ಪಿಐಎಲ್‌ ಆಲಿಸಲು ₹10 ಲಕ್ಷ ಠೇವಣಿ ಇಡಲು ಮಹಾರಾಷ್ಟ್ರ ಬಿಜೆಪಿ ಶಾಸಕನಿಗೆ ಆದೇಶಿಸಿದ ಬಾಂಬೆ ಹೈಕೋರ್ಟ್‌ [ಚುಟುಕು]

Maharashtra Legislative Council

Maharashtra Legislative Council

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸ್ಪೀಕರ್‌ ಮತ್ತು ಉಪ ಸ್ಪೀಕರ್‌ ಆಯ್ಕೆ ನಿಯಮಗಳಲ್ಲಿ ಬದಲಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಲಿಸಲು ಷರತ್ತು ಪೂರ್ವದಲ್ಲಿ ₹10 ಲಕ್ಷ ಠೇವಣಿ ಇರಿಸುವಂತೆ ಬಿಜೆಪಿ ಶಾಸಕ ಗಿರೀಶ್‌ ಮಹಾಜನ್‌ ಅವರಿಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಶಾಸಕರ ನೀತಿಯ ನಿಯಮ 6 (ಸ್ಪೀಕರ್‌ ಚುನಾವಣೆ) ಮತ್ತು 7 (ಉಪ ಸ್ಪೀಕರ್‌ ಚುನಾವಣೆ) ವಿವೇಚನಾರಹಿತವಾಗಿದ್ದು ಮತ್ತು ಸಂವಿಧಾನವನ್ನು ಉಲ್ಲಂಘಿಸುತ್ತವೆ ಎಂದು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾ. ಎಂ ಎಸ್‌ ಕಾರ್ಣಿಕ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು. ರಾಜಕೀಯ ಹೋರಾಟಗಳನ್ನು ಏಕೆ ನ್ಯಾಯಾಲಯಕ್ಕೆ ಎಳೆ ತರಲಾಗಿದೆ ಎಂದು ಪೀಠ ಒಂದು ಹಂತದಲ್ಲಿ ಕೇಳಿತು. ಅಲ್ಲದೆ ಈ ವಿಷಯ ಹೇಗೆ ಪಿಐಎಲ್‌ ಆಗುತ್ತದೆ ಎಂದು ಪ್ರಶ್ನಿಸಿತು.

ಹೆಚ್ಚಿನ ವಿವರಗಳಿಗೆ 'ಬಾರ್‌ ಅಂಡ್‌ ಬೆಂಚ್' ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com