ಇಸ್ಲಾಂ, ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ: ಜಿತೇಂದ್ರ ತ್ಯಾಗಿಗೆ ಶ್ರೀನಗರ ನ್ಯಾಯಾಲಯ ಸಮನ್ಸ್ [ಚುಟುಕು]

ಇಸ್ಲಾಂ, ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ: ಜಿತೇಂದ್ರ ತ್ಯಾಗಿಗೆ ಶ್ರೀನಗರ ನ್ಯಾಯಾಲಯ ಸಮನ್ಸ್ [ಚುಟುಕು]

ಇಸ್ಲಾಂ ಹಾಗೂ ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಅಧ್ಯಕ್ಷ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ (ಈ ಹಿಂದಿನ ಹೆಸರು ವಸೀಂ ರಿಜ್ವಿ) ವಿರುದ್ಧ ಡ್ಯಾನಿಶ್ ಹಸನ್ ದಾರ್ ಎಂಬುವರು ಸಲ್ಲಿಸಿದ ದೂರನ್ನು ಶ್ರೀನಗರದ ಜೆಎಂಎಫ್‌ಸಿ ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿದೆ. ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುವಂತೆ ತ್ಯಾಗಿಗೆ ಸಮನ್ಸ್‌ ನೀಡಲಾಗಿದೆ. ಇಸ್ಲಾಂ ಎನ್ನುವುದು ಧರ್ಮವಲ್ಲ ಅದು ಪ್ರವಾದಿ ಮುಹಮ್ಮದ್ ಅವರಿಂದ ಸೃಷ್ಟಿಯಾದ ಭಯೋತ್ಪಾದಕ ಸಂಘಟನೆ ಎಂದು ತ್ಯಾಗಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.