ಪಹಲ್ಗಾಮ್ ದಾಳಿಗೆ ತುತ್ತಾದವರಿಗೆ ಬೆಂಬಲ: ಎಸ್ಐಎಲ್ಎಫ್ ಸಂಕಲ್ಪ

ಆಗಸ್ಟ್ 16 ರಂದು ನಡೆದ ಸಭೆಯಲ್ಲಿ, ಎಸ್ಐಎಲ್ಎಫ್ ಸದಸ್ಯರು ಮೃತ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಕುಟುಂಬಗಳಿಗೆ ಯಾವುದೇ ಸಹಾಯವನ್ನು ನೀಡಲು ನಿರ್ಧರಿಸಿದರು.
ಪಹಲ್ಗಾಮ್ ದಾಳಿಗೆ ತುತ್ತಾದವರಿಗೆ ಬೆಂಬಲ: ಎಸ್ಐಎಲ್ಎಫ್ ಸಂಕಲ್ಪ
Published on

ಕಳೆದ ಏಪ್ರಿಲ್ 22ರಂದು ನಡೆದಿದ್ದ ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಲು ಹಾಗೂ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ  ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸಲು ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (ಎಸ್‌ಐಎಲ್‌ಎಫ್‌) ಆಗಸ್ಟ್ 16ರಂದು ಪಹಲ್ಗಾಮ್‌ನಲ್ಲಿ ಸಭೆ ನಡೆಸಿತು.

Also Read
ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ: ಪಹಲ್ಗಾಮ್ ದಾಳಿಯಂತಹ ಘಟನೆ ನಿರ್ಲಕ್ಷಿಸಲಾಗದು ಎಂದ ಸುಪ್ರೀಂ ಕೋರ್ಟ್‌

ಸಭೆಯಲ್ಲಿ ಎಸ್‌ಐಎಲ್‌ಎಫ್‌ ಅಧ್ಯಕ್ಷ ಡಾ. ಲಲಿತ್ ಭಾಸಿನ್ , ಹಿರಿಯ ಉಪಾಧ್ಯಕ್ಷ ಅಲೋಕ್ ಕುಮಾರ್, ಉಪಾಧ್ಯಕ್ಷರಾದ ಸುಧೀರ್ ಕುಮಾರ್, ಶ್ವೇತಾ ಭಾರತಿ, ಮುಮ್ತಾಜ್ ಭಲ್ಲಾ, ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಯಾಕೇಶ್ ಆನಂದ್, ಅಮಿತಾಬ್ ಚತುರ್ವೇದಿ, ಖಜಾಂಚಿ ಪ್ರತಾಪ್ ಶಂಕರ್ ಹಾಗೂ ವಕೀಲ ಆದಿತ್ಯ ಭಾಸಿನ್ ಭಾಗವಹಿಸಿದ್ದರು.

Also Read
ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಕ್ಕೆ ಗಡಿಪಾರಾದ ಮಹಿಳೆ ಮರಳಿ ಕರೆತರುವಂತೆ ಕೇಂದ್ರಕ್ಕೆ ಕಾಶ್ಮೀರ ಹೈಕೋರ್ಟ್ ಆದೇಶ

ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು 'ಆಪರೇಷನ್ ಮಹಾದೇವ್' ಮೂಲಕ ನಿರ್ಮೂಲನೆ ಮಾಡಿದ ಭಾರತ ಸರ್ಕಾರ ಮತ್ತು ಸಶಸ್ತ್ರ ಪಡೆಗಳ ಕ್ರಮಗಳನ್ನು ಎಸ್‌ಐಎಲ್‌ಎಫ್  ಅಭಿನಂದಿಸಿತು.

Also Read
ಪಹಲ್ಗಾಮ್ ದಾಳಿ ಕುರಿತು ವಾಟ್ಸಾಪ್ ಸ್ಟೇಟಸ್: ಉಪನ್ಯಾಸಕಿಗೆ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು

ನಿರಾಯುಧ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಪ್ರವಾಸಿಗರ ಕುಟುಂಬಗಳಿಗೆ ಸದಸ್ಯರು ಸಂತಾಪ ಸೂಚಿಸಿದರು. ಅವರ ಕುಟುಂಬಗಳಿಗೆ ಯಾವುದೇ ಸಹಾಯ ನೀಡಲು ಸರ್ವಾನುಮತದ ನಿರ್ಧಾರ ಕೈಗೊಂಡರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಸ್‌ಐಎಲ್‌ಎಫ್‌ ತನ್ನ ಬೆಂಬಲ ಮುಂದುವರೆಸಲಿದೆ ಎಂದು ಸಂಘದ ಸದಸ್ಯರು ತಿಳಿಸಿದರು.

Kannada Bar & Bench
kannada.barandbench.com