ದೆಹಲಿ ಗಲಭೆ: ಜಾಮೀನು ಸಿಕ್ಕರೂ ಪೊಲೀಸರತ್ತ ಬಂದೂಕು ತೋರಿದ ಪ್ರಕರಣದಲ್ಲಿ ಕಂಬಿ ಹಿಂದೆ ಉಳಿಯಲಿರುವ ಶಾರೂಖ್ ಪಠಾಣ್

ಏಪ್ರಿಲ್ 2020ರ ಪ್ರಕರಣದಲ್ಲಿ ಪಠಾಣ್ ನ್ಯಾಯಾಂಗ ಬಂಧನದಲ್ಲಿದ್ದಾರೆ ಉಳಿದ ಆರೋಪಿಗಳಿಗೆ ಜಾಮೀನು ದೊರೆತಿದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು.
Delhi Police, Karkardooma Court
Delhi Police, Karkardooma Court
Published on

ಮೂರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ನಡೆದಿದ್ದ ದೆಹಲಿ ಗಲಭೆ ವೇಳೆ ಪೊಲೀಸರತ್ತ ಬಂದೂಕು ತೋರಿಸಿದ ಆರೋಪ ಎದುರಿಸುತ್ತಿದ್ದ ಶಾರುಖ್ ಪಠಾಣ್‌ಗೆ ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ಮತ್ತು ಪರ ಪ್ರತಿಭಟನಾಕಾರರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಹಲವಾರು ಪೊಲೀಸ್ ಸಿಬ್ಬಂದಿಗೆ  ಮತ್ತು ರೋಹಿತ್ ಶುಕ್ಲಾ ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿದೆ. ಆದರೆ ಪೊಲೀಸರಿಗೆ ಬಂದೂಕು ತೋರಿದ ಪ್ರಕರಣದಲ್ಲಿ ಜಾಮೀನು ದೊರೆಯದ ಕಾರಣ ಅವರು ಇನ್ನೂ ಜೈಲಿನಲ್ಲೇ ಇರಬೇಕಿದೆ.

Also Read
ದೆಹಲಿ ಗಲಭೆ: ತನ್ಹಾ, ದೇವಾಂಗನಾ, ನತಾಶಾ ಜಾಮೀನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ

ಏಪ್ರಿಲ್ 2020ರ ಪ್ರಕರಣದಲ್ಲಿ ಪಠಾಣ್ ನ್ಯಾಯಾಂಗ ಬಂಧನದಲ್ಲಿದ್ದಾರೆ ಉಳಿದ ಆರೋಪಿಗಳಿಗೆ ಜಾಮೀನು ದೊರೆತಿದೆ ಎಂಬ ಅಂಶವನ್ನು ಗಮನಿಸಿದ ಕಡ್‌ಕಡ್‌ಡೂಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಅಮಿತಾಭ್ ರಾವತ್ ಅವರು ಪಠಾಣ್‌ಗೆ ಜಾಮೀನು ನೀಡಿದರು.

ರೋಹಿತ್‌ ಶುಕ್ಲಾ ಮೇಲೆ ಪಠಾಣ್‌ ಗುಂಡು ಹಾರಿಸಿಲ್ಲ ಬದಲಿಗೆ ಹಾಗೆ ಗುಂಡು ಹಾರಿಸಿದ ಗಲಭೆಕೋರ ಗುಂಪಿನ ಭಾಗವಾಗಿದ್ದರು ಪಠಾಣ್‌ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು. ಹಾಗಾಗಿ ₹ 50,000 ಬಾಂಡ್ ನೀಡುವಂತೆ ಸೂಚಿಸಿದ ಅದು ಜಾಮೀನು ಮಂಜೂರು ಮಾಡಿತು.

ಗಲಭೆ, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಕಾನೂನುಬಾಹಿರ ಸಭೆ ಸೇರಿದಂತೆ ಹಲವು ಅಪರಾಧಗಳಲ್ಲಿ ಪಠಾಣ್ ಆರೋಪಿಯಾಗಿದ್ದಾರೆ. ಡಿಸೆಂಬರ್ 2021ರಲ್ಲಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 147, 148, 149, 186, 188, 153ಎ, 283, 353, 332, 323 ಹಾಗೂ 307ರ ಅಡಿಯಲ್ಲಿ ಆರೋಪ ಮಾಡಲಾಗಿತ್ತು.

Kannada Bar & Bench
kannada.barandbench.com