ಎಸ್‌ಸಿಬಿಎ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ರಂಜಿತ್ ಕುಮಾರ್, ವಿಕಾಸ್ ಸಿಂಗ್ ಪೈಪೋಟಿ

ಉಪಾಧ್ಯಕ್ಷ ಸ್ಥಾನಕ್ಕಾಗಿ ಹಿರಿಯ ವಕೀಲರಾದ ಪ್ರದೀಪ್ ರೈ, ಸುಕುಮಾರ್ ಪತ್ತ್ ಜೋಶಿ ಹಾಗೂ ವಕೀಲ ಎಸ್ ಸದಾಶಿವ ರೆಡ್ಡಿ ಸೆಣಸುತ್ತಿದ್ದಾರೆ.
ಎಸ್‌ಸಿಬಿಎ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ರಂಜಿತ್ ಕುಮಾರ್, ವಿಕಾಸ್ ಸಿಂಗ್ ಪೈಪೋಟಿ
A1

ಈ ಬಾರಿ ನಡೆಯಲಿರುವ ಸುಪ್ರೀಂ ಕೋರ್ಟ್ ವಕೀಲರ ಸಂಘದ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲರಾದ ವಿಕಾಸ್ ಸಿಂಗ್, ರಂಜಿತ್ ಕುಮಾರ್ ಹಾಗೂ ವಕೀಲ ನೀರಜ್ ಶ್ರೀವಾಸ್ತವ ಸ್ಪರ್ಧಿಸುತ್ತಿದ್ದಾರೆ. ವಿಕಾಸ್‌ ಸಿಂಗ್‌ ಸಂಘದ ಹಾಲಿ ಅಧ್ಯಕ್ಷರು ಕೂಡ.

ಉಪಾಧ್ಯಕ್ಷ ಸ್ಥಾನಕ್ಕಾಗಿ ಹಿರಿಯ ವಕೀಲರಾದ ಪ್ರದೀಪ್ ರೈ, ಸುಕುಮಾರ್ ಪತ್ತ್ ಜೋಶಿ ಹಾಗೂ ವಕೀಲ ಎಸ್ ಸದಾಶಿವ ರೆಡ್ಡಿ ಸೆಣಸುತ್ತಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ವಕೀಲರಾದ ಮನೀಶ್ ಕುಮಾರ್, ಅರ್ಧೇಂದು ಕುಮಾರ್ ಪ್ರಸಾದ್, ರಾಹುಲ್ ಕೌಶಿಕ್, ಅನಿಲ್ ಕುಮಾರ್ ಹೂಡಾ ಹಾಗೂ ಎ ಬಾಸ್ಕರ್ ಸ್ಪರ್ಧಿಸಲಿದ್ದಾರೆ.

ಜಂಟಿ ಕಾರ್ಯದರ್ಶಿ ಹುದ್ದೆಗೆ ವಕೀಲರಾದ ಸಸ್ಮಿತಾ ತ್ರಿಪಾಠಿ, ಅನಿಲೇಂದ್ರ ಕಾಂತ್ ಶ್ರೀವಾಸ್ತವ. ಡಿ.ಹರ್ಮೇಂದ್ರ ಪ್ರತಾಪ್ ಸಿಂಗ್ ಯಾದವ್, ಪೂರ್ಣಿಮಾ ಜೌಹಾರಿ, ಕೌಶಲ್ ಕಿಶೋರ್ ಲಾಲ್ ಗೌತಮ್, ರೋಹಿತ್ ಪಾಂಡೆ ಹಾಗೂ ಅಲ್ದಾನೀಶ್ ರೇನ್ ಕಣದಲ್ಲಿದ್ದಾರೆ.

ವಕೀಲರಾದ ಯುದಂಧರ ಪವಾರ್ ಝಾ, ಅನುರಾಗ್ ಪಾಂಡೆ, ವಿಭು ಶಂಕರ್ ಮಿಶ್ರಾ, ರಾಜೇಶ್ ಕುಮಾರ್ ಮೌರ್ಯ ಮತ್ತು ಪೂನಂ ಅಗರ್ವಾಲ್ ಪರಾಶರ್ ಖಜಾಂಚಿ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

[ಪಟ್ಟಿಯನ್ನು ಇಲ್ಲಿ ಓದಿ]

Attachment
PDF
Arvind_Kejriwal_house_vandalisaiton.pdf
Preview
Kannada Bar & Bench
kannada.barandbench.com