ಕರ್ನಾಟಕ ಹೈಕೋರ್ಟ್‌ನ ಆರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆಯನ್ನು ಕಾಯಂಗೊಳಿಸಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ್ದ ಶಿಫಾರಸ್ಸನ್ನು ಅಂಗೀಕರಿಸಿರುವ ಕಾನೂನು ಇಲಾಖೆಯು ನ್ಯಾಯಮೂರ್ತಿಗಳಾದ ಎನ್ ಎಸ್ ಸಂಜಯ್ ಗೌಡ, ಜ್ಯೋತಿ ಮೂಲಿಮನಿ, ರಂಗಸ್ವಾಮಿ ನಟರಾಜ್, ಹೇಮಂತ್ ಚಂದನಗೌಡರ್, ಪ್ರದೀಪ್ ಸಿಂಗ್ ಯೆರೂರು ಹಾಗೂ ಎಂ ನಾಗಪ್ರಸನ್ನ ಅವರ ಸೇವೆ ಕಾಯಂಗೊಳಿಸಿದೆ.
ಈಚೆಗೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್ ಶ್ರೀನಿವಾಸ್ ಓಕ್ ಮತ್ತು ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದರು.