ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌ ವೆಂಟಕರಮಣಿ ನೇಮಕ

ಸೆಪ್ಟೆಂಬರ್‌ 30ರಂದು ನಿವೃತ್ತರಾಗಲಿರುವ ಹಾಲಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಂದ ವೆಂಕಟರಮಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
Senior Advocate R venkatramani
Senior Advocate R venkatramani
Published on

ಹಿರಿಯ ವಕೀಲ ಆರ್‌ ವೆಂಕಟರಮಣಿ ಅವರನ್ನು ನೂತನ ಅಟಾರ್ನಿ ಜನರಲ್‌ ಆಗಿ ನೇಮಕ ಮಾಡಲಾಗಿದೆ. ಸೆಪ್ಟೆಂಬರ್‌ 30ರಂದು ನಿವೃತ್ತರಾಗಲಿರುವ ಹಾಲಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಂದ ವೆಂಕಟರಮಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಮೂರು ವರ್ಷಗಳ ಅವಧಿಗೆ ವೆಂಕಟರಮಣಿ ಅವರನ್ನು ನೇಮಕ ಮಾಡಲಾಗಿದ್ದು, ಕಾನೂನು ಇಲಾಖೆಯು ಈ ಸಂಬಂಧ ಅಧಿಸೂಚನೆ ಪ್ರಕಟಿಸಿದೆ.

1950ರ ಏಪ್ರಿಲ್‌ 13ರಂದು ಪುದುಚೆರಿಯಲ್ಲಿ ಜನಿಸಿದ ವೆಂಕಟರಮಣಿ ಅವರು 1977ರಲ್ಲಿ ತಮಿಳುನಾಡು ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. 1979ರಲ್ಲಿ ಸುಪ್ರೀಂ ಕೋರ್ಟ್‌ಗೆ ತಮ್ಮ ಪ್ರಾಕ್ಟೀಸ್‌ ವರ್ಗಾಯಿಸಿಕೊಂಡ ವೆಂಕಟರಮಣಿ ಅವರಿಗೆ 1997ರಲ್ಲಿ ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾಗಿ ಪದೋನ್ನತಿ ಪಡೆದರು. 2010 ಮತ್ತು 2013ರಲ್ಲಿ ವೆಂಕಟರಮಣಿ ಅವರು ಕಾನೂನು ಆಯೋಗದ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

Also Read
ಭಾರತದ ಅಟಾರ್ನಿ ಜನರಲ್ ಹುದ್ದೆ ನಿರಾಕರಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಕೇಂದ್ರ ಸರ್ಕಾರ, ಹಲವು ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಪರವಾಗಿ ವೆಂಕಟರಮಣಿ ವಾದ ಮಂಡಿಸಿದ್ದಾರೆ. ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು ಅಟಾರ್ನಿ ಜನರಲ್‌ ಆಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ರೋಹಟ್ಗಿ ಅವರು ಒಪ್ಪಿಗೆಯನ್ನು ಹಿಂಪಡೆದಿದ್ದರು.

Kannada Bar & Bench
kannada.barandbench.com