ಖ್ಯಾತ ನ್ಯಾಯವಾದಿ, ಮಾಜಿ ಅಟಾರ್ನಿ ಜನರಲ್‌ ಸೋಲಿ ಸೊರಾಬ್ಜಿ ಇನ್ನಿಲ್ಲ; ಕೋವಿಡ್‌ನಿಂದಾಗಿ ನಿಧನ

ಏಳು ದಶಕಗಳಿಂದ ಕಾನೂನು ವೃತ್ತಿಯಲ್ಲಿದ್ದ ಸೋಲಿ ಸೊರಾಬ್ಜಿ ಅವರು 1989-90 ಮತ್ತು ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ 1998 ರಿಂದ 2004ರವರೆಗೆ ಎರಡು ಬಾರಿ ಅಟಾರ್ನಿ ಜನರಲ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.
Soli Sorabjee
Soli Sorabjee

ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಭಾರತದ ಖ್ಯಾತ ನ್ಯಾಯವಾದಿ, ನ್ಯಾಯಶಾಸ್ತ್ರಜ್ಞ ಸೋಲಿ ಸೊರಾಬ್ಜಿ ಅವರು ಶುಕ್ರವಾರ ನಿಧನರಾಗಿದ್ದಾರೆ.

1930ರಲ್ಲಿ ಜನಿಸಿದ ಸೊರಾಬ್ಜಿ ಅವರು 1953ರಲ್ಲಿ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡಿದ್ದರು. 1971ರಲ್ಲಿ ಅವರಿಗೆ ಹಿರಿಯ ವಕೀಲ ಮಾನ್ಯತೆಯನ್ನು ಬಾಂಬೆ ಹೈಕೋರ್ಟ್‌ ನೀಡಿತ್ತು.

ಶ್ರೇಷ್ಠ, ಘನತೆವೆತ್ತ ನ್ಯಾಯಶಾಸ್ತ್ರಜ್ಞ ಸೋಲಿ ಸೊರಾಬ್ಜಿ ಅವರು ಇಂದು ನಿಧನರಾಗಿದ್ದಾರೆ. ಇದೊಂದು ಅತ್ಯಂತ ವಿಷಾದದ ದಿನ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ನ್ಯಾ. ಎನ್‌ ವಿ ರಮಣ, ಭಾರತದ ಮುಖ್ಯ ನ್ಯಾಯಮೂರ್ತಿಗಳು

ಏಳು ದಶಕಗಳಿಂದ ಕಾನೂನು ವೃತ್ತಿಯಲ್ಲಿದ್ದ ಸೋಲಿ ಸೊರಾಬ್ಜಿ ಅವರು ಎರಡು ಬಾರಿ ಭಾರತದ ಅಟಾರ್ನಿ ಜನರಲ್‌ ಆಗಿ ಸೇವೆ ಸಲ್ಲಿಸಿದ್ದರು. 1989-90ರ ಅವಧಿಯಲ್ಲಿ ಮೊದಲ ಬಾರಿಗೆ ಹಾಗೂ ಎನ್‌ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಅಂದರೆ 1998 ರಿಂದ 2004ರವರೆಗೆ ಎರಡನೆಯ ಬಾರಿಗೆ ಅಟಾರ್ನಿ ಜನರಲ್‌ ಆಗಿ ಸೊರಾಬ್ಜಿ ಅವರು ಕರ್ತವ್ಯ ನಿರ್ವಹಿಸಿದ್ದರು.

Kannada Bar & Bench
kannada.barandbench.com