ಆಸ್ತಿ ಪಾಲು ನಿರಾಕರಣೆಗೆ ಮಕ್ಕಳು ಕಾನೂನು ದುರ್ಬಳಕೆ ಮಾಡದಂತೆ ನ್ಯಾಯಮಂಡಳಿ ಖಾತರಿಪಡಿಸಬೇಕು: ಬಾಂಬೆ ಹೈಕೋರ್ಟ್‌

ಹಲವು ಪ್ರಕರಣಗಳಲ್ಲಿ ಜನರ ಕಾನೂನುಬದ್ಧ ವಾರಸುದಾರರ ನಡುವಿನ ಆಸ್ತಿ ವಿವಾದ ಬಗೆಹರಿಸುವ ಸಾಧನವಾಗಿ ಹಿರಿಯ ನಾಗರಿಕ ಕಾಯಿದೆ ಬಳಕೆಯಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
Bombay High Court
Bombay High Court

ಹಿರಿಯ ನಾಗರಿಕರ ಸ್ಥಿರಾಸ್ತಿಯಲ್ಲಿ ಮಕ್ಕಳಿಗೆ ಪಾಲು ನಿರಾಕರಿಸಿದ್ದಕ್ಕೆ ಅದನ್ನು ಮಕ್ಕಳು ದುರ್ಬಳಕೆ ಮಾಡದಂತೆ ಖಾತರಿವಹಿಸಲು ಪೋಷಕರು ಮತ್ತು ಹಿರಿಯ ನಾಗರಿಕ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ನ್ಯಾಯಮಂಡಳಿ ಈಚೆಗೆ ಬಾಂಬೆ ಹೈಕೋರ್ಟ್‌ ನಿರ್ದೇಶಿಸಿದೆ.

ಹಲವು ಪ್ರಕರಣಗಳಲ್ಲಿ ಜನರ ಕಾನೂನುಬದ್ಧ ವಾರಸುದಾರರ ನಡುವಿನ ಆಸ್ತಿ ವಿವಾದ ಬಗೆಹರಿಸುವ ಯಂತ್ರವಾಗಿ ಹಿರಿಯ ನಾಗರಿಕ ಕಾಯಿದೆ ಬಳಕೆಯಾಗುತ್ತಿದೆ ಎಂದು ನ್ಯಾಯಮೂರ್ತಿ ಸಂದೀಪ್‌ ವಿ ಮರ್ನೆ ಹೇಳಿದ್ದಾರೆ.

“ಹಿರಿಯ ನಾಗರಿಕ ಕಾಯಿದೆ ನಿಬಂಧನೆಗಳನ್ನು ಜನರ ಕಾನೂನುಬದ್ಧ ವಾರಸುದಾರರ ನಡುವಿನ ಆಸ್ತಿ ವಿವಾದ ಬಗೆಹರಿಸುವ ಯಂತ್ರವನ್ನಾಗಿ ಬಳಕೆ ಮಾಡಲಾಗದು. ಅದಾಗ್ಯೂ, ದುರದೃಷ್ಟಕರವೆಂದರೆ ಹಲವು ಪ್ರಕರಣಗಳಲ್ಲಿ ಈ ನಡೆಯನ್ನು ಪಕ್ಷಕಾರರು ಅನುಸರಿಸುತ್ತಾರೆ. ಆದ್ದರಿಂದ, ಹಿರಿಯ ನಾಗರಿಕರ ಸ್ಥಿರಾಸ್ತಿಯಲ್ಲಿ ಮಕ್ಕಳಿಗೆ ಪಾಲು ನಿರಾಕರಿಸಿದ್ದಕ್ಕೆ ಅದನ್ನು ಮಕ್ಕಳು ದುರ್ಬಳಕೆ ಮಾಡದಂತೆ ನ್ಯಾಯಮಂಡಳಿ ಖಾತರಿವಹಿಸಬೇಕು” ಎಂದಿದೆ.

ತಂದೆಯು ಪುತ್ರನ ಪರವಾಗಿ ಮಾಡಿದ್ದ ದಾನ ಪತ್ರವನ್ನು ರದ್ದುಪಡಿಸಿ 2022ರ ಅಕ್ಟೋಬರ್‌ನಲ್ಲಿ ನ್ಯಾಯಮಂಡಳಿ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮರ್ನೆ ಪುರಸ್ಕರಿಸಿದ್ದಾರೆ.

Kannada Bar & Bench
kannada.barandbench.com