High Court of Karnataka
ಸುದ್ದಿಗಳು
ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದ ನಾಲ್ವರನ್ನು ಕಾಯಂಗೊಳಿಸಿದ ಕೊಲಿಜಿಯಂ
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಸಂಬಂಧ ಡಿಸೆಂಬರ್ 16ರಂದು ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದೆ.
ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದ ನಾಲ್ವರನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಒಪ್ಪಿಗೆ ನೀಡಿದೆ.
ಹೆಚ್ಚುವರಿ ನ್ಯಾಯಮೂರ್ತಿಗಳಾದ ಸಿಂಗಪುರಂ ರಾಘವಚಾರ್ ಕೃಷ್ಣ ಕುಮಾರ್, ಅಶೋಕ್ ಸುಭಾಷ್‌ಚಂದ್ರ ಕಿಣಗಿ, ಸೂರಜ್ ಗೋವಿಂದರಾಜ್ ಮತ್ತು ಸಚಿನ್ ಶಂಕರ್ ಮಗದುಮ್ ಅವರನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವುದಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಕೊಲಿಜಿಯಂ ಡಿಸೆಂಬರ್ 16ರ ಹೇಳಿಕೆಯಲ್ಲಿ ತಿಳಿಸಿದೆ.