ಅನುಭವಿ ವಕೀಲರಿಗೆ ವರ್ಷಕ್ಕೆ ಒಂದು ಅಂಕ ನೀಡಿ ಹಿರಿಯ ನ್ಯಾಯವಾದಿ ಹುದ್ದೆಗೆ ಪರಿಗಣಿಸಲು ಸುಪ್ರೀಂ ಸಮ್ಮತಿ [ಚುಟುಕು]

Lawyers
Lawyers

ಹತ್ತರಿಂದ 20 ವರ್ಷ ಪ್ರಾಕ್ಟೀಸ್‌ ಮಾಡಿದ ವಕೀಲರಿಗೆ 10 ಅಂಕಗಳನ್ನು ನೀಡಿ ಅದರ ಆಧಾರದ ಮೇಲೆ ಹಿರಿಯ ನ್ಯಾಯವಾದಿ ಹುದ್ದೆ ನೀಡುವ ಬದಲಿಗೆ ಹತ್ತು ವರ್ಷ ಸೇವೆ ಸಲ್ಲಿಸಿರುವ ವಕೀಲರಿಗೆ ಪ್ರತಿ ವರ್ಷಕ್ಕೆ ಒಂದರಂತೆ ಅಂಕ ನೀಡಿ ಅದರ ಆಧಾರದ ಮೇಲೆ ಹಿರಿಯ ನ್ಯಾಯವಾದಿ ಹುದ್ದೆ ನೀಡಲು ಸುಪ್ರೀಂ ಕೋರ್ಟ್‌ ಬುಧವಾರ ಸಮ್ಮತಿ ಸೂಚಿಸಿದೆ. ಆ ಮೂಲಕ ಉನ್ನತ ನ್ಯಾಯಾಂಗಕ್ಕೆ ಹಿರಿಯ ನ್ಯಾಯವಾದಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಮಾರ್ಪಾಡು ಮಾಡಿದೆ.

ಅನುಭವಕ್ಕೆ ತಕ್ಕಂತೆ ಅಂಕದ ಮಾನದಂಡ ಪರಿಗಣಿಸಬೇಕು ಎಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ಅವರು ಮಾಡಿದ್ದ ಮನವಿ ಆಧರಿಸಿ ನ್ಯಾಯಮೂರ್ತಿಗಳಾದ ಯು ಯು ಲಲಿತ್‌, ರವೀಂದ್ರ ಭಟ್‌ ಹಾಗೂ ಪಿ ಎಸ್‌ ನರಸಿಂಹ ಅವರಿದ್ದ ಪೀಠ ಪರಿಹಾರ ನೀಡಿತು. ಹಿರಿಯ ನ್ಯಾಯವಾದಿ ಹುದ್ದೆಗೆ ವಕೀಲರನ್ನು ಪರಿಗಣಿಸುವಾಗ ಕೆಲ ಹೈಕೋರ್ಟ್‌ಗಳು ಏಕಪಕ್ಷೀಯ ಮತ್ತು ತರತಮ ನೀತಿ ಅನುಸರಿಸುತ್ತಿವೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com