ಹರಾಜಿನಲ್ಲಿ ಅತ್ಯಧಿಕ ಬಿಡ್ ಅನ್ನು ಸ್ವೀಕರಿಸಲೇಬೇಕು ಎನ್ನುವ ಕಟ್ಟಳೆಯನ್ನೇನು ಸರ್ಕಾರದ ಪ್ರಾಧಿಕಾರಗಳು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಪುನರುಚ್ಚರಿಸಿದೆ. ಹೆಚ್ಚಿನ ಬಿಡ್ ಅನ್ನು ಪುರಸ್ಕರಿಸಿರುವುದು ಸಾರ್ವಜನಿಕ ಹರಾಜು ನಡೆಸುವ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಅತ್ಯಧಿಕ ಬಿಡ್ ಸ್ವೀಕಾರವು ತಾತ್ಕಾಲಿಕವಾಗಿದ್ದು, ಈ ವಿಷಯದಲ್ಲಿ ಸಮರ್ಥ ನಿರ್ಣಯವನ್ನು ಕೈಗೊಳ್ಳುವ ಸ್ಥಾನದಲ್ಲಿರುವ ಸಕ್ಷಮ ಪ್ರಾಧಿಕಾರದ ದೃಢೀಕರಣಕ್ಕೆ ಅದು ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಅಭಯ್ ಎಸ್ ಓಕ್ ಅವರ ವಿಭಾಗೀಯ ಪೀಠವು ಹೇಳಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.