ತನ್ನ ರಿಜಿಸ್ಟ್ರಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸಿಕ್ಕಿಂ ಹೈಕೋರ್ಟ್ ಮುಟ್ಟಿನ ರಜೆ ಸೌಲಭ್ಯ ಕಲ್ಪಿಸಿದೆ.
ಮಾಸಿಕ ರಜೆ ಪಡೆಯಲು ಹೈಕೋರ್ಟ್ ವೈದ್ಯಾಧಿಕಾರಿಗಳ ಶಿಫಾರಸು ಅಗತ್ಯ ಎಂದು ಮೇ 27ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
"ಹೈಕೋರ್ಟ್ ರಿಜಿಸ್ಟ್ರಿಯಲ್ಲಿರುವ ಮಹಿಳಾ ಉದ್ಯೋಗಿಗಳು ಇನ್ನು ಮುಂದೆ ತಿಂಗಳಲ್ಲಿ 2-3 ದಿನ ಮುಟ್ಟಿನ ರಜೆ ಪಡೆಯಬಹುದು, ಅವರು ಮೊದಲು ಹೈಕೋರ್ಟ್‌ಗೆ ಸಂಬಂಧಿಸಿದ ವೈದ್ಯಕೀಯ ಅಧಿಕಾರಿಯನ್ನು ಸಂಪರ್ಕಿಸಿ ರಜೆಗಾಗಿ ಶಿಫಾರಸು ಪಡೆಯಬಹುದು" ಎಂದು ಅಧಿಸೂಚನೆ ತಿಳಿಸಿದೆ.
ಋತುಚಕ್ರದ ರಜೆ ಪಡೆದ ಮಹಿಳಾ ಉದ್ಯೋಗಿಗಳ ಉಳಿದ ರಜೆಗೆ ಕತ್ತರಿ ಹಾಕುವಂತಿಲ್ಲ ಎಂದು ಅದು ಹೇಳಿದೆ.