ದಿನ ನಿತ್ಯ ಆನ್‌ಲೈನ್ ತರಗತಿ ನಡೆಸಿದರೆ ಮಾತ್ರ ಬೋಧನಾ ಶುಲ್ಕ ಸಂಗ್ರಹಿಸಬಹುದು: ಪಂಜಾಬ್-ಹರಿಯಾಣ ಹೈಕೋರ್ಟ್‌

ಜೂನ್ 30ರ ಆದೇಶದಲ್ಲಿ ಅಲ್ಪ ಬದಲಾವಣೆ ಮಾಡಿರುವ ನ್ಯಾಯಮೂರ್ತಿಗಳಾದ ರಾಜೀವ್ ಶರ್ಮಾ ಮತ್ತು ಹರೀಂದರ್ ಸಿಂಗ್ ಸಿಧು ಅವರಿದ್ದ ಪೀಠವು ವಿನಿಮಯ ತತ್ವವು ಶಾಲಾ ಶುಲ್ಕ ಸಂಗ್ರಹಿಸುವುದಕ್ಕೂ ಅನ್ವಯವಾಗುತ್ತದೆ ಎಂದಿದೆ.
Classroom
Classroom

ಸಾಂಕ್ರಾಮಿಕತೆಯ ನಡುವೆಯೂ ದಿನನಿತ್ಯ ಆನ್‌ಲೈನ್‌ ತರಗತಿ ನಡೆಸಿದ್ದರೆ ಮಾತ್ರ ಬೋಧನಾ ಶುಲ್ಕ ಸಂಗ್ರಹಿಸಬಹುದು ಎಂದು ಗುರುವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ.

ಕೋವಿಡ್ ಸಾಂಕ್ರಾಮಿಕತೆಯ ಲಾಕ್‌ಡೌನ್ ಅವಧಿಯಲ್ಲಿ ತರಗತಿ ನಡೆಸಿದ್ದರೂ ಅಥವಾ ನಡೆಸದೇ ಇದ್ದರೂ ಬೋಧನಾ ಶುಲ್ಕ ಸ್ವೀಕರಿಸಬಹುದು ಎಂದು ಆದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಅಕ್ಟೋಬರ್ 12ಕ್ಕೆ ವಿಚಾರಣೆ ಮುಂದೂಡಿದೆ.

ಮೇಲ್ಮನವಿಗೆ ಒಳಪಟ್ಟಿರುವ ಆದೇಶದಲ್ಲಿ ಅಲ್ಪ ಬದಲಾವಣೆ ಮಾಡಿರುವ ನ್ಯಾಯಮೂರ್ತಿಗಳಾದ ರಾಜೀವ್ ಶರ್ಮಾ ಮತ್ತು ಹರೀಂದರ್ ಸಿಂಗ್ ಸಿಧು ಅವರನ್ನೊಳಗೊಂಡ ವಿಭಾಗೀಯ ಪೀಠವು ವಿನಿಮಯ (ಕ್ವಿಡ್‌ ಪ್ರೊ ಕ್ವೊ) ತತ್ವವು ಶಾಲಾ ಶುಲ್ಕ ಸಂಗ್ರಹಿಸುವುದಕ್ಕೂ ಅನ್ವಯವಾಗುತ್ತದೆ ಎಂದು ಹೇಳಿದೆ.

ಮಧ್ಯಂತರ ತಡೆಯಾಜ್ಞೆ ಹೊರಡಿಸಿರುವ ವಿಭಾಗೀಯ ಪೀಠವು ಹೀಗೆ ಹೇಳಿದೆ:

“ಇಂಥ ಪ್ರಕರಣಗಳಲ್ಲಿ ವಿನಿಮಯ ತತ್ವ ಅನ್ವಯವಾಗಲಿದೆ. ನ್ಯಾಯಪಾಲನಾ ದೃಷ್ಟಿಯಿಂದ ಲಾಕ್‌ಡೌನ್ ಸಂದರ್ಭದಲ್ಲೂ ದಿನನಿತ್ಯ ಆನ್‌ಲೈನ್ ಮೂಲಕ ಬೋಧನೆ ಮಾಡಿದ್ದರೆ ಬೋಧನಾ ಶುಲ್ಕ ಸಂಗ್ರಹಿಸಬಹುದು."
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಸಾಂಕ್ರಾಮಿಕತೆ ಮತ್ತು ಲಾಕ್‌ಡೌನ್‌ಗೂ ಮುನ್ನ ಶಿಕ್ಷಕರು ಮತ್ತು ಸಿಬ್ಬಂದಿಗೆ ಹೇಗೆ ವೇತನ ಪಾವತಿಸಲಾಗುತ್ತಿತ್ತೋ ಅದೇ ರೀತಿ ಈಗಲೂ ವೇತನ ಪಾವತಿಸಬೇಕು. ಇದು ಎಲ್ಲಾ ವಿಭಾಗದ ಶಾಲಾ ಸಿಬ್ಬಂದಿ, ಶಾಶ್ವತ, ಗುತ್ತಿಗೆ, ವಿಶೇಷ ನೇಮಕಾತಿ ಮತ್ತು ತಾತ್ಕಾಲಿಕವಾಗಿ ನೇಮಕಗೊಂಡಿರುವವರಿಗೂ ಅನ್ವಯವಾಗುತ್ತದೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

Also Read
ಸ್ಥಳೀಯರಿಗೆ ಶೇ 25 ಮೀಸಲಾತಿ ನೀಡುವ ರಾಷ್ಟ್ರೀಯ ಕಾನೂನು ಶಾಲೆ ತಿದ್ದುಪಡಿ ಕಾಯಿದೆ ರದ್ದುಗೊಳಿಸಿದ ಹೈಕೋರ್ಟ್

ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಾರಿಗೆ ಸೇವೆ ಬಳಸುತ್ತಿಲ್ಲವಾದ್ದರಿಂದ ಅದರ ಶುಲ್ಕ ವಿಧಿಸಬಾರದು ಎಂದು ಆಡಳಿತ ಮಂಡಳಿಗೆ ಸೂಚಿಸಿದೆ. ಲಾಕ್‌ಡೌನ್ ಅವಧಿಯಲ್ಲಿ ಶಾಲೆಯ ಬ್ಯಾಲೆನ್ಸ್ ಶೀಟುಗಳನ್ನು ಲೆಕ್ಕಪರಿಶೋಧಕರಿಂದ ಪರಿಶೀಲಿಸಿ ಎರಡು ವಾರಗಳ ಒಳಗೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ಸೂಚಿಸಿದೆ.

Related Stories

No stories found.
Kannada Bar & Bench
kannada.barandbench.com