಳಾ ರೂಪದರ್ಶಿಯೊಬ್ಬರು ಕಪ್ಪು ಬ್ರಾ ತೊಟ್ಟು ವಿವಸ್ತ್ರನಾದ ಪುರುಷ ರೂಪದರ್ಶಿಗೆ ಒರಗಿ ನಿಂತಿರುವ ರಾಯಲ್‌ ಬೆಂಗಾಲ್‌ ಮಂಗಳಸೂತ್ರ ಜಾಹೀರಾತನ್ನು ಉಲ್ಲೇಖಿಸಿ ಅಕ್ಟೋಬರ್ 28, 2021ರಂದು ಲೀಗಲ್‌ ನೋಟಿಸ್‌ ನೀಡಲಾಗಿದೆ.

ಮಂಗಳಸೂತ್ರದ ಜಾಹೀರಾತಿಗೆ ಅರೆಬೆತ್ತಲೆ ರೂಪದರ್ಶಿಗಳನ್ನು ಬಳಸುವುದು ಆಧಾರರಹಿತವಾದುದು ಮತ್ತು ಹಿಂದೂ ಸಮುದಾಯ ಮತ್ತು ಹಿಂದೂ ವಿವಾಹ ಪದ್ದತಿಗೆ ಸಂಪೂರ್ಣ ವಿರುದ್ಧವಾದುದು ಎಂದು ಲೀಗಲ್‌ ನೋಟಿಸ್‌ ಹೇಳಿದೆ.

ಏನು ಹೇಳುತ್ತದೆ ನೋಟಿಸ್‌?

  • ಮಂಗಳಸೂತ್ರ ಮಂಗಳಕರವಾಗಿದ್ದು ಎರಡು ಆತ್ಮಗಳನ್ನು ಒಗ್ಗೂಡಿಸುತ್ತದೆ. ವರ ತನ್ನ ಪವಿತ್ರ ವಿವಾಹ ದಿನದಂದು ವಧುವಿನ ಕುತ್ತಿಗೆಗೆ ಮಂಗಳಕರವಾದ ಸೂತ್ರ ಕಟ್ಟಲಿದ್ದು ಅವರ ಸಂಬಂಧ ಸೂತ್ರದಂತೆ ಮಂಗಳಕರವಾಗಿರಲಿದೆ. ಅವರು ಜೀವನದುದ್ದಕ್ಕೂ ಸಂಗಾತಿಗಳಾಗಿರುತ್ತಾರೆ.

  • ಮಹತ್ವ ಮತ್ತು ಪಾವಿತ್ರ್ಯದ ಜೊತೆಗೆ ಮಂಗಳಸೂತ್ರ ವಿವಾಹದ ಧ್ಯೋತಕವಾಗಿದೆ. ಸಂಗಾತಿಯ ನಡುವಿನ ಪ್ರೀತಿ ಮತ್ತು ಬದ್ಧತೆಯನ್ನು ಸೂಚಿಸಲು ಹೆಂಡತಿ ತನ್ನ ಜೀವನದುದ್ದಕ್ಕೂ ಧರಿಸಬೇಕಿದೆ. ಇದು ಬಹುಜನರ ಧಾರ್ಮಿಕ ಪದ್ದತಿಗಳೊಂದಿಗೆ ತಳಕು ಹಾಕಿಕೊಂಡಿದೆ. ಅಲ್ಲದೆ ಇದರ ಹಿಂದೆ ವೈಜ್ಞಾನಿಕ ಸಮರ್ಥನೆಯೂ ಇದೆ.

  • ಶುದ್ಧ ಚಿನ್ನದಿಂದ ಮಾಡಿದ ಮಂಗಳಸೂತ್ರವನ್ನು ಧರಿಸುವುದಕ್ಕೆ ಹಿಂದೂ ಸಂಸ್ಕೃತಿ ಒತ್ತು ನೀಡಲಿದ್ದು ಅದನ್ನು ಒಳಉಡುಪಿನ ಹಿಂದೆ ಮರೆ ಮಾಡಬೇಕೆಂದು ಸಲಹೆ ನೀಡಲಾಗಿದೆ.

  • ಭಿನ್ನ ಲಿಂಗೀಯ ಮತ್ತು ಸಲಿಂಗ ದಂಪತಿಯನ್ನೂ ಜಾಹೀರಾತಿನಲ್ಲಿ ಚಿತ್ರಿಸಲಾಗಿದೆ.

  • ಒಳಉಡುಪು ತೊಟ್ಟು ಮಂಗಳಸೂತ್ರ ಧರಿಸಿರುವ ರೂಪದರ್ಶಿಗಳನ್ನು ಒಳಗೊಂಡಿರುವ ಇಂತಹ ಫೋಟೋಗಳು ಅತಿರೇಕದಿಂದ ಕೂಡಿದ್ದು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ.

  • ಹಾಗಾಗಿ, ವಿನ್ಯಾಸಕರು ಇಂತಹ ಅಶ್ಲೀಲ ಚಿತ್ರಗಳನ್ನು ಹಿಂಪಡೆದು 15 ದಿನಗಳಲ್ಲಿ ಸಾರ್ವಜನಿಕ ಕ್ಷಮೆಯಾಚಿಸಬೇಕು.

  • ತಪ್ಪಿದಲ್ಲಿ ಎಲ್ಲಾ ದಂಡ, ಅಪಾಯ, ಜವಾಬ್ದಾರಿ, ವೆಚ್ಚ ಹಾಗೂ ಸನ್ನಿವೇಶಗಳಿಗೆ ವಿನ್ಯಾಸಕರೇ ಸಂಪೂರ್ಣ ಜವಾಬ್ದಾರರು.

Related Stories

No stories found.
Kannada Bar & Bench
kannada.barandbench.com