ಮುಡಾ ಪ್ರಕರಣ: ಮಾಜಿ ಆಯುಕ್ತ ದಿನೇಶ್ ಕುಮಾರ್‌ ಸೆ.26ರವರೆಗೆ ಇ ಡಿ ಕಸ್ಟಡಿಗೆ

ದಿನೇಶ್‌ ಕುಮಾರ್ ಅವರನ್ನು ಇ ಡಿ ಅಧಿಕಾರಿಗಳು ಮಂಗಳವಾರ (ಸೆ.16) ಬಂಧಿಸಿದ್ದರು. ಬುಧವಾರ ಸಂಜೆ 4.30ಕ್ಕೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನ ಭಟ್‌ ಅವರ ಮುಂದೆ ಮುಕ್ತ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.
ಮುಡಾ ಪ್ರಕರಣ: ಮಾಜಿ ಆಯುಕ್ತ ದಿನೇಶ್ ಕುಮಾರ್‌ ಸೆ.26ರವರೆಗೆ ಇ ಡಿ ಕಸ್ಟಡಿಗೆ
Published on

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಮುಡಾ ಆಯುಕ್ತರಾಗಿದ್ದ ಜಿ ಟಿ ದಿನೇಶ್ ಕುಮಾರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಂಭತ್ತು ದಿನಗಳ ಕಾಲ ಇ ಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ದಿನೇಶ್‌ ಕುಮಾರ್ ಅವರನ್ನು ಇ ಡಿ ಅಧಿಕಾರಿಗಳು ಮಂಗಳವಾರ (ಸೆ.16) ಬಂಧಿಸಿದ್ದರು. ಬುಧವಾರ ಸಂಜೆ 4.30ಕ್ಕೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನ ಭಟ್‌ ಅವರ ಮುಂದೆ ಮುಕ್ತ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.

ಈ ವೇಳೆ ಆರೋಪಿ ಪರ ವಕೀಲರು ಮಧ್ಯಂತರ ಜಾಮೀನಿಗೆ ಮನವಿ ಮಾಡಿದರು. ಆದರೆ, ಇದನ್ನು ಇ ಡಿ ಪರ ವಕೀಲ ಮಧುಕರ ಎಂ.ದೇಶಪಾಂಡೆ ತೀವ್ರವಾಗಿ ವಿರೋಧಿಸಿ, ಆರೋಪಿಯನ್ನು 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇ ಡಿ ಮನವಿಯನ್ನು ಭಾಗಶಃ ಮಾನ್ಯ ಮಾಡಿದ ನ್ಯಾಯಾಧೀಶರು ಆರೋಪಿ ದಿನೇಶ್‌ ಕುಮಾರ್ ಅವರನ್ನು ಇದೇ 26ರವರೆಗೆ ಇ ಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು.

Kannada Bar & Bench
kannada.barandbench.com