ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಶೂಟೌಟ್‌: ಗ್ಯಾಂಗ್‌ಸ್ಟರ್‌ ಜಿತೇಂದ್ರ ಗೋಗಿ, ಇನ್ನಿಬ್ಬರು ಗುಂಡಿಗೆ ಬಲಿ

ವಕೀಲರ ವೇಷದಲ್ಲಿದ್ದ ಇಬ್ಬರು ದಾಳಿಕೋರರು ಗೋಗಿಯ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದರು. ಆರೋಪಿಗಳನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
Gun
GunRepresentative Image

ನವದೆಹಲಿಯ ರೋಹಿಣಿ ನ್ಯಾಯಾಲಯದ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಶೂಟೌಟ್‌ನಲ್ಲಿ ಗ್ಯಾಂಗ್‌ಸ್ಟರ್‌ ಜಿತೇಂದ್ರ ಗೋಗಿ ಹಾಗೂ ಮತ್ತಿಬ್ಬರು ಗುಂಡಿಗೆ ಬಲಿಯಾಗಿದ್ದಾರೆ. ನ್ಯಾಯಾಲಯದ 207ನೇ ಕೊಠಡಿಯಲ್ಲಿ ಘಟನೆ ನಡೆದಿದ್ದು, ವಿಚಾರಣಾಧೀನ ಕೈದಿಯಾಗಿದ್ದ ಗೋಗಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆ ತಂದಿದ್ದ ವೇಳೆ ಘಟನೆ ನಡೆದಿದೆ.

ವಕೀಲರ ವೇಷದಲ್ಲಿದ್ದ ಇಬ್ಬರು ದಾಳಿಕೋರರು ಗೋಗಿಯ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದರು. ಆರೋಪಿಗಳನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

“ಗೋಗಿಯವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇಬ್ಬರು ವಕೀಲರ ವೇಷದಲ್ಲಿ ಗೋಗಿಗಾಗಿ ಕಾಯುತ್ತಿದ್ದರು. ನ್ಯಾಯಾಲಯದ ಕೊಠಡಿಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಶೂಟೌಟ್‌ ಆರಂಭವಾಗಿದ್ದು, ಗೋಗಿಯನ್ನು ಹತ್ಯೆಗೈಯ್ಯಲಾಗಿದೆ. ಇಬ್ಬರು ಸಂಚುಕೋರರನ್ನು ದೆಹಲಿ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದರು” ಎಂದು ಪ್ರತ್ಯಕ್ಷದರ್ಶಿಯೊಬ್ಬರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.

Kannada Bar & Bench
kannada.barandbench.com