ಎಸ್‌ಸಿಬಿಎ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಆರು ವಕೀಲರ ಸ್ಪರ್ಧೆ

ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿಗಳ ಆಯ್ಕೆಗಾಗಿ ಮೇ 16 ರಂದು ಚುನಾವಣೆ ನಡೆಯಲಿದೆ.
ಎಸ್‌ಸಿಬಿಎ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಆರು ವಕೀಲರ ಸ್ಪರ್ಧೆ

ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಕಾರ್ಯಕಾರಿ ಸಮಿತಿಗೆ ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬ ವಕೀಲೆ ಸೇರಿದಂತೆ ಆರು ನ್ಯಾಯವಾದಿಗಳು ಸ್ಪರ್ಧಿಸುತ್ತಿದ್ದಾರೆ.

ಕಣದಲ್ಲಿರುವ ಆರು ವಕೀಲರ ಹೆಸರುಗಳು ಇಂತಿವೆ:

- ಹಿರಿಯ ನ್ಯಾಯವಾದಿ ಆದೀಶ್ ಸಿ ಅಗರವಾಲಾ (ಹಾಲಿ ಅಧ್ಯಕ್ಷರು);

- ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್;

- ಹಿರಿಯ ವಕೀಲೆ ಪ್ರಿಯಾ ಹಿಂಗೋರನಿ;

- ಹಿರಿಯ ನ್ಯಾಯವಾದಿ ಪ್ರದೀಪ್ ಕುಮಾರ್ ರೈ;

- ವಕೀಲ ನೀರಜ್ ಶ್ರೀವಾಸ್ತವ;

- ನ್ಯಾಯವಾದಿ ತ್ರಿಪುರಾರಿ ರೇ.

ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿಗಳ ಆಯ್ಕೆಗಾಗಿ ಮೇ 16ರಂದು ಚುನಾವಣೆ ನಡೆಯಲಿದೆ.

ಸಿಬಲ್ ಎರಡು ದಶಕಗಳ ನಂತರ ಈ ಹುದ್ದೆಗೆ ಸ್ಪರ್ಧಿಸುತ್ತಿದ್ದು. ಅವರು ಕಡೆಯ ಬಾರಿ 2001-02ರಲ್ಲಿ ಎಸ್‌ಸಿಬಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ಅವರು 1995-1996 ಹಾಗೂ 1997-1998ರಲ್ಲಿ ಎರಡು ಬಾರಿ ಸೇವೆ ಸಲ್ಲಿಸಿದ್ದರು.

ಹಾಲಿ ಅಧ್ಯಕ್ಷ ಡಾ. ಅಗರ್‌ವಾಲಾ ಕಳೆದ ವರ್ಷ ತಮ್ಮ ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ದುಶ್ಯಂತ್ ದವೆ ಅವರನ್ನು ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ಬಾರಿ ಕಣಕ್ಕಿಳಿದಿರುವ ಪ್ರದೀಪ್ ಕುಮಾರ್ ರೈ ಈ ಹಿಂದೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕಳೆದ ವರ್ಷವೂ ಶ್ರೀವಾಸ್ತವ ಸ್ಪರ್ಧಿಸಿದ್ದರು.

ಹಿರಿಯ ನ್ಯಾಯವಾದಿ ಸುಕುಮಾರ್ ಪಟ್ಟಜೋಶಿ ಹಾಲಿ ಉಪಾಧ್ಯಕ್ಷರಾಗಿದ್ದರೆ, ವಕೀಲ ಯುಗಂಧರ ಪವಾರ್ ಝಾ ಖಜಾಂಚಿಯಾಗಿದ್ದಾರೆ.

ಎಸ್‌ಸಿಬಿಎ ಪದಾಧಿಕಾರಿಗಳಲ್ಲಿ ಮೂರನೇ ಒಂದರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಈಚೆಗಷ್ಟೇ (ಮೇ 2ರಂದು) ನ್ಯಾಯಾಲಯ ಆದೇಶಿಸಿತ್ತು.

ಈ ವರ್ಷ,  ಸಂಘದ ಮೂವರು ಕಾರ್ಯಕಾರಿ ಸದಸ್ಯರು, ಇಬ್ಬರು ಹಿರಿಯ ಕಾರ್ಯಕಾರಿ ಸದಸ್ಯರು ಹಾಗೂ ಖಜಾಂಚಿ ಹುದ್ದೆಗಳಲ್ಲಿ ಮಹಿಳೆಯರು ಇರಬೇಕು ಎಂದು ನ್ಯಾಯಾಲಯ ಆಗ ತಿಳಿಸಿತ್ತು.

ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಕಾರ್ಯಕಾರಿ ಸಮಿತಿಗೆ ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬ ವಕೀಲೆ ಸೇರಿದಂತೆ ಆರು ನ್ಯಾಯವಾದಿಗಳು ಸ್ಪರ್ಧಿಸುತ್ತಿದ್ದಾರೆ.

Kannada Bar & Bench
kannada.barandbench.com