ಅಮಿಕಸ್‌ ಕ್ಯೂರಿಯನ್ನಾಗಿ ಪರಿಗಣಿಸಲು ನ.14ರ ಒಳಗೆ ಅರ್ಜಿ ನಮೂನೆ ಸಲ್ಲಿಕೆಗೆ ಸುಪ್ರೀಂ ಕೋರ್ಟ್‌ ಸೂಚನೆ

2020-2022ರಲ್ಲಿ ಪ್ಯಾನಲ್‌ನಲ್ಲಿ ಸೇರಿರುವವರು ಹೊಸದಾಗಿ ಫಾರ್ಮ್‌ ʼಎʼ ನಲ್ಲಿ ಒಪ್ಪಿಗೆ ಸಲ್ಲಿಸಬೇಕು. ಫಾರ್ಮ್‌ ʼಎʼ ಜೊತೆಗೆ 10 ವರ್ಷ ವಕೀಲಿಕೆ ಕೆಲಸ ಮಾಡಿರುವ ದಾಖಲೆ/ಸರ್ಟಿಫಿಕೇಟ್‌ ಅನ್ನು ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಉಲ್ಲೇಖ.
Supreme Court of India
Supreme Court of India
Published on

ಅಮಿಕಸ್‌ ಕ್ಯೂರಿಯಾಗಿ ಕೆಲಸ ಮಾಡಲು ಬಯಸುವವರು ನವೆಂಬರ್‌ 14ರ ಒಳಗೆ ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಲು (ಎಂಪ್ಯಾನಲ್‌) ದಾಖಲೆಗಳನ್ನು ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಕಟಣೆಯ ದಿನಾಂಕಕ್ಕೆ ಅನ್ವಯವಾಗುವಂತೆ ಹತ್ತು ವರ್ಷ ಅಥವಾ ಅದಕ್ಕೂ ಹೆಚ್ಚಿನ ಕಾಲ ವಕೀಲರಾಗಿ ಕೆಲಸ ಮಾಡಿರುವ ಹಿರಿಯ ವಕೀಲರು, ಅಡ್ವೋಕೇಟ್ಸ್‌ ಆನ್‌ ರೆಕಾರ್ಡ್‌ ಮತ್ತು ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಅಲ್ಲದೆ ಇರುವವರು ಅಮಿಕಸ್‌ ಕ್ಯೂರಿಯಾಗ ಬಯಸಿದಲ್ಲಿ ತಮ್ಮ ಹೆಸರನ್ನು ಪರಿಗಣಿಸಲು ಅರ್ಜಿ ನಮೂನೆ ʼಎʼನಲ್ಲಿ ತಮ್ಮ ಸಮ್ಮತಿ ಸೂಚಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು ಎಂದು ವಿವರಿಸಲಾಗಿದೆ.

2020-2022ರಲ್ಲಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವವರು ಹೊಸದಾಗಿ ಅರ್ಜಿ ನಮೂನೆ ʼಎʼ ನಲ್ಲಿ ಒಪ್ಪಿಗೆ ಸಲ್ಲಿಸಬೇಕು. ಅದರ ಜೊತೆಗೆ 10 ವರ್ಷ ವಕೀಲಿಕೆ ಕೆಲಸ ಮಾಡಿರುವ ದಾಖಲೆ/ಸರ್ಟಿಫಿಕೇಟ್‌ ಅನ್ನು ಸಲ್ಲಿಸಬೇಕು ಎಂದು ಹೆಚ್ಚುವರಿ ರಿಜಿಸ್ಟ್ರಾರ್‌ ಮೀನಾ ಸರಿನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kannada Bar & Bench
kannada.barandbench.com