ಇ ಡಿ ನಿರ್ದೇಶಕರ ಆಸ್ತಿ ವಿವರ ಬಹಿರಂಗಪಡಿಸಲು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋದ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ

ಜಾರಿ ನಿರ್ದೇಶನಾಲಯದ ನಿರ್ದೇಶಕ ಆರ್‌ ಕೆ ಮಿಶ್ರಾ ಅವರ 2013, 2014, 2018, 2019 ಮತ್ತು 2020ನೇ ಸಾಲಿನ ಸ್ಥಿರಾಸ್ತಿಯ ವಿವರಗಳನ್ನು ಸಿಬಿಡಿಟಿ ಜಾಲತಾಣದಲ್ಲಿ ಪ್ರಕಟಿಸಿಲ್ಲ ಎಂದು ಗೋಖಲೆ ಆರೋಪಿಸಿದ್ದಾರೆ.
Saket Gokhale, ED Director, Delhi High Court
Saket Gokhale, ED Director, Delhi High Court

ಜಾರಿ ನಿರ್ದೇಶನಾಲಯದ (ಇಡಿ) ಮುಖ್ಯಸ್ಥ ಎಸ್‌ಕೆ ಮಿಶ್ರಾ ಅವರ ಸ್ಥಿರ ಆಸ್ತಿ ವಿವರಗಳನ್ನು ಸಾರ್ವಜನಿಕಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನುದ ನೀಡಲು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ (ಸಾಕೇತ್ ಗೋಖಲೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).

Also Read
ಸದ್ಯಕ್ಕೆ ಮುಫ್ತಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸುವುದಿಲ್ಲ: ಜಾರಿ ನಿರ್ದೇಶನಾಲಯ

ನಾಗರಿಕ ಸೇವೆಯಲ್ಲಿರುವವರ ಚರ ಮತ್ತು ಸ್ಥಿರಾಸ್ತಿಗಳ ವಿವರವನ್ನು 2019ರ ನವೆಂಬರ್‌ 30ರೊಳಗೆ ಸಲ್ಲಿಸುವಂತೆ ಕೇಂದ್ರೀಯ ಜಾಗೃತ ಆಯೋಗ ಆದೇಶ ಹೊರಡಿಸಿತ್ತು. ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು. ಆದರೆ ಮಿಶ್ರಾ ಅವರು 2013, 2014, 2018, 2019 ಮತ್ತು 2020ನೇ ಸಾಲಿನ ಸ್ಥಿರಾಸ್ತಿಯ ವಿವರಗಳನ್ನು ನೇರ ತೆರಿಗೆ ಕೇಂದ್ರೀಯ ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಿಲ್ಲ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಮಿಶ್ರಾ ಅವರ 2013 ಮತ್ತು 2014 ರ ವಾರ್ಷಿಕ ರಿಟರ್ನ್ಸ್ ಕೂಡ ವೆಬ್‌ಸೈಟ್‌ನಲ್ಲಿಲ್ಲ. ಅಂತಹ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನವೀಕರಿಸಬೇಕಾದುದು ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಅತ್ಯಗತ್ಯ. ಡೇಟಾಬೇಸ್‌ನಲ್ಲಿ ಮಾಹಿತಿ ಪ್ರಕಟಿಸದ ಅಧಿಕಾರಿಗಳನ್ನೇ ಇದಕ್ಕೆ ಹೊಣೆ ಮಾಡುವುದು ಮುಖ್ಯ ಎಂದಿರುವ ಗೋಖಲೆ ಅವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com